ಹಂತಕನಿಗೆ ೫೫ ವರ್ಷಗಳಾದರೂ ಆತನು ತನ್ನ ೧೬ ನೆಯ ವಯಸ್ಸಿನಲ್ಲಿ ಮಾಡಿದ ಹತ್ಯೆಗೆ ಶಿಕ್ಷೆ ನೀಡುವ ಬಗ್ಗೆ ಅಂತಿಮ ತೀರ್ಪು ಇನ್ನೂ ಬಾಕಿ !

ನವ ದೆಹಲಿ – ೧೯೮೧ ರ ಡಿಸೆಂಬರ್ ೧೧ ರಂದು ಉತ್ತರ ಪ್ರದೇಶದ ಬಹ್ರೇಚ್ ಜಿಲ್ಲೆಯಲ್ಲಿ ೧೬ ವರ್ಷದ ಸತ್ಯ ದೇವ ಎಂಬ ಬಾಲಕನು ಓರ್ವ ವ್ಯಕ್ತಿಯ ಹತ್ಯೆ ಮಾಡಿದ್ದನು. ಈ ಪ್ರಕರಣದಲ್ಲಿ ಆತನಿಗೆ ಬಹ್ರೇನಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು. ನಂತರ ಶಿಕ್ಷೆಯನ್ನು ಅಲಹಾಬಾದ್ ಉಚ್ಚ ನ್ಯಾಯಾಲಯವು ಎತ್ತಿಹಿಡಿದಿದೆ. ೧೯೮೬ ರ ‘ಜ್ಯುವೆನಾಯಿಲ್ ಸ್ಟೀಸ್ ಕಾಯ್ದೆ’ ಅಡಿಯಲ್ಲಿ ೧೬ ವರ್ಷಕ್ಕಿಂತ ಮೇಲ್ಪಟ್ಟವರನ್ನು ಅಪ್ರಾಪ್ತ ವಯಸ್ಕರಂತೆ ಪರಿಗಣಿಸುತ್ತಿರಲಿಲ್ಲ’, ಎಂದು ಉಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿತ್ತು. ನಂತರ ಶಿಕ್ಷೆಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು ‘ಈಗ ೫೫ ರ ಹರೆಯದ ಸತ್ಯದೇವ ಅವರ ಶಿಕ್ಷೆಯನ್ನು ‘ಜ್ಯುವೆನಾಯಿಲ್ ಬೋರ್ಡ್’ ನಿರ್ಧರಿಸಬೇಕು’ ಎಂದು ಹೇಳಿ ಈ ಪ್ರಕರಣವನ್ನು ‘ಜ್ಯುವೆನಾಯಿಲ್ ಬೋರ್ಡ್’ಗೆ ವರ್ಗಾಯಿಸಿದೆ. ‘ಈ ವ್ಯಕ್ತಿಯು ೧೯೮೧ ರಲ್ಲಿ ಹತ್ಯೆ ಮಾಡಿದ್ದನು. ಘಟನೆಯ ಸಮಯದಲ್ಲಿ ಅಪರಾದಿಯು ಅಪ್ರಾಪ್ತ ವಯಸ್ಕವನಾಗಿದ್ದನು. ಅದಕ್ಕಾಗಿಯೇ ಅವರಿಗೆ ಶಿಕ್ಷೆಯನ್ನು ಸಹ ‘ಜ್ಯುವೆನಾಯಿಲ್ ಬೋರ್ಡ್’ ನಿರ್ಧರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಈ ಪ್ರಕರಣದ ವಿಚಾರಣೆಯು ೨೦೧೮ ರಲ್ಲಿ ಪ್ರಾರಂಭವಾಗಿತ್ತು. ಆ ಸಮಯದಲ್ಲಿ ‘ಜುವೆನೈಲ್ ಜಸ್ಟೀಸ್ ಆಕ್ಟ್ ೨೦೦೦’ ಆ ಸಮಯದಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ತಿದ್ದುಪಡಿ ಮಾಡಿದ ಕಾನೂನು ಅಪ್ರಾಪ್ತ ವಯಸ್ಸನ್ನು ೧೮ ಎಂದು ನಿಗದಿಪಡಿಸಿತ್ತು. ಈ ಕಾನೂನಿನ ಪ್ರಕಾರ, ಅಪರಾಧದ ಸಮಯದಲ್ಲಿ ಆರೋಪಿಯ ವಯಸ್ಸು ೧೮ ವರ್ಷಕ್ಕಿಂತ ಕಡಿಮೆ ಇದ್ದರೆ, ಆತನ ವಿರುದ್ಧದ ಪ್ರಕರಣವನ್ನು ಜುವೆನೈಲ್ ಜಸ್ಟೀಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಹೇಳಿದೆ.