ತರುಣಿಯ ಮೇಲೆ ಬಲಾತ್ಕಾರ ಮಾಡಿದ ಕ್ರೈಸ್ತ ಪಾದ್ರಿಯ ಮೇಲೆ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ !

ಸಿಬಿಐನ ಮಾಜಿ ಸಂಚಾಲಕರಾದ ನಾಗೇಶ್ವರ ರಾವ್ ಇವರಿಂದ ಆಂಧ್ರಪ್ರದೇಶದ ಮುಖ್ಯಮಂತ್ರಿಗಳಿಗೆ ಪತ್ರ

  • ರಾಜ್ಯದ ಮುಖ್ಯಮಂತ್ರಿ ಕ್ರೈಸ್ತರಾಗಿರುವಾಗ ಅವರು ಏನಾದರೂ ಕ್ರಮಕೈಗೊಂಡರೆ ಆಶ್ವರ್ಯ ಎನ್ನಬಹುದು !
  • ನಾಗೇಶ್ವರ ರಾವ್ ಇವರ ಪತ್ರಮುಖೇನ ನೀಡಿದ ಬೇಡಿಕೆಗೆ ಏನಾದರೂ ಬೆಲೆ ಸಿಗಬಹುದೇ ? ಎಂಬ ಪ್ರಶ್ನೆಯು ಹಿಂದೂಗಳಲ್ಲಿ ಮೂಡಿದರೆ ಅದರಲ್ಲಿ ಆಶ್ಚರ್ಯವೇನು !
ಎಡಗಡೆಯಿಂದ ಸಿಬಿಐನ ಮಾಜಿ ಸಂಚಾಲಕರಾದ ಎಮ್. ನಾಗೇಶ್ವರ ರಾವ್ ಮತ್ತು ಮಲ್ಲೆಮ್ ದೇವಸಹಯಮ್

ಅಮರಾವತಿ (ಆಂಧ್ರಪ್ರದೇಶ) – ಸಿಬಿಐನ ಮಾಜಿ ಸಂಚಾಲಕರಾದ ಎಮ್. ನಾಗೇಶ್ವರ ರಾವ್ ಇವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನಮೋಹನ ರೆಡ್ಡಿ ಇವರಿಗೆ ಪತ್ರ ಬರೆದು ತಿರುಪತಿಯ ಬಡಕುಟುಂಬದ ಓರ್ವ ೨೦ ವರ್ಷದ ತರುಣಿಯ ಮೇಲೆ ಬಲಾತ್ಕಾರ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ಮಲ್ಲೆಮ್ ದೇವಸಹಯಮ್ ಎಂಬ ಕ್ರೈಸ್ತ ಪಾದ್ರಿಯ ಮೇಲೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ತಿಳಿಸಿದ್ದಾರೆ. ಈ ಪೀಡಿತ ತರುಣಿಯು ಈ ಪಾದ್ರಿಯ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು.

೧. ನಾಗೇಶ್ವರ ರಾವ್ ಇವರು ತಮ್ಮ ಪತ್ರದಲ್ಲಿ, ‘ಆರೋಪಿಯು ಕ್ರೈಸ್ತ ಮಿಶನರಿಯವರಾಗಿದ್ದಾರೆ ಮತ್ತು ಮತಾಂತರದ ಕಾರ್ಯದಲ್ಲಿರುವುದರಿಂದ ಅಲ್ಲಿ ಅವರ ಪ್ರಭಾವವಿದೆ. ಅವರು ಪೀಡಿತೆಗೆ ಜೀವಬೆದರಿಕೆಯನ್ನು ನೀಡಿದ್ದರು. ಇದರೊಂದಿಗೆ ರಾಜಕೀಯ ಒತ್ತಡದಿಂದ ಪೊಲೀಸರು ಅವರ ಮೇಲೆ ಕ್ರಮಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಪೊಲೀಸರು ಅಪರಾಧವನ್ನು ದಾಖಲಿಸಲು ೯ ದಿನಗಳನ್ನು ತೆಗೆದುಕೊಂಡರು. ಇದರಿಂದ ಪಾದ್ರಿಯ ಪ್ರಭಾವವು ಗಮನಕ್ಕೆ ಬರುತ್ತದೆ’, ಎಂದು ಪತ್ರದಲ್ಲಿ ಬರೆದಿದ್ದಾರೆ.

೨. ನಾಗೇಶ್ವರ ರಾವ್ ಇವರು ತಮ್ಮ ಪತ್ರದಲ್ಲಿ, ಪೀಡಿತ ತರುಣಿಗೆ ನಷ್ಟಪರಿಹಾರವನ್ನು ನೀಡಬೇಕು ಹಾಗೂ ತಿರುಪತಿಯ ಪೊಲೀಸ್ ಅಧೀಕ್ಷಕರಾದ ಅವುಲಾ ರಮೇಶ ರೆಡ್ಡಿ ಇವರ ಮೇಲೆ ಶಿಸ್ತು ಭಂಗದ ಕುರಿತು ಕ್ರಮಕೈಗೊಳ್ಳಬೇಕೆಂದು ಸಹ ಬೇಡಿಕೆಯನ್ನಿಟ್ಟಿದ್ದಾರೆ.

೩. ತಿರುಪತಿಯ ಪೊಲೀಸರು ನಾಗೇಶ್ವರ ರಾವ್ ಇವರ ಈ ಸಂದರ್ಭದಲ್ಲಿ ಟ್ವಿಟ್‌ಗೆ ಉತ್ತರಿಸುವಾಗ, ‘ನಿಮ್ಮ ದೂರನ್ನು ಪರಿಹರಿಸಲಿಕ್ಕಾಗಿ ಮುಂದೆ ಕಳುಹಿಸಲಾಗಿದೆ’, ಎಂದು ಹೇಳಿದ್ದಾರೆ. ಇದಕ್ಕೆ ರಾವ್ ಇವರು ಪುನಃ ಟ್ವಟ್ ಮಾಡುತ್ತಾ, ಇದು ಕೇವಲ ಔಪಚಾರಿಕ ಉತ್ತರವಾಗಿದೆ ನಾನು ದೂರುದಾರನಲ್ಲ., ದೂರನ್ನು ಪೀಡಿತ ತರುಣಿಯು ದಾಖಲಿಸಿದ್ದಾಳೆ’, ಎಂದು ಉತ್ತರಿಸಿದ್ದಾರೆ.