ಲಡಾಖ್‌ನಲ್ಲಿ ಚೀನಾದ ಸೈನಿಕನನ್ನು ಸೆರೆಹಿಡಿದ ಭಾರತೀಯ ಸೇನೆ

ಲೇಹ್ (ಲಡಾಖ್) – ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ (ಪಿಎಲ್‌ಎ) ಯೋಧನನ್ನು ಇಲ್ಲಿನ ಡೆಮ್‌ಚೋಕ್ ಪ್ರದೇಶದಲ್ಲಿ ಗಡಿಯಲ್ಲಿ ಭಾರತೀಯ ಸೈನ್ಯವು ಸೆರೆಹಿಡಿದಿದೆ. ಆತನ ಹೆಸರು ವಾಂಗ್ ಯಾ ಲಾಂಗ್ ಎಂದಿದೆ. ಆತ ಜೆಜಿಯಾಂಗ್ ಪ್ರಾಂತ್ಯದ ನಿವಾಸಿಯಾಗಿದ್ದಾನೆ. ಆತನ ಬಳಿ ಸಿವಿಲ್ ಮತ್ತು ಮಿಲಿಟರಿ ದಾಖಲೆಗಳು ಪತ್ತೆಯಾಗಿವೆ. ಆತ ಶಸ್ತ್ರಾಸ್ತ್ರಗಳ ದುರುಸ್ತಿಯ(ರಿಪೇರಿಯ) ಕೆಲಸ ಮಾಡುತ್ತಾನೆ. ‘ಈ ಸೈನಿಕನು ಬೇಹುಗಾರಿಕೆ ನಡೆಸುತ್ತಿದ್ದನೇನು?’, ಎಂಬ ಬಗ್ಗೆ ಭಾರತದಿಂದ ತನಿಖೆಯಾದ ನಂತರ ಭಾರತವು ಸೈನಿಕನನ್ನು ಚೀನಾಕ್ಕೆ ಒಪ್ಪಿಸಲಿದೆ. (ಈ ಹಿಂದೆ ಚೀನಾವು ಭಾರತೀಯ ಸೇನಾ ಸಿಬ್ಬಂದಿಯನ್ನು ಸೆರೆಹಿಡಿದ ನಂತರ ಬಿಡುಗಡೆಗೊಳಿಸಲು ಬಹಳ ನಾಟಕವಾಡಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಭಾರತವು ಸೌಜನ್ಯವನ್ನು ತೋರಿಸದೆ ಕಠಿಣ ನೀತಿಯನ್ನು ಅನುಸರಿಸಬೇಕು ! – ಸಂಪಾದಕ)