ಸುಳ್ಳು ಹಾಗೂ ಅಯೋಗ್ಯ ವಾರ್ತೆ ಪ್ರಸಾರ ಮಾಡಿದ ‘ಆಜ್ ತಕ್’, ‘ಝೀ ನ್ಯೂಸ್’, ‘ಇಂಡಿಯಾ ಟಿವಿ’ ಹಾಗೂ ‘ನ್ಯೂಸ್ ೨೪’ ಇವುಗಳಿಗೆ ಕ್ಷಮೆಯಾಚಿಸುವಂತೆ ಎನ್.ಬಿ.ಎಸ್.ಎ. ನಿಂದ ಆದೇಶ.

ನಟ ಸುಶಾಂತ್ ಸಿಂಗ್ ರಜಪೂತ ಇವರ ಆತ್ಮಹತ್ಯೆ ಪ್ರಕರಣ

ಅನೇಕ ಸುದ್ದಿ ವಾಹಿನಿಗಳು ಹಿಂದೂ ಸಾಧು-ಸಂತರ ಬಗ್ಗೆ ಅಪಪ್ರಚಾರದ ವಾರ್ತೆಯನ್ನು ತೋರಿಸಿದ್ದವು; ಆದರೆ ಈ ಬಗ್ಗೆ ಅವರ ವಿರುದ್ಧ ಇಂತಹ ಯಾವುದೇ ಕ್ರಮ ಕೈಗೊಂಡಿಲ್ಲ

ನವ ದೆಹಲಿ – ನಟ ಸುಶಾಂತ್ ಸಿಂಗ ರಜಪೂತ ಅವರ ಆತ್ಮಹತ್ಯೆ ಪ್ರಕರಣದಲ್ಲಿ ‘ಆಜ್ ತಕ್’ ಈ ಹಿಂದಿ ವಾರ್ತಾವಾಹಿನಿಯು ಸುಳ್ಳು ವಾರ್ತೆಯನ್ನು ಪ್ರಕಟಿಸಿದ್ದರಿಂದ ‘ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಸ್ಟೆಂಡರ್ಡ ಅಸೊಸಿಯೇಶನ್’ ಇದುವ(ಎನ್.ಬಿ.ಎಸ್.ಎ.ಯು) ಅಕ್ಟೋಬರ್ ೨೭ ರ ರಾತ್ರಿ ೮ ಗಂಟೆಗೆ ವಾರ್ತಾವಾಹಿನಿಗಳಿಗೆ ಕ್ಷಮೆಯಾಚಿಸುವಂತೆ ಹಾಗೆಯೇ ೧ ಲಕ್ಷ ರೂಪಾಯಿ ದಂಡ ಕಟ್ಟುವಂತೆ ಆದೇಶಿಸಿದೆ.

‘ಆಜ್ ತಕ್’ ಈ ವಾರ್ತಾವಾಹಿನಿಯೊಂದಿಗೆ ‘ಇಂಡಿಯಾ ಟಿವಿ’, ‘ಝೀ ನ್ಯೂಸ್’ ಹಾಗೂ ‘ನ್ಯೂಸ್ ೨೪’ ಈ ಹಿಂದಿ ವಾರ್ತಾವಾಹಿನಿಗಳು ಸುಶಾಂತ ಸಿಂಗ ರಜಪೂತ ಅವರ ಆತ್ಮಹತ್ಯೆಯ ಪ್ರಕರಣದ ಬಗ್ಗೆ ವರದಿ ಮಾಡುವಾಗ ಪತ್ರಿಕೋದ್ಯಮದ ತತ್ತ್ವಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕ್ಷಮೆಯಾಚಿಸಬೇಕೆಂದು ಹೇಳಲಾಗಿದೆ. ‘ಝೀ ನ್ಯೂಸ್’ ಹಾಗೂ ‘ಇಂಡಿಯಾ ಟಿವಿ’ ಅಕ್ಟೋಬರ್ ೨೭ ರಂದು, ಹಾಗೂ ‘ನ್ಯೂಸ್ ೨೪’ ಅಕ್ಟೋಬರ್ ೨೯ ರಂದು ಕ್ಷಮೆಯಾಚಿಸಲಿವೆ.