ನವರಾತ್ರಿ ಮಂಟಪವನ್ನು ಕಪ್ಪು ಬಟ್ಟೆಯಿಂದ ಮುಚ್ಚುವುದಕ್ಕೆ ಭಾಜಪದ ವಿರೋಧ, ಆದೇಶ ಹಿಂಪಡೆದ ಆಡಳಿತ

ಮಂಟಪವನ್ನು ಮುಚ್ಚಲು ಆದೇಶಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು !

ರಾಂಚಿ (ಜಾರ್ಖಂಡ್) – ರಾಂಚಿ ರೈಲ್ವೆ ನಿಲ್ದಾಣದ ಬಳಿಯಿರುವ ನವರಾತ್ರಿ ಮಂಡಳಿಯ ಮಂಟಪದಲ್ಲಿ ಚಿತ್ರಗಳನ್ನು ನೋಡಲು ಹೆಚ್ಚಿನ ಸಂಖ್ಯೆಯ ಜನರು ಸೇರುತ್ತಾರೆ ಹಾಗೂ ಇದರಿಂದ ಸಾಮಾಜಿಕ ಅಂತರದ ನಿಯಮಗಳ ಉಲ್ಲಂಘನೆಯಾಗುತ್ತದೆ, ಆದ್ದರಿಂದ ಆಡಳಿತವು ಕಪ್ಪುಬಟ್ಟೆ ಹಾಕಿ ಮಂಟಪವನ್ನು ಮುಚ್ಚುವಂತೆ ಆದೇಶ ನೀಡಿದ ನಂತರ ಮಂಡಳಿಯವರು ಮಂಟಪವನ್ನು ಮುಚ್ಚಿದ್ದರು. ಸ್ಥಳೀಯ ಬಿಜೆಪಿ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ ಇವರಿಗೆ ಈ ವಿಷಯ ತಿಳಿದಾಗ ಅವರು ಮಂಟಪದ ಚಿತ್ರವನ್ನು ತೆಗೆದು ಅದನ್ನು ಟ್ವಿಟರ್‌ನಲ್ಲಿ ಪ್ರಸಾರ ಮಾಡಿದರು ಹಾಗೂ ರಾಜ್ಯದ ಜಾರ್ಖಂಡ್ ಮುಕ್ತಿ ಮೋರ್ಚಾ ಸರ್ಕಾರವನ್ನು ಟೀಕಿಸಿದರು. ನಂತರ ಆಡಳಿತವು ಒಂದು ಗಂಟೆಯೊಳಗೆ ಮಂಟಪದಿಂದ ಕಪ್ಪು ಬಟ್ಟೆಯನ್ನು ತೆಗೆಯುವಂತೆ ಆದೇಶಿಸಿತು.