ಮುಖ್ಯ ಅರ್ಚಕರ ‘ವಿನಂತಿ’ಯ ಮೇರೆಗೆ ಮೊಸಳೆ ಮತ್ತೆ ಕೆರೆಯನ್ನು ಪ್ರವೇಶಿಸಿತು
ಕಾಸರಗೋಡು (ಕೇರಳ) – ಉತ್ತರ ಕೇರಳದ ಕಾಸರಗೋಡಿನಲ್ಲಿರುವ ಶ್ರೀ ಅನಂತ ಪದ್ಮನಾಭ ದೇವಾಲಯದ ಆವರಣದಲ್ಲಿರುವ ಕೊಳದಲ್ಲಿ ಒಂದು ದೊಡ್ಡ ಮೊಸಳೆ ವಾಸಿಸುತ್ತಿದೆ. ಈ ಮೊಸಳೆಯು ಸಸ್ಯಹಾರಿ ಪ್ರಾಣಿಯಾಗಿದೆ. ‘ಬಾಬಿಯಾ’ ಹೆಸರಿನ ಈ ಮೊಸಳೆ ದೇವಾಲಯದ ಕೊಳದಲ್ಲಿ ೭೦ ವರ್ಷಗಳಿಂದ ವಾಸಿಸುತ್ತಿದೆ. ಅರ್ಚಕರ ಪ್ರಕಾರ, ಬಾಬಿಯಾ ಇದೇ ಮೊದಲ ಬಾರಿ ದೇವಾಲಯವನ್ನು ಪ್ರವೇಶಿಸಿದ್ದು, ಅರ್ಚಕರ ‘ಕೋರಿಕೆ’ಯ ನಂತರ ಅದು ಅಂಗಳವನ್ನು ಬಿಟ್ಟು ಮತ್ತೆ ಕೆರೆಗೆ ಹೋಯಿತು.
೧. ಅಕ್ಟೋಬರ್ ೨೦ ರ ಸಂಜೆ ಮೊಸಳೆ ದೇವಾಲಯದ ಆವರಣಕ್ಕೆ ಬಂದು ಅಲ್ಲಿ ಸ್ವಲ್ಪ ಸಮಯ ಕಳೆಯಿತು. ಮುಖ್ಯ ಅರ್ಚಕ ಚಂದ್ರ ಪ್ರಕಾಶ್ ನಂಬಿಸನ್ ತನ್ನ ಶಾಶ್ವತ ವಾಸಸ್ಥಾನಕ್ಕೆ ಮರಳಲು ಕೇಳಿದಾಗ ಅದು ಹಿಂದಿರುಗಿತು.
೨. ದೇವಾಲಯದ ಕೊಳಕ್ಕೆ ಬಾಬಿಯಾ ಯಾವಾಗ ಮತ್ತು ಹೇಗೆ ಬಂತು ಮತ್ತು ಅದಕ್ಕೆ ಯಾರು ಆ ಹೆಸರನ್ನು ನೀಡಿದರು ? ಎಂಬುವುದು ಯಾರಿಗೂ ತಿಳಿದಿಲ್ಲ. ಈ ಮೊಸಳೆಯಲ್ಲಿ ಇತರ ಕಾಡು ಪ್ರಾಣಿಗಳಲ್ಲಿ ಕಂಡುಬರುವ ಹಿಂಸಾತ್ಮಕ ನಡವಳಿಕೆ ಕಂಡುಬಂದಿಲ್ಲ. ಬಾಬಿಯಾ ಮೇಲೆ ಹೆಚ್ಚು ಖರ್ಚು ವೆಚ್ಚ ಮಾಡಬೇಕಿಲ್ಲ ಏಕೆಂದರೆ ದೇವತೆಯ ಪೂಜೆಯ ನಂತರ ನೀಡುವ ಪ್ರಸಾದವೇ ಅದರ ಆಹಾರವಾಗಿದೆ.
೩. ಅರ್ಚಕರು ದಿನಕ್ಕೆ ಎರಡು ಬಾರಿ ಬಾಬಿಯಾಗೆ ಆಹಾರವನ್ನು ನೀಡುತ್ತಾರೆ. ಕೆಲವೊಮ್ಮೆ ಅವರು ಅನ್ನದ ಮುದ್ದೆಯನ್ನು ಅದರ ಬಾಯಿಗೆ ಹಾಕುತ್ತಾರೆ. ಅರ್ಚಕನೊಂದಿಗೆ ಬಾಬಿಯಾದ ವಿಶಿಷ್ಟ ಸ್ನೇಹವಿದೆ. ದೇವಾಲಯದ ಕೊಳದಲ್ಲಿ ಸಾಕಷ್ಟು ಮೀನುಗಳಿದ್ದರೂ ಅದು ಎಂದಿಗೂ ಮೀನುಗಳ ಮೇಲೆ ದಾಳಿ ಮಾಡುವುದಿಲ್ಲ ಹಾಗೂ ಮೀನುಗಳನ್ನು ತಿನ್ನುವುದಿಲ್ಲ. ಇದು ಸಂಪೂರ್ಣ ಸಸ್ಯಾಹಾರಿ ಮೊಸಳೆಯಾಗಿದೆ.