ಜಂತರ್ ಮಂತರ್ (ನವ ದೆಹಲಿ)ನಲ್ಲಿ ‘ಲಕ್ಷ್ಮಿ ಬಾಂಬ್’ ಚಲನಚಿತ್ರದ ವಿರುದ್ಧ ‘ಯುನೈಟೆಡ್ ಹಿಂದೂ ಫ್ರಂಟ್’ ಆಂದೋಲನ

ಚಲನಚಿತ್ರದ ಹೆಸರು ಹಾಗೂ ‘ಲವ್ ಜಿಹಾದ್’ನ ಪ್ರಸಂಗಗಳನ್ನು ಬದಲಾಯಿಸದಿದ್ದರೆ ಪ್ರತಿಭಟನೆ ತೀವ್ರಗೊಳಿಸುವ ಎಚ್ಚರಿಕೆ

ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳು ಘಾಸಿಗೊಂಡಾಗ ಅವರಿಗೆ ಈ ರೀತಿಯಲ್ಲಿ ಆಂದೋಲನಗಳನ್ನು ನಡೆಸಬೇಕಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ !

ನವದೆಹಲಿ – ‘ಯುನೈಟೆಡ್ ಹಿಂದೂ ಫ್ರಂಟ್’ನ ಕಾರ್ಯಕರ್ತರು ಅಕ್ಟೋಬರ್ ೨೩ ರಂದು ನವ ದೆಹಲಿಯ ಜಂತರ್ ಮಂತರ್‌ನಲ್ಲಿ ‘ಲಕ್ಷ್ಮಿ ಬಾಂಬ್’ ಚಲನಚಿತ್ರದ ವಿರುದ್ಧ ಪ್ರತಿಭಟನೆ ನಡೆಸಿದರು. ಅವರು ಈ ಚಿತ್ರದ ಹೆಸರು ಮತ್ತು ‘ಲವ್ ಜಿಹಾದ್’ನ ಪ್ರಸಂಗವನ್ನು ಅಳಿಸಬೇಕೆಂದು ಒತ್ತಾಯಿಸಿದರು. ‘ಇದನ್ನು ಬದಲಾಯಿಸದಿದ್ದರೆ, ಬೃಹತ್ ಪ್ರಮಾಣದಲ್ಲಿ ವಿರೋಧ ನಡೆಸಲಾಗುವುದು’, ಎಂದು ಎಚ್ಚರಿಕೆ ನೀಡಿದರು.

ಈ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಜೈ ಭಗವಾನ್ ಗೋಯಲ್ ಅವರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು.