ಹಿಂದೂ ಜನಜಾಗೃತಿ ಸಮಿತಿಯ 18 ನೇ ವರ್ಧಂತ್ಯುತ್ಸವ ನಿಮಿತ್ತ ಆನ್‌ಲೈನ್ ವಿಶೇಷ ಧರ್ಮಸಂವಾದ !

ಹಿಂದೂ ಧರ್ಮದ ಮೇಲಿನ ಎಲ್ಲ ಆಘಾತಗಳಿಗೆ ಹಿಂದೂ ರಾಷ್ಟ್ರದ ಸ್ಥಾಪನೆಯೇ ಏಕೈಕ ಉತ್ತರವಾಗಿದೆ ! – ಸದ್ಗುರು (ಡಾ.) ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ

ಸಂತರ ಶುಭ ಹಸ್ತದಿಂದ ‘ಆಪತ್ಕಾಲದಲ್ಲಿ ಜೀವರಕ್ಷಣೆ ’ ಈ ಗ್ರಂಥ ಮಾಲಿಕೆಯ ೨ ಗ್ರಂಥಗಳ ಪ್ರಕಾಶನ !

ಧರ್ಮಶಿಕ್ಷಣ ಹಾಗೂ ಧರ್ಮಾಚರಣೆಯ ಅಭಾವದಿಂದಾಗಿ ದೇಶದಲ್ಲಿ ಹಿಂದೂ ಸಮಾಜ ಬಹುಸಂಖ್ಯಾತರಾಗಿದ್ದೂ ನಿರಂತರವಾಗಿ ಪೆಟ್ಟು ತಿನ್ನುತ್ತಿತ್ತು. ಇಂತಹ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಪ್ರೇರಣಾಸ್ಥಾನ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಮಾರ್ಗದರ್ಶನಕ್ಕನುಸಾರ ಹಿಂದೂಗಳಿಗಾಗಿ ವಿವಿಧ ಮಾಧ್ಯಮದಿಂದ ಧರ್ಮಶಿಕ್ಷಣ ನೀಡಲು ಆರಂಭವಾಯಿತು. ಇದರಿಂದ ಹಿಂದೂಗಳು ಧರ್ಮಾಚರಣಿಯಾಗುತ್ತಿದ್ದಾರೆ. ಅನೇಕ ಹಿಂದುತ್ವನಿಷ್ಠ ಸಂಘಟನೆಗಳು ಗೋರಕ್ಷಣೆ, ನುಸುಳುವಿಕೆ, ಲವ್ ಜಿಹಾದ್, ಮತಾಂತರ, ಭಯೋತ್ಪಾದನೆ, ನಕ್ಸಲ್‌ವಾದ, ಪಾಕಿಸ್ತಾನ-ಬಾಂಗ್ಲಾದೇಶದಲ್ಲಿ ದೌರ್ಜನ್ಯಕ್ಕೊಳಗಾದ ಹಿಂದೂ ಇತ್ಯಾದಿ ಅನೇಕ ವಿಷಯಗಳ ಮೇಲೆ ಹೋರಾಟ ನಡೆಸುತ್ತಿದೆ. ಹಿಂದೂ ಧರ್ಮದ ಮೇಲಿನ ಈ ಎಲ್ಲ ಆಘಾತಗಳ ಮೇಲೆ ‘ಹಿಂದೂ ರಾಷ್ಟ್ರದ ಸ್ಥಾಪನೆ’ ಇದೊಂದೇ ಏಕೈಕ ಉತ್ತರವಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು 2012 ರಿಂದ 2019 ಈ ಕಾಲಾವಧಿಯಲ್ಲಿ ಸಮಿತಿಯು ಪ್ರತಿವರ್ಷ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ಗಳ ಆಯೋಜನೆಯನ್ನು ಮಾಡಿತು. ಇದರಿಂದ ಹಿಂದೆ ಅಸಾಧ್ಯವೆಂದು ಅನಿಸುತ್ತಿದ್ದ ಹಿಂದೂಸಂಘಟನೆ ಈಗ ಸಾಧ್ಯವಾಗುತ್ತಿದೆ. ದೇಶ-ವಿದೇಶಗಳಲ್ಲಿಯ ನೂರಾರು ಹಿಂದುತ್ವನಿಷ್ಠ ಸಂಘಟನೆಗಳು ಹಿಂದೂ ರಾಷ್ಟ್ರದ ಧ್ಯೇಯದಿಂದ ರಾಷ್ಟ್ರೀಯ ಮಟ್ಟದಲ್ಲಿ ಸಂಘಟಿತ ಹಾಗೂ ಕೃತಿಶೀಲರಾಗುತ್ತಿದ್ದಾರೆ. ಇವೆಲ್ಲವು ಈಶ್ವರ ಹಾಗೂ ಸಂತರ ಕೃಪೆಯಿಂದ ಸಾಧ್ಯವಾಗುತ್ತಿದೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರು ಕೃತಜ್ಞತಾರೂಪದಲ್ಲಿ ಉದ್ಗರಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿಯ 18 ನೇ ವರ್ಧಂತ್ಯುತ್ಸವದ ನಿಮಿತ್ತ ಆಯೋಜಿಸಲಾಗಿದ್ದ ‘ಎಕ ಕದಮ್ ಹಿಂದೂ ರಾಷ್ಟ್ರ ಕಿ ಓರ್…’ ಈ ವಿಶೇಷ ಧರ್ಮಸಂವಾದದಲ್ಲಿ ಮಾತನಾಡುತ್ತಿದ್ದರು. ಈ ಸಂವಾದ ‘ಯು-ಟ್ಯೂಬ್’ ಹಾಗೂ ‘ಫೇಸ್‌ಬುಕ್’ ನ ಮಾಧ್ಯಮಗಳಿಂದ 27,893 ಜನರು ಪ್ರತ್ಯಕ್ಷವಾಗಿ ನೋಡಿದರೆ 67,885 ಜನರ ತನಕ ತಲುಪಿದೆ.

ಶ್ರೀ. ರಮೇಶ ಶಿಂದೆ

ಹಿಂದೂ ಜನಜಾಗೃತಿ ಸಮಿತಿಯ ಯಶಸ್ವಿ ನಡಿಗೆಯ ಕುರಿತು ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆಯವರು ಮಾತನಾಡುತ್ತಾ, ‘ಈ ಹಿಂದೆ ಯಾರೂ ನಾಟಕಗಳು, ಚಲನಚಿತ್ರಗಳು, ಜಾಹೀರಾತುಗಳ ಮೂಲಕ ಹಿಂದೂಗಳ ಶ್ರದ್ಧಾಸ್ಥಾನಗಳನ್ನು ವಿಡಂಬನೆ ಮಾಡುತ್ತಿದ್ದರು; ಆದರೆ ಸಮಿತಿಯು ಅದರ ವಿರುದ್ಧ ಸತತವಾಗಿ ಮತ್ತು ನಿರಂತರವಾಗಿ ಹೋರಾಡುತ್ತಿದ್ದರಿಂದ ೪೦೦ ಕ್ಕೂ ಹೆಚ್ಚು ವಿಡಂಬನೆಗಳನ್ನು ನಿಲ್ಲಿಸುವಲ್ಲಿ ಸಮಿತಿಗೆ ಗೆಲವು ಸಿಕ್ಕಿದೆ. ಇದರ ಪರಿಣಾಮವಾಗಿ, ದೇಶಾದ್ಯಂತದ ಹಿಂದೂ ಸಮುದಾಯವೂ ಜಾಗೃತಗೊಂಡಿದ್ದು, ಹಿಂದೂ ಧರ್ಮದ ಮೇಲಿನ ಆಘಾತದ ವಿರುದ್ಧ ರಾಷ್ಟ್ರಮಟ್ಟದಲ್ಲಿ ಸಂಘಟಿತವಾಗಿ ಧ್ವನಿ ಎತ್ತುತ್ತಿದೆ.’ ಸಮಿತಿಯ ‘ಮಹಾರಾಷ್ಟ್ರ ಮತ್ತು ಛತ್ತೀಸಗಡ’ದ ಸಂಘಟಕರಾದ ಶ್ರೀ. ಸುನೀಲ ಘನವಟರವರು ಮಾತನಾಡುತ್ತಾ, ಸರ್ಕಾರವು ಪ್ರತಿಯೊಂದು ವಲಯವನ್ನು ಖಾಸಗೀಕರಣಗೊಳಿಸುತ್ತಿರುವಾಗ, ದೇಶಾದ್ಯಂತ ಕೇವಲ ಹಿಂದೂ ದೇವಾಲಯಗಳನ್ನು ಮಾತ್ರ ಏಕೆ ಖಾಸಗೀಕರಣಗೊಳಿಸಲಾಗುತ್ತಿದೆ ? ಸಮಿತಿಯು ಮಹಾರಾಷ್ಟ್ರದ ನಾಲ್ಕುವರೆ ಲಕ್ಷ ದೇವಾಲಯಗಳ ಸರ್ಕಾರಿಕರಣದ ಸಂಚನ್ನು ಹೋರಾಡುವ ಮೂಲಕ ತಡೆದಿದೆ. ಎಲ್ಲಿಯವರೆಗೆ ಎಲ್ಲ ದೇವಾಲಯಗಳು ಭಕ್ತರ ವಶಕ್ಕೆ ಬರುವುದಿಲ್ಲವೋ ಅಲ್ಲಿಯವರೆಗೆ ಈ ಹೋರಾಟ ಮುಂದುವರಿಯಲಿದೆ. ಈ ಸಮಯದಲ್ಲಿ ಸುರಾಜ್ಯ ಅಭಿಯಾನದ ಸಮನ್ವಯಕರಾದ ನ್ಯಾಯವಾದಿ ನಿಲೇಶ ಸಾಂಗೋಲಕರ ಇವರು ಸಾಮಾಜಿಕ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿರುವ ಪಿಡುಗುಗಳ ವಿರುದ್ಧ ಹಿಂದೂ ಜನಜಾಗೃತಿ ಸಮಿತಿ ನಡೆಸಿದ ಹೋರಾಟದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.