ನವರಾತ್ರಿಯನ್ನು ಅಶ್ಲೀಲವಾಗಿ ಅವಮಾನಿಸಿದ್ದಕ್ಕಾಗಿ ‘ಇರೋಸ್ ನೌ’ ವಿರುದ್ಧ ಅಪರಾಧಗಳು ದಾಖಲು

ಸರಕಾರವೇ ಮುಂದಾಳತ್ವವಹಿಸಿ ಇಂತಹವರ ವಿರುದ್ಧ ಕೂಡಲೇ ಅಪರಾಧವನ್ನು ದಾಖಲಿಸಿ ಸಾಮಾಜಿಕ ಶಾಂತಿಭಂಗವಾಗಿದ್ದರಿಂದ ಕ್ರಮ ತೆಗೆದುಕೊಳ್ಳುವುದು ಅಪೇಕ್ಷಿತವಿದೆ !

ಮುಂಬಯಿ – ಚಲನಚಿತ್ರಗಳನ್ನು ನಿರ್ಮಿಸುವ ಸಂಸ್ಥೆ ‘ಇರೋಸ್ ನೌ’ ನವರಾತ್ರಿಯ ನಿಮಿತ್ತ ಸಾಮಾಜಿಕ ಮಾಧ್ಯಮಗಳಲ್ಲಿ ೩ ಅಶ್ಲೀಲ ಚಿತ್ರಗಳನ್ನು ಬಿತ್ತರಿಸಿ ನವರಾತ್ರಿಯ ಅವಮಾನ ಮಾಡಿದ್ದರಿಂದ ಅದರ ವಿರುದ್ಧ ಪ್ರಕರಣ ದಾಖಲಿಸಿದೆ. ಧರ್ಮಪ್ರೇಮಿಗಳಿಂದ ಪ್ರಚಂಡವಾಗಿ ವಿರೋಧ ವ್ಯಕ್ತವಾದನಂತರ ‘ಇರೋಸ್ ನೌ’ ಕ್ಷಮೆಯಾಚಿಸಿತ್ತು.

೧. ಮುಂಬಯಿಯ ಬಿಜೆಪಿ ವಕ್ತಾರ ಸುರೇಶ್ ನಾಖವಾ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ‘ಇರೋಸ್ ನೌ’ ಹಾಗೂ ನಿರ್ಮಾಪಕರಾದ ಕ್ರಿಶಿಕಾ ಲುಲ್ಲಾರ ವಿರುದ್ಧ ದೂರು ದಾಖಲಿಸಲಾಗಿದ್ದು, ಅದರ ಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿದೆ.

೨. ನ್ಯಾಯವಾದಿ ಚಾಂದನಿ ಷಾ ಇವರು ಐಟಿ ಕಾಯ್ದೆಯ ಸೆಕ್ಷನ್ ೬೭ (ಎ), ಭಾ.ದಂ.ಸಂ. ಕಲಂ ೧೫೩ (ಎ), ೨೯೫ (ಎ), ೫೦೪, ೫೦೫ ಮತ್ತು ೫೦೬ ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.