‘ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ವೇಶ್ಯೆಯೆಂದು ಪರಿಗಣಿಸಲಾಗುತ್ತದೆ !’(ಅಂತೆ)

ತಮಿಳುನಾಡಿನ ಪೆರಿಯಾರವಾದಿ ಸಂಸದ ಥೋಲ್ ತಿರುಮಾವಲವನ್ ಅವರ ಖೇದಕರ ಹೇಳಿಕೆ !

  • ಹಿಂದೂ ಧರ್ಮದ ವಿರುದ್ಧ ಸುಳ್ಳು ಆರೋಪ ಮಾಡುವುದು ಎಂದರೆ ಇಂದಿನ ಪ್ರಗತಿ(ಅಧೋಗತಿ)ಪರ, ಸುಧಾರಣಾವಾದಿ ಮತ್ತು ಪೆರಿಯಾರವಾದಿ ಎಂದು ತಿಳಿಯಲಾಗುತ್ತದೆ. ಇದರಿಂದಲೇ ತಿರುಮಾವಲವನ್ ತಮ್ಮ ಹೇಳಿಕೆಯಿಂದ ದ್ವೇಷಭರಿತ ಮಾನಸಿಕತೆಯನ್ನು ತೋರಿಸಿದ್ದಾರೆ !
  • ಹಿಂದೂಗಳು ಸಹಿಷ್ಣುರಾಗಿರುವುದರಿಂದ ಹಿಂದೂ ಧರ್ಮದ ಬಗ್ಗೆ ಇಂತಹ ಹೇಳಿಕೆಗಳನ್ನು ನೀಡಲಾಗುತ್ತದೆ; ಆದರೆ ಇತರ ಧರ್ಮಗಳ ಬಗ್ಗೆ ಮಾತನಾಡಲು ಯಾರೂ ಧೈರ್ಯ ಮಾಡುವುದಿಲ್ಲ; ಏಕೆಂದರೆ ಮತಾಂಧರು ನೇರವಾಗಿ ಶಿರಚ್ಛೇದ ಮಾಡುತ್ತಾರೆ !
ಸಾಂಸದ ಥೋಲ್ ತಿರುಮಾವಲವನ್

ಚೆನ್ನೈ (ತಮಿಳುನಾಡು) – ಇಲ್ಲಿಯ ದಲಿತರ ಪಕ್ಷವೆಂದು ಪರಿಗಣಿಸಲ್ಪಟ್ಟ ವಿದುಥಲೈ ಚಿರುಥಾಯಗಲ ಕಾಚಿ(ವಿಸಿಕೆ) ಪಕ್ಷದ ಮುಖಂಡ ಹಾಗೂ ಸಾಂಸದ ಥೋಲ್ ತಿರುಮಾವಲವನ್ ಅವರು ಪೆರಿಯಾರವಾದಿ ಸಮೂಹದಿಂದ ಆಯೋಜಿಸಲಾಗಿದ್ದ ಆನ್‌ಲೈನ್ ಚರ್ಚಾಕೂಟದಲ್ಲಿ ಹಿಂದೂ ಧರ್ಮಗ್ರಂಥ ಮನುಸ್ಮೃತಿಯ ಆಧಾರವನ್ನು ನೀಡುತ್ತಾ ‘ಹಿಂದೂ ಧರ್ಮದಲ್ಲಿ ವಿಶೇಷವಾಗಿ ಬ್ರಾಹ್ಮಣರಲ್ಲಿ ಮಹಿಳೆಯರನ್ನು ವೇಶ್ಯೆರೆಂದು ಪರಿಗಣಿಸಲಾಗುತ್ತದೆ. ಹಿಂದೂಧರ್ಮದಲ್ಲಿ ಮಹಿಳೆಯರ ಸ್ಥಾನ ಪುರುಷರಿಗಿಂತ ಕೀಳಾಗಿದೆ’, ಎಂದು ಖೇದಕರ ಹೇಳಿಕೆ ನೀಡಿದ್ದಾರೆ. ‘ಪೆರಿಯಾರ್ ಟಿವಿ’ ಹೆಸರಿನ ‘ಯೂಟ್ಯೂಬ್ ಚಾನೆಲ್’ನಲ್ಲಿ ಚರ್ಚಾಕೂಟವನ್ನು ಪ್ರಸಾರ ಮಾಡಲಾಗಿತ್ತು. ಇದರ ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾದಾಗಿನಿಂದ ತಿರುಮಾವಲವನ್ ಅವರ ವಿರುದ್ಧ ವ್ಯಾಪಕವಾಗಿ ಟೀಕೆಯಾಗುತ್ತಿದೆ.