ಬಾಡಮೆರ್ (ರಾಜಸ್ಥಾನ)ದಲ್ಲಿ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಇಂತಹವರ ಮೇಲೆ ಶೀಘ್ರಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಗಲ್ಲುಶಿಕ್ಷೆ ವಿಧಿಸಲು ಸರ್ಕಾರ ಪ್ರಯತ್ನಿಸಬೇಕು !

ಬಾಡಮೆರ (ರಾಜಸ್ಥಾನ) – ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗಾಗಿ ಬೇಹುಗಾರಿಕೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಶನ ಲಾಲ ಭೀಲ ಎಂಬ ೩೫ ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ರೋಶನ ಲಾಲನು ಅನೇಕ ದಿನಗಳಿಂದ ಗಡಿಯಲ್ಲಿರುವ ಭಾರತೀಯ ಸೇನೆಯ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ನೀಡುತ್ತಿದ್ದನು.

ರೋಶನ್ ಲಾಲನ ಕೆಲವು ಸಂಬಂಧಿಕರು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ. ಕಳೆದ ಬಾರಿ ಆತ ಅವರನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ಹೋದಾಗ, ಐಎಸ್‌ಐಯು ಅವನನ್ನು ಬೇಹುಗಾರಿಕೆ ಮಾಡುವಂತೆ ತಮ್ಮ ಬಲೆಯಲ್ಲಿ ಸಿಲುಕಿಸಿದ್ದರು.