ಅನುಮತಿಯಿಲ್ಲದೆ ಗಡ್ಡ ಬೆಳೆಸಿದ್ದರಿಂದ ಪೊಲೀಸ್ ಉಪನಿರೀಕ್ಷಕ ಅಮಾನತು

‘ಇಂತಹ ಚಿಕ್ಕ ನಿಯಮಗಳನ್ನು ಪಾಲಿಸದವರು ನಾಳೆ ಸರ್ಕಾರದ ನಿಯಮಗಳಿಗೆ ಬದಲಾಗಿ ಧರ್ಮಕ್ಕನುಸಾರ ವರ್ತಿಸಲು ಪ್ರಾರಂಭಿಸಿದರೆ, ಅವರು ಹಿಂದೂಗಳನ್ನು ರಕ್ಷಿಸುತ್ತಾರೆಯೇ’ ಎಂಬಂತಹ ಪ್ರಶ್ನೆ ಹಿಂದೂಗಳಲ್ಲಿ ನಿರ್ಮಾಣವಾದರೆ ಆಶ್ಚರ್ಯವೇನು ?

ಬಾಗಪತ್ (ಉತ್ತರ ಪ್ರದೇಶ) – ಬಾಗ್‌ಪತ್‌ನ ರಾಮಲಾ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಇಂತಸಾರ್ ಅಲಿ ಅನುಮತಿಯಿಲ್ಲದೆ ಗಡ್ಡವನ್ನು ಬೆಳೆಸಿದ್ದರು. ಇದರಿಂದಾಗಿ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಅಮಾನತುಗೊಳಿಸಿದ್ದಾರೆ. ಈ ಹಿಂದೆ ಗಡ್ಡವನ್ನು ಬೆಳೆಸುವ ಬಗ್ಗೆ ಅಲಿಯನ್ನು ಮೇಲಧಿಕಾರಿಗಳಿಂದ ಅನುಮತಿ ಪಡೆಯಲು ಹೇಳಲಾಗಿತ್ತು; ಆದರೆ ಆತ ಅನುಮತಿ ಪಡೆಯದೇ ಗಡ್ಡವನ್ನು ಬೆಳೆಸಿದನು. ಇಂತಸಾರ ಅಲಿ, ನಾನು ಕಳೆದ ಕೆಲವು ವರ್ಷಗಳಿಂದ ಅನುಮತಿ ಕೇಳುತ್ತಿದ್ದೇನೆ. ನನ್ನ ಅರ್ಜಿಯಲ್ಲಿ ಯಾವುದೇ ಉತ್ತರ ಬಂದಿಲ್ಲ ಎಂದು ಹೇಳಿದರು.

ಪೊಲೀಸ್ ಅಧೀಕ್ಷಕ ಅಭಿಷೇಕ್ ಸಿಂಹ್ ಇವರು, ಪೊಲೀಸರ ನಿಯಮಗಳ ಪ್ರಕಾರ, ಸಿಖ್ಖರಿಗೆ ಮಾತ್ರ ಅನುಮತಿಯಿಲ್ಲದೆ ಗಡ್ಡ ಬೆಳೆಸಲು ಅವಕಾಶವಿದೆ ಎಂದು ಹೇಳಿದ್ದಾರೆ. ಅಲಿಯವರು ಗಡ್ಡ ಇಟ್ಟಿರುವ ಬಗ್ಗೆ ಹಲವಾರು ದೂರುಗಳು ಬಂದನಂತರ ಮೂರು ಬಾರಿ ಎಚ್ಚರಿಕೆ ನೀಡಲಾಗಿತ್ತು; ಆದರೆ ಗಡ್ಡ ತೆಗೆಯದೇ ಇದ್ದರಿಂದ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.