‘ಪಬ್‌ಜಿ’ ಆಟದಲ್ಲಿ ಮೂರ್ತಿಪೂಜೆಯನ್ನು ಸೇರಿಸಿದ್ದರಿಂದ ಕುವೈತ್ ಮತ್ತು ಸೌದಿ ಅರೇಬಿಯಾದ ಮುಸ್ಲಿಂ ಧರ್ಮಗುರುಗಳ ವಿರೋಧ

‘ಪಬ್ ಜಿ’ ಈ ‘ವಿಡಿಯೋ’ ಗೇಮ್‌ನ ಹೊಸ ಆವೃತ್ತಿಯಲ್ಲಿ ಮೂರ್ತಿಪೂಜೆಯನ್ನು ಸೇರಿಸಿದ್ದರಿಂದ ಕುವೈತ್ ಮತ್ತು ಸೌದಿ ಅರೇಬಿಯಾದಲ್ಲಿ ಧಾರ್ಮಿಕ ವಿವಾದಕ್ಕೆ ಕಾರಣವಾಗಿದೆ. ಇಸ್ಲಾಮಿನಲ್ಲಿ ಮೂರ್ತಿಪೂಜೆಗೆ ಮಾನ್ಯತೆ ಇಲ್ಲದ್ದರಿಂದ ಸ್ಥಳೀಯ ಧರ್ಮಗುರುಗಳು ಇದನ್ನು ವಿರೋಧಿಸಿದ್ದಾರೆ.

ಪಾಕಿಸ್ತಾನದಲ್ಲಿ ೩ ಅಪ್ರಾಪ್ತ ಹಿಂದೂ ಹುಡುಗಿಯರನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರ

ಪಾಕ್‌ನ ಸಿಂಧ ಪ್ರಾಂತ್ಯದಲ್ಲಿ ೩ ಅಪ್ರಾಪ್ತ ಹಿಂದೂ ಹುಡುಗಿಯರನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸುವುದರ ಜೊತೆಗೆ ಅವರನ್ನು ಬಲವಂತವಾಗಿ ಮುಸ್ಲಿಂ ಯುವಕರನ್ನು ಮದುವೆಯಾಗುವಂತೆ ಮಾಡಿಸಿದ ಘಟನೆ ನಡೆದಿದೆ. ನ್ಯಾಯವಾದಿ ರಾಹತ್ ಆಸ್ಟಿನ್ ಇವರು ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ಬಿಸಿನೀರಿಗೆ ಉಪ್ಪು ಸೇರಿಸಿ ಬಾಯಿ ಮುಕ್ಕುಳಿಸಿದರೆ ಕೊರೋನದ ಅಪಾಯ ಕಡಿಮೆಯಾಗುತ್ತದೆ ! – ಬ್ರಿಟನ್‌ನಲ್ಲಿನ ಸಂಶೋಧನೆಯ ನಿಷ್ಕರ್ಷ

ಈ ವಿಜ್ಞಾನಿಗಳು ಕೊರೋನಾ ಪೀಡಿತ ೧೨ ರೋಗಿಗಳ ಮೇಲೆ ೧೨ ದಿನಗಳ ಕಾಲ ಈ ಪ್ರಯೋಗವನ್ನು ಮಾಡಿದರು. ಈ ರೋಗಿಗಳಿಗೆ ೧೨ ದಿನಗಳ ಕಾಲ ಬಿಸಿ ನೀರಿನಲ್ಲಿ ಉಪ್ಪು ಹಾಕಿ ಬಾಯಿ ಮುಕ್ಕಳಿಸಲು ಹೇಳಲಾಗಿತ್ತು. ೧೨ ದಿನಗಳ ನಂತರ ಅವರ ಮೂಗಿನ ದ್ರವದ ಮಾದರಿಗಳನ್ನು ತೆಗೆದುಕೊಂಡಾಗ ಅದರಲ್ಲಿ ಕರೋನಾ ಸೋಂಕಿನ ಲಕ್ಷಣಗಳು ತೀರಾ ಕಡಿಮೆ ಎಂದು ಕಂಡುಬಂದಿದೆ.

ಅಮೇರಿಕಾದಲ್ಲಿಯ ಹಿಂಸಾಚಾರದಿಂದಾಗಿ ೪೦ ನಗರಗಳಲ್ಲಿ ನಿಷೇಧಾಜ್ಞೆ

ಇಲ್ಲಿ ಪೊಲೀಸರ ಹಲ್ಲೆಯಿಂದ ಕಪ್ಪು ವರ್ಣೀಯ ವ್ಯಕ್ತಿಯೊಬ್ಬ ಮೃತಪಟ್ಟ ನಂತರ ಅಮೇರಿಕದಾದ್ಯಂತ ಹಿಂಸಾಚಾರ ಭುಗಿಲೆದ್ದಿತು. ಅಮೇರಿಕಾದ ಸುಮಾರು ೪೦ ನಗರಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿವಾಸವಾದ ಶ್ವೇತಭವನದ ಹೊರಗೆ ಕೂಡ ಹೆಚ್ಚಿನ ಸಂಖ್ಯೆಯ ಜನರು ಹಿಂಸಾಚಾರಕ್ಕೆ ಪ್ರಯತ್ನಿಸಿದರು.

ಪಾಕಿಸ್ತಾನ ಸರ್ಕಾರದ ಕೂಗಾಟ

ಒಂದೆಡೆ ಜಗತ್ತು ಕೊಕರೋನದ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ, ಮತ್ತೊಂದೆಡೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಬಿಜೆಪಿ ಹಿಂದುತ್ವದ ನೀತಿಯನ್ನು ಮುನ್ನಡೆಸಲು ಪ್ರಯತ್ನಿಸುತ್ತಿವೆ. ಬಾಬರಿ ಮಸೀದಿಯ ಸ್ಥಳದಲ್ಲಿ ಮಂದಿರ ನಿರ್ಮಾಣ, ಇದು ಈ ದಿಕ್ಕಿನಲ್ಲಿ ಮಾಡುತ್ತಿರುವ ಪ್ರಯತ್ನದ ಒಂದು ಭಾಗವಾಗಿದೆ. ಇದನ್ನು ಪಾಕಿಸ್ತಾನ ಸರ್ಕಾರ ತೀವ್ರವಾಗಿ ಖಂಡಿಸುತ್ತದೆ,

ಯುದ್ಧಕ್ಕಾಗಿ ಸನ್ನದ್ಧರಾಗಿರಿ – ಚೀನಾದ ಸೈನ್ಯಕ್ಕೆ ಕ್ಸಿ ಜಿನ್‌ಪಿಂಗ್ ಆದೇಶ

ಭೂಮಿಯ ಬಗ್ಗೆ ಭಾರತದೊಂದಿಗೆ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇದ್ದಕ್ಕಿದ್ದಂತೆ ತನ್ನ ಸೈನಿಕರಿಗೆ ಯುದ್ಧಕ್ಕೆ ಸನ್ನದ್ಧರಾಗಿರುವಂತೆ ಆದೇಶಿಸಿದ್ದಾರೆ. ಅವರು ‘ಸೆಂಟ್ರಲ್ ಮಿಲಿಟರಿ ಕಮಿಶನ್’ನ ಸಭೆಯಲ್ಲಿ ಮಾತನಾಡುತ್ತಿದ್ದರು. ಜಿನಪಿಂಗ್ ತಮ್ಮ ಮಾತನ್ನು ಮುಂದುವರೆಸುತ್ತ, ‘ಅತೀ ಬಿಕ್ಕಟ್ಟಿನ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳನ್ನು ಗಣನೆಗೆ ತೆಗೆದುಕೊಂಡು ಯುದ್ಧಕ್ಕೆ ಸಿದ್ಧರಾಗಬೇಕಾಗಿದೆ” ಎಂದು ಅವರು ಹೇಳಿದರು.

‘ಭಾರತ ನಮ್ಮ ವಿರುದ್ಧ ಏನಾದರೂ ಮಾಡಲು ಧೈರ್ಯ ಮಾಡಿದರೆ, ನಾವು ತಕ್ಕಪ್ರತ್ಯುತ್ತರಿಸುತ್ತೇವೆ(ಯಂತೆ) !’ – ಪಾಕ್‌ನ ದರ್ಪ

ಪಾಕ್‌ಗೆ ಕಿವಿ ಹಿಂಡಿದ ಮಾಲ್ಡೀವ್ಸ್, ಪಾಕಿಸ್ತಾನದ ಈ ಆರೋಪಗಳನ್ನು ಮಾಲ್ಡೀವ್ಸ್ ಬಲವಾಗಿ ಖಂಡಿಸಿದೆ. ‘ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ದೇಶವಾಗಿದ್ದು, ಭಾರತದಲ್ಲಿ ೨೦ ಕೋಟಿಕ್ಕಿಂತಲೂ ಹೆಚ್ಚು ಮುಸಲ್ಮಾನರು ವಾಸಿಸುತ್ತಿದ್ದಾರೆ. ಆದ್ದರಿಂದ ಭಾರತದ ವಿರುದ್ಧ ಇಂತಹ ಆರೋಪ ಮಾಡುವುದು ಅಯೋಗ್ಯವಾಗಿದೆ. ಇಂತಹ ಆರೋಪ ಹೊರಿಸುವುದು, ಇದು ದಕ್ಷಿಣ ಏಷ್ಯಾ ಪ್ರದೇಶದ ಧಾರ್ಮಿಕ ಏಕತೆಗೆ ಮಾರಕವಾಗಿದೆ.

ಚೀನಾದಿಂದ ಭಾರತದ ಸಮೀಪದ ಮಾಲ್ದೀವ್‌ನಲ್ಲಿ ಕೃತಕ ದ್ವೀಪದ ನಿರ್ಮಾಣ !

ಮಾಲ್ದೀವ್ ಹಿಂದೂ ಮಹಾಸಾಗರದಿಂದ ಬರುವ ನೌಕೆಯ ಮಾರ್ಗವಾಗಿದೆ. ಈ ಮಾರ್ಗದ ಮೂಲಕ ಅಬ್ಜಗಟ್ಟಲೆ ರೂಪಾಯಿ ವ್ಯವಹಾರವು ಮಾಡಲಾಗುತ್ತದೆ. ಆದ್ದರಿಂದ ಚೀನಾಗೆ ಮಾಲದೀವ್ ಮಹತ್ವದ್ದಾಗಿ ಕಾಣಿಸುತ್ತದೆ, ಅದೇರೀತಿ ಕೇವಲ ೨೦ ರಿಂದ ೨೫ ನಿಮಿಷಗಳಲ್ಲಿ ಚೀನಾದ ಯುದ್ಧ ವಿಮಾನಗಳು ಭಾರತಕ್ಕೆ ಬರಬಹುದು.

ಪಾಕಿಸ್ತಾನದ ಸಿಂಧ್‌ನಲ್ಲಿ ಮತಾಂಧರಿಂದ ಹಿಂದೂ ಮನೆಗಳಿಗೆ ಬೆಂಕಿ ಹಚ್ಚಿ ಹಿಂದೂಗಳಿಗೆ ಥಳಿತ

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಮತಾಂಧರು ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿದ ಮತ್ತು ಪಂಜಾಬ್ ಪ್ರಾಂತ್ಯದಲ್ಲಿ ಹಿಂದೂ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆಯನ್ನು ಮಾನವ ಹಕ್ಕುಗಳ ಕಾರ್ಯಕರ್ತ ನ್ಯಾಯವಾದಿ ರಹತ್ ಆಸ್ಟಿನ್ ಬಹಿರಂಗ ಪಡಿಸಿದ್ದಾರೆ.

ಅಮೇರಿಕಾದಿಂದ ಭಯೋತ್ಪಾದಕ ಇಬ್ರಾಹಿಮ್ ಜುಬೇರ್ ಭಾರತದ ವಶಕ್ಕೆ !

ಜುಬೇರ್‌ನನ್ನು ಭಯೋತ್ಪಾದಕನಲ್ಲ ಇಂಜಿನಿಯರ್ ಆಗಿದ್ದಾನೆ ಎಂದಿತ್ತು ಭಾರತದ ಕಮ್ಯುನಿಸ್ಟ್ ವಿಚಾರದ ಮಾಧ್ಯಮಗಳು ಇದುವೇ ಕಮ್ಯುನಿಸ್ಟ್ ಮಾಧ್ಯಮದ ನಿಜವಾದ ರೂಪ ! ಇವೇ ಮಾಧ್ಯಮಗಳು ಹಿಂದೂಗಳನ್ನು ’ಕೇಸರಿ ಭಯೋತ್ಪಾದಕರು’ ಎಂದು ಕರೆಯಲು ಮಂಚೂಣಿಯಲ್ಲಿರುತ್ತವೆ !