ಯುದ್ಧಕ್ಕಾಗಿ ಸನ್ನದ್ಧರಾಗಿರಿ – ಚೀನಾದ ಸೈನ್ಯಕ್ಕೆ ಕ್ಸಿ ಜಿನ್‌ಪಿಂಗ್ ಆದೇಶ

  • ಚೀನಾದ ರಾಕ್ಷಸಿ ವಿಸ್ತರಣೆಯನ್ನು ಎಂದಾದರೂ ಕಡಿವಾಣ ಹಾಕಬೇಕು. ಇದಕ್ಕಾಗಿ ಭಾರತ ಸರ್ಕಾರ ಅತ್ಯಂತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಲ್ಲಾ ದೇಶಭಕ್ತರು ಸರ್ಕಾರದ ಬೆಂಬಲವಾಗಿ ನಿಲ್ಲುವರು !

  • ಭಾರತೀಯರ ವಿರುದ್ಧ ಸತತವಾಗಿ ಕಿರುಕುಳ ನೀಡುವ, ಭಾರತದ ಯಾವುದೇ ಭಾಗವನ್ನು ತನ್ನದೇ ಎಂದು ಹೇಳಿಕೊಳ್ಳುವ ಹಾಗೂ ಭಾರತದೊಂದಿಗೆ ಯುದ್ಧ ಮಾಡಲು ನೋಡುತ್ತಿರುವ ಚೀನಾದ ವಸ್ತುಗಳ ಮೇಲೆ ಭಾರತೀಯರು ಬಹಿಷ್ಕಾರ ಹಾಕಿ ಚೀನಾಗೆ ಪಾಠ ಕಲಿಸಬೇಕು !

ಬೀಜಿಂಗ್ (ಚೀನಾ) – ಭೂಮಿಯ ಬಗ್ಗೆ ಭಾರತದೊಂದಿಗೆ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇದ್ದಕ್ಕಿದ್ದಂತೆ ತನ್ನ ಸೈನಿಕರಿಗೆ ಯುದ್ಧಕ್ಕೆ ಸನ್ನದ್ಧರಾಗಿರುವಂತೆ ಆದೇಶಿಸಿದ್ದಾರೆ. ಅವರು ‘ಸೆಂಟ್ರಲ್ ಮಿಲಿಟರಿ ಕಮಿಶನ್’ನ ಸಭೆಯಲ್ಲಿ ಮಾತನಾಡುತ್ತಿದ್ದರು. ಜಿನಪಿಂಗ್ ತಮ್ಮ ಮಾತನ್ನು ಮುಂದುವರೆಸುತ್ತ, ‘ಅತೀ ಬಿಕ್ಕಟ್ಟಿನ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳನ್ನು ಗಣನೆಗೆ ತೆಗೆದುಕೊಂಡು ಯುದ್ಧಕ್ಕೆ ಸಿದ್ಧರಾಗಬೇಕಾಗಿದೆ” ಎಂದು ಅವರು ಹೇಳಿದರು. ಇದಕ್ಕಾಗಿ ಸೈನಿಕರ ತರಬೇತಿಯನ್ನು ಸಮಗ್ರ ರೀತಿಯಲ್ಲಿ ವಿಸ್ತರಿಸಬೇಕು. ಸೈನಿಕರ ತರಬೇತಿಯನ್ನು ಹೆಚ್ಚಿಸಿ. ಯಾವುದೇ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಸಿದ್ಧರಾಗಿರಬೇಕು, ಅದೇರೀತಿ ದೇಶದ ಸಾರ್ವಭೌಮತ್ವವನ್ನು ನಾವು ಕಾಪಾಡಿಕೊಳ್ಳಬೇಕು.”

ಚೀನಾದಿಂದ ಲಡಾಖನಲ್ಲಿ ೪ ಅತ್ಯಾಧುನಿಕ ಯುದ್ಧ ವಿಮಾನಗಳ ನೇಮಕ

ಲಡಾಖ್ ಬಳಿ ಚೀನಾ ವಿಮಾನ ನಿಲ್ದಾಣವನ್ನು ಸ್ಥಾಪಿಸಿದೆ ಎಂದು ಉಪಗ್ರಹ ಚಿತ್ರಗಳಿಂದ ಬಹಿರಂಗವಾಗಿದೆ. ಈ sಛಾಯಾಚಿತ್ರಗಳಲ್ಲಿ ಚೀನಾವು ತನ್ನ ವಿಮಾನ ನಿಲ್ದಾಣದಲ್ಲಿ ೪ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ನೇಮಿಸಿದೆ ಎಂಬುದು ಕಂಡು ಬರುತ್ತದೆ. ೨-ಎಂಜಿನ್ ಹೊಂದಿರುವ ಈ ವಿಮಾನಗಳು ಹೆಚ್ಚಿನ ಎತ್ತರದಲ್ಲಿ ಹಾರಲು, ಅದೇ ರೀತಿ ೧,೫೦೦ ಕಿ.ಮೀ ದೂರವನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿವೆ. ಲಡಾಖ್‌ನಲ್ಲಿ ನಿಯಂತ್ರಣ ರೇಖೆ (ಎಲ್‌ಒಸಿ) ಉದ್ದಕ್ಕೂ ಭಾರತ ತನ್ನ ಸೈನಿಕರನ್ನು ಹೆಚ್ಚಿಸಿದೆ. ಭಾರತದಲ್ಲಿ ಸಿಲುಕಿರುವ ಚೀನಾದ ಪ್ರಜೆಗಳನ್ನು ಚೀನಾ ಕರೆದುಕೊಂಡು ಹೋಗಲಿದೆ ಭಾರತದಲ್ಲಿ ಸಿಲುಕಿರುವ ತನ್ನ ನಾಗರಿಕರನ್ನು ಮರಳಿ ಕಳುಹಿಸುವಂತೆ ಚೀನಾ ತನ್ನ ರಾಯಭಾರಿ ಕಚೇರಿಗೆ ನೋಟಿಸ್ ಕಳುಹಿಸಿದೆ

ಗಡಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಯವರು ಮೂರು ಸೈನ್ಯಪಡೆಯ ಮುಖ್ಯಸ್ಥರೊಂದಿಗೆ ಸಭೆ ನಡೆಸಿದರು

ಗಡಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಸೈನ್ಯ ಪಡೆಗಳ ಮುಖ್ಯಸ್ಥರೊಂದಿಗೆ ಉನ್ನತ ಮಟ್ಟದ ಸಭೆ ಕರೆದರು. ಸಭೆಯಲ್ಲಿ ಮೂರು ಸೇನೆಗಳ ಮುಖ್ಯಸ್ಥರು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್ ಮತ್ತು ದೇಶದ ರಕ್ಷಣಾ ಮುಖ್ಯಸ್ಥ ಬಿಪಿನ್ ರಾವತ್ ಉಪಸ್ಥಿತರಿದ್ದರು. ಈ ಹಿಂದೆ ವಿದೇಶಾಂಗ ಕಾರ್ಯದರ್ಶಿಯೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗಿತ್ತು.