‘ಪಬ್‌ಜಿ’ ಆಟದಲ್ಲಿ ಮೂರ್ತಿಪೂಜೆಯನ್ನು ಸೇರಿಸಿದ್ದರಿಂದ ಕುವೈತ್ ಮತ್ತು ಸೌದಿ ಅರೇಬಿಯಾದ ಮುಸ್ಲಿಂ ಧರ್ಮಗುರುಗಳ ವಿರೋಧ

  • ಎಷ್ಟು ಹಿಂದೂಗಳು ತಮ್ಮ ಧರ್ಮದ ವಿರುದ್ಧ ಏನಾದರೂ ನಡೆಯುತ್ತಿರುವಾಗ ಇಂತಹ ಜಾಗರೂಕತೆಯನ್ನು ತೋರಿಸುತ್ತಾರೆ ?

  • ಎಲ್ಲಿ ಕ್ರೀಡೆಗಳಲ್ಲಿ ತಮ್ಮ ಧರ್ಮದ ವಿರುದ್ಧ ಏನನ್ನೂ ಸಹಿಸದ ಜಾಗರೂಕ ಮುಸಲ್ಮಾನರು ಮತ್ತು ಎಲ್ಲಿ ಕ್ರೀಡೆ, ನಾಟಕಗಳು, ಚಲನಚಿತ್ರಗಳು, ಕಲೆಗಳು ಇತ್ಯಾದಿಗಳಲ್ಲಿ ದೇವತೆಗಳ ಆಗುವ ವಿಡಂಬನೆಯನ್ನು ನೋಡಿ ನಗುತ್ತ ಮತ್ತು ಚಪ್ಪಾಳೆಯೊಂದಿಗೆ ಪ್ರತಿಕ್ರಿಯಿಸುವ ಧರ್ಮಾಭಿಮಾನಶೂನ್ಯ ಹಿಂದೂಗಳು !

ರಿಯಾದ್ (ಸೌದಿ ಅರೇಬಿಯಾ) – ‘ಪಬ್ ಜಿ’ ಈ ‘ವಿಡಿಯೋ’ ಗೇಮ್‌ನ ಹೊಸ ಆವೃತ್ತಿಯಲ್ಲಿ ಮೂರ್ತಿಪೂಜೆಯನ್ನು ಸೇರಿಸಿದ್ದರಿಂದ ಕುವೈತ್ ಮತ್ತು ಸೌದಿ ಅರೇಬಿಯಾದಲ್ಲಿ ಧಾರ್ಮಿಕ ವಿವಾದಕ್ಕೆ ಕಾರಣವಾಗಿದೆ. ಇಸ್ಲಾಮಿನಲ್ಲಿ ಮೂರ್ತಿಪೂಜೆಗೆ ಮಾನ್ಯತೆ ಇಲ್ಲದ್ದರಿಂದ ಸ್ಥಳೀಯ ಧರ್ಮಗುರುಗಳು ಇದನ್ನು ವಿರೋಧಿಸಿದ್ದಾರೆ.

೧. ‘ಪಬ್ ಜಿ’ಯು ‘ಮಿಸ್ಟೀರಿಯಸ್ ಜಂಗಲ್ ಮೋಡ್’ ಎಂಬ ಹೊಸ ಆವೃತ್ತಿಯನ್ನು(ವರ್ಜನ್) ಬಿಡುಗಡೆ ಮಾಡಿದೆ. ಇದರಲ್ಲಿ ಆಟಗಾರರು ಮೂರ್ತಿಯನ್ನು ಪೂಜಿಸುವುದನ್ನು ತೋರಿಸಿದ್ದಾರೆ. ಈ ಕಾರಣದಿಂದಾಗಿ ಕುವೈತ್‌ನ ಮುಸಲ್ಮಾನ ಧರ್ಮಗುರುಗಳು ಇದರ ಬಗ್ಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಅವರು ‘ಈ ‘ರೀತಿಯ ಇಸ್ಲಾಮಿಕ್ ವಿರೋಧಿ ಸಿದ್ಧಾಂತಗಳಿಂದ ಮಕ್ಕಳನ್ನು ರಕ್ಷಿಸಿ’, ಎಂದು ಸರಕಾರಕ್ಕೆ ಆಗ್ರಹಿಸಿದೆ.

೨. ಈ ಆಟದಲ್ಲಿ ‘ಟೊಟೆಮ್ಸ್’ ಎಂಬ ಶಕ್ತಿಶಾಲಿ ಮೂರ್ತಿ ಇದೆ ಹಾಗೂ ಆಟಗಾರನು ಅದನ್ನು ಪೂಜಿಸಿದ ನಂತರ ಪುನಃ ಬಲಶಾಲಿ ಆಗುತ್ತಾನೆ, ಅದೇ ರೀತಿ ಆತನಿಗೆ ‘ಎನರ್ಜಿ ಡ್ರಿಂಕ್’ ಮತ್ತು ‘ಹೆಲ್ತ್ ಕಿಟ್’ ನಂತಹ ಅನೇಕ ವಸ್ತುಗಳು ಸಿಗುತ್ತದೆ’, ಎಂದು ತೋರಿಸಲಾಗಿದೆ. ಪಬ್ ಜಿ ಆಡುವ ಅನೇಕ ಮುಸಲ್ಮಾನರು ಈ ಹೊಸ ಆವೃತ್ತಿಯನ್ನು ವಿರೋಧಿಸುತ್ತಿದ್ದಾರೆ. ಅನೇಕ ಜನರು ಈ ಆಟದಲ್ಲಿ ‘ಟೋಟೆಮ್ಸ’ ಮೂರ್ತಿಯನ್ನು ಸುಡುವ ಮೂಲಕ ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ.

೩. ಕುವೈತ್ ವಿದ್ಯಾಪೀಠದ ಶರಿಯಾ ಮಹಾವಿದ್ಯಾಲಯದ ಪ್ರಾ. ಡಾ. ಬಸಮ್ ಅಲ್ ಶಟ್ಟಿ ಇವರು, ‘ಪಬ್ ಜಿ ಮೂರ್ತಿ ಪೂಜೆಯ ಮೂಲಕ ಇಸ್ಲಾಮಿಕ್ ರೂಢಿಗಳನ್ನು ಉಲ್ಲಂಘಿಸಿದೆ. ಇದು ಇಸ್ಲಾಮಿನಲ್ಲಿ ಅತ್ಯಂತ ದೊಡ್ಡ ಪಾಪವಾಗಿದೆ. ಇಸ್ಲಾಂ ಧರ್ಮದಲ್ಲಿ ಸರ್ವಶಕ್ತಿಶಾಲಿಯಾದ ಅಲ್ಲಾಹನ ಪ್ರಾರ್ಥನೆಯಲ್ಲಿ ಮಾತ್ರ ತಲೆ ಬಗ್ಗಿಸಲಾಗುತ್ತದೆ. ಎಂದು ಹೇಳಿದರು.

೪. ‘ಬೇಸಿಕ್ ಎಜುಕೇಶನ್ ಕಾಲೇಜ’ನ ಪ್ರಾ. ಡಾ. ರಶೀದ್ ಅಲ್ ಅಲಿಮಿ ಇವರು, ಯಾರಿಗೆ ಇಸ್ಲಾಮ್ ನ ಅವಮಾನ ಮಾಡುವಂತಹ ಸಿದ್ಧಾಂತದ ಬಗ್ಗೆ ಏನೂ ಗೊತ್ತಿಲ್ಲವೋ, ಅಂತಹವರಿಗೆ ಈ ಆಟವು ಮುಸಲ್ಮಾನರಿಗೆ ಅತ್ಯಂತ ಅಪಾಯಕಾರಿಯಾಗಿದೆ’ ಎಂದು ಹೇಳಿದರು. ಇಸ್ಲಾಂ ಧರ್ಮವು ಏಕದೇವೋಪಾಸನೆಯನ್ನು ನಂಬುತ್ತದೆ. ಅಲ್ಲಾಹನು ಸೃಷ್ಟಿಯ ಸೃಷ್ಟಿಕರ್ತ ಮತ್ತು ರಕ್ಷಕ’, ಎಂದಿದ್ದಾರೆ.