ಅಮೇರಿಕಾದಲ್ಲಿಯ ಹಿಂಸಾಚಾರದಿಂದಾಗಿ ೪೦ ನಗರಗಳಲ್ಲಿ ನಿಷೇಧಾಜ್ಞೆ

ಅಮೇರಿಕಾದಲ್ಲಿ ಸತತವಾಗಿ ಜನಾಂಗೀಯದ್ವೇಷದಿಂದಾಗಿ ಕಪ್ಪು ವರ್ಣೀಯರ ಮೇಲೆ ಅತ್ಯಾಚಾರ ಆಗುತ್ತಿದೆ. ಅದೇ ಆಕ್ರೋಶದ ಪರಿಣಾಮವಾಗಿ ಅವರ ಉದ್ರಿಕ್ತ ಜನರಿಂದ ಈ ಹಿಂಸಾಚಾರ ಆರಂಭವಾಗಿದೆ. ಆದ್ದರಿಂದ ಅಮೇರಿಕಾವು ಭಾರತದಲ್ಲಿ ಅಲ್ಪಸಂಖ್ಯಾತರ ವಿರುದ್ಧದ ದೌರ್ಜನ್ಯಗಳ ಬಗ್ಗೆ ಮಾತನಾಡುವ ಬದಲು, ತಮ್ಮ ದೇಶದಲ್ಲಿ ಜನಾಂಗೀಯ ತಾರತಮ್ಯದ ನೀತಿಯನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸಬೇಕು !

ಮಿನ್ನಿಯಾಪೋಲಿಸ (ಅಮೇರಿಕಾ) – ಇಲ್ಲಿ ಪೊಲೀಸರ ಹಲ್ಲೆಯಿಂದ ಕಪ್ಪು ವರ್ಣೀಯ ವ್ಯಕ್ತಿಯೊಬ್ಬ ಮೃತಪಟ್ಟ ನಂತರ ಅಮೇರಿಕದಾದ್ಯಂತ ಹಿಂಸಾಚಾರ ಭುಗಿಲೆದ್ದಿತು. ಅಮೇರಿಕಾದ ಸುಮಾರು ೪೦ ನಗರಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿವಾಸವಾದ ಶ್ವೇತಭವನದ ಹೊರಗೆ ಕೂಡ ಹೆಚ್ಚಿನ ಸಂಖ್ಯೆಯ ಜನರು ಹಿಂಸಾಚಾರಕ್ಕೆ ಪ್ರಯತ್ನಿಸಿದರು. ಆಗ ಟ್ರಂಪ್ ಅವರನ್ನು ಸುರಕ್ಷಿತವಾಗಿಡಲು ರಕ್ಷಣಾಪಡೆಗಳು ಅವರನ್ನು ಬಂಕರ್‌ಗೆ ಕರೆದೊಯ್ದರು.

‘ನ್ಯಾಶನಲ್ ಗಾರ್ಡ್’ನ, ಸುಮಾರು ೫೦೦೦ ಸೈನಿಕರನ್ನು ೧೫ ರಾಜ್ಯಗಳಿಗೆ ಕಳುಹಿಸಲಾಗಿದ್ದು, ಅಗತ್ಯವಿದ್ದರೆ ಇನ್ನೂ ೨೦೦೦ ಸೈನಿಕರನ್ನು ಕಳುಹಿಸಲಾಗುವುದು. ಹಲವಾರು ರಾಜ್ಯಗಳಲ್ಲಿ ಪ್ರತಿಭಟನಾಕಾರರ ಮೇಲೆ ರಬ್ಬರ್ ಗುಂಡುಗಳನ್ನು ಹಾರಿಸಲಾಯಿತು. ಇದರಲ್ಲಿ ಹಲವಾರು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.