ಪಾಕಿಸ್ತಾನದಲ್ಲಿ ೩ ಅಪ್ರಾಪ್ತ ಹಿಂದೂ ಹುಡುಗಿಯರನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರ

ಬಲಪೂರ್ವಕವಾಗಿ ಮುಸ್ಲಿಮರನ್ನು ಮದುವೆ ಮಾಡಿಸಿದರು

  • ಪಾಕಿಸ್ತಾನದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ, ಅನ್ಯಾಯ, ಅಪಹರಣ, ಮತಾಂತರ, ಅತ್ಯಾಚಾರ ಆಗುತ್ತಿದ್ದರೂ ಯಾವುದೇ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಇವುಗಳು ಹೇಗೆ ಕಾಣಿಸುವುದಿಲ್ಲ ?

  • ಪಾಕಿಸ್ತಾನದಲ್ಲಿ ನರಕಯಾತನೆಯಿಂದ ಬಳಲುತ್ತಿರುವ ಅಲ್ಪಸಂಖ್ಯಾತ ಹಿಂದೂಗಳನ್ನು ಉಳಿಸಲು ಕೇಂದ್ರ ಸರ್ಕಾರ ಪ್ರಯತ್ನಿಸಲಿದೆಯೇ ?

ಇಸ್ಲಾಮಾಬಾದ್: ಪಾಕ್‌ನ ಸಿಂಧ ಪ್ರಾಂತ್ಯದಲ್ಲಿ ೩ ಅಪ್ರಾಪ್ತ ಹಿಂದೂ ಹುಡುಗಿಯರನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸುವುದರ ಜೊತೆಗೆ ಅವರನ್ನು ಬಲವಂತವಾಗಿ ಮುಸ್ಲಿಂ ಯುವಕರನ್ನು ಮದುವೆಯಾಗುವಂತೆ ಮಾಡಿಸಿದ ಘಟನೆ ನಡೆದಿದೆ. ನ್ಯಾಯವಾದಿ ರಾಹತ್ ಆಸ್ಟಿನ್ ಇವರು ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

೧. ಮೊದಲ ಘಟನೆ ಸಿಂಧ ಪ್ರಾಂತ್ಯದ ದಕ್ಷಿಣ ಭಾಗದಲ್ಲಿರುವ ಟಂಡೋ ಮೊಹಮ್ಮದ್ ಖಾನ್ ಎಂಬ ಹೆಸರಿನ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿಯ ಮುಸ್ಲಿಂ ಯುವಕನೊಬ್ಬ ಓರ್ವ ಹಿಂದೂ ಯುವತಿಯನ್ನು ಅಪಹರಿಸಿ, ಆಕೆಗೆ ಇಸ್ಲಾಂಗೆ ಮತಾಂತರ ಮಾಡಿ ನಂತರ ಬಲವಂತವಾಗಿ ಮದುವೆಯಾದನು.

೨. ಅದೇ ಜಿಲ್ಲೆಯಲ್ಲಿ ಮತ್ತೊಂದು ಘಟನೆ ನಡೆದಿದೆ. ಇಲ್ಲಿ ಮುಸ್ಲಿಂ ಯುವಕನೊಬ್ಬ ೧೫ ವರ್ಷದ ಹಿಂದೂ ಬಾಲಕಿಯನ್ನು ಶಸ್ತ್ರವನ್ನು ತೋರಿಸಿ ಆಕೆಯನ್ನು ಅಪಹರಿಸಿದ್ದಾನೆ. ನಂತರ ಮೌಲ್ವಿಯು ಅವಳನ್ನು ಬಲವಂತವಾಗಿ ಮತಾಂತರಗೊಳಿಸಿ ಇನ್ನೊಬ್ಬ ಮುಸ್ಲಿಂ ಯುವಕನನ್ನು ಮದುವೆ ಮಾಡಿಸಿದನು.

೩. ಮೂರನೆಯ ಘಟನೆ ಸಿಂಧ್‌ನ ಮಿರ್‌ಪುರ್‌ಖಾಸ್‌ನಲ್ಲಿ ಘಟಿಸಿದೆ. ಅದೂ ಸಹ ಇದೇ ರೀತಿಯಲ್ಲಿ ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯನ್ನು ಶಸ್ತ್ರದ ಬಲದಿಂದ ಅಪಹರಿಸಿ ಮತಾಂತರ ಮಾಡಿದ. ಇದರ ವಿರುದ್ಧ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಆರೋಪಿ ಭಗವಂತಿಯ ತಂದೆಗೆ ‘ನೀವು ನಿಮ್ಮ ಮಗಳನ್ನು ಕರೆದುಕೊಂಡು ಹೋಗಲು ಪ್ರಯತ್ನಿಸಿದರೆ, ನಾವು ಅವಳನ್ನು ಕೊಲ್ಲುತ್ತೇವೆ; ಯಾರಾದರು ಒಮ್ಮೆ ಇಸ್ಲಾಂ ಸ್ವೀಕಾರ ಮಾಡಿದನಂತರ ಅವರು ಬಿಟ್ಟುಹೋದರೆ, ಅವನಿಗೆ ಮರಣದಂಡನೆ ಇದೇ ಶಿಕ್ಷೆ ವಿಧಿಸಲಾಗುತ್ತದೆ’, ಎಂದು ಬೆದರಿಕೆ ಹಾಕಿದನು.

ಸಿಂಧ ಪ್ರಾಂತ್ಯದಲ್ಲಿ ಪ್ರತಿ ವರ್ಷ ೧೦೦೦ ಹಿಂದೂ ಹುಡುಗಿಯರ ಅಪಹರಣ ಮತ್ತು ಮತಾಂತರ !

ಅಮೇರಿಕಾದ ‘ಸಿಂಧಿ ಫೌಂಡೇಶನ್’ ನೀಡಿದ ಮಾಹಿತಿಯ ಪ್ರಕಾರ, ‘ಪಾಕ್‌ನ ಸಿಂಧ್ ಪ್ರಾಂತ್ಯದಲ್ಲಿ ಪ್ರತಿವರ್ಷ ೧೦೦೦ ಹಿಂದೂ ಹುಡುಗಿಯರನ್ನು ಅಪಹರಿಸಿ ಬಲವಂತವಾಗಿ ಮತಾಂತರಗೊಳಿಸಲಾಗುತ್ತದೆ. ಈ ಹೆಣ್ಣು ಮಕ್ಕಳು ೧೨ ರಿಂದ ೨೮ ವರ್ಷದೊಳಗಿನವರು ಇರುತ್ತಾರೆ. ಅಪಹರಣದ ನಂತರ ಮೌಲ್ವಿಯು ಹಿಂದೂ ಹುಡುಗಿಯರನ್ನು ಮುಸ್ಲಿಂ ಯುವಕರಿಗೆ ಮದುವೆ ಮಾಡಿಸುತ್ತಾರೆ.’