ಪಾಕಿಸ್ತಾನದ ಸಿಂಧ್‌ನಲ್ಲಿ ಮತಾಂಧರಿಂದ ಹಿಂದೂ ಮನೆಗಳಿಗೆ ಬೆಂಕಿ ಹಚ್ಚಿ ಹಿಂದೂಗಳಿಗೆ ಥಳಿತ

ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳು ಇದರ ಬಗ್ಗೆ ಏಕೆ ಮಾತನಾಡುವುದಿಲ್ಲ ?

ಪಾಕಿಸ್ತಾನದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ಸತತವಾಗಿ ನಡೆಯುತ್ತಿರುವ ಅಮಾನವೀಯ ದೌರ್ಜನ್ಯವನ್ನು ತಡೆಯಲು ಭಾರತ ಈಗ ಆಮೂಲಾಗ್ರವಾಗಿ ಪ್ರಯತ್ನಿಸಬೇಕು !

ಕರಾಚಿ (ಪಾಕಿಸ್ತಾನ) – ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಮತಾಂಧರು ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿದ ಮತ್ತು ಪಂಜಾಬ್ ಪ್ರಾಂತ್ಯದಲ್ಲಿ ಹಿಂದೂ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆಯನ್ನು ಮಾನವ ಹಕ್ಕುಗಳ ಕಾರ್ಯಕರ್ತ ನ್ಯಾಯವಾದಿ ರಹತ್ ಆಸ್ಟಿನ್ ಬಹಿರಂಗ ಪಡಿಸಿದ್ದಾರೆ. ಅವರು ಇದರ ಬಗ್ಗೆ ವೀಡಿಯೊವನ್ನು ಪ್ರಸಾರ ಮಾಡಿದ್ದಾರೆ.

೧. ವೀಡಿಯೊದಲ್ಲಿ, ಆಸ್ಟಿನ್ ಇವರು, ‘ಸಿಂಧ್‌ನ ಮಟಿಯಾರಿ ಹಾಲಾ ಪ್ರದೇಶದಲ್ಲಿ ಹಿಂದೂ ಮನೆಗಳಿಗೆ ಬೆಂಕಿ ಹಚ್ಚಲಾಯಿತು, ಮತ್ತು ಇಲ್ಲಿನ ಹಿಂದೂಗಳನ್ನು ಥಳಿಸಿ ಹೊರದಬ್ಬಲಾಯಿತು ಎಂದು ಹೇಳಿದ್ದಾರೆ. ಸಿಂಧ್‌ನಲ್ಲಿ ಹಿಂದೂಗಳು ಅನೇಕ ವರ್ಷಗಳಿಂದ ದೌರ್ಜನ್ಯದಿಂದ ಬಳಲುತ್ತಿದ್ದಾರೆ. ಮುಸ್ಲಿಮರು ಮೊದಲು ನಿರಾಶ್ರಿತರಾಗಿ ಇಲ್ಲಿಗೆ ಬಂದರು ಮತ್ತು ಈಗ ಅವರು ಹಿಂದೂಗಳನ್ನು ಗುರಿಯಾಗಿಸುತ್ತಿದ್ದಾರೆ.

೨. ಆಸ್ಟಿನ್ ಇವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದರಲ್ಲಿ ‘ಮತಾಂಧರು ಅನೇಕ ಮನೆಗಳನ್ನು ಸುಟ್ಟು ಹಾಕುತ್ತಿದ್ದಾರೆ ಮತ್ತು ಪೀಡಿತ ಹಿಂದೂ ಕುಟುಂಬಗಳ ಪುರುಷರು, ಮಹಿಳೆಯರು ಮತ್ತು ಮಕ್ಕಳು ಅಳುತ್ತಿದ್ದಾರೆ ಎಂಬುದು ಅದರಲ್ಲಿ ಕಾಣಿಸುತ್ತದೆ. ಘಟನಾಸ್ಥಳದಲ್ಲಿದ್ದ ನೂರಾರು ಜನರು ಈ ಘಟನೆಯ ಚಿತ್ರೀಕರಣವನ್ನು ಮಾಡುತ್ತಿರುವುದು ಕಾಣಿಸುತ್ತದೆ.

೩. ಆಸ್ಟಿನ್ ಇದರ ಬಗ್ಗೆ ಮಾತನಾಡುತ್ತಾ, ‘ಕೆಲವು ಮತಾಂಧರು ಪಂಜಾಬ್‌ನಲ್ಲಿ ವಾಸಿಸುವ ಹಿಂದೂ ದಂಪತಿಗಳ ಮೇಲೆ ದಾಳಿ ಮಾಡಿದರು. ಹಿಂದೂ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದರು. ದಾಳಿಯಲ್ಲಿ ಗಾಯಗೊಂಡ ದಂಪತಿಗಳು ಪ್ರದೇಶದಿಂದ ಓಡಿ ಹೋಗಿದ್ದಾರೆ.

೪. ಮತಾಂಧರು ಕಳೆದ ತಿಂಗಳು ಸಿಂಧ್‌ನ ಘೋಟ್ಕಿಯ ರಾಜಾ ಫಾರ್ಮ್ ಪ್ರದೇಶದ ಹಿಂದೂ ಮನೆಗಳಿಗೆ ಬೆಂಕಿ ಹಚ್ಚಿದ್ದರು. ಇದರಲ್ಲಿ ೩ ಹಿಂದೂ ಮಕ್ಕಳು ಸಾವನ್ನಪ್ಪಿದ್ದಾರೆ.