ನವ ದೆಹಲಿ: ಅಮೆರಿಕವು ಅಲ್ ಖೈದಾ ಭಯೋತ್ಪಾದಕ ಮೊಹಮ್ಮದ್ ಇಬ್ರಾಹಿಂ ಜುಬೈರ್‌ಅನ್ನು ಭಾರತಕ್ಕೆ ಹಸ್ತಾಂತರಿಸಿದೆ. ಸದ್ಯ ಆತನನ್ನು ಪಂಜಾಬ್‌ನ ಅಮೃತಸರದ ಪ್ರತ್ಯೇಕೀಕರಣ ಕೇಂದ್ರದಲ್ಲಿ ಇರಿಸಲಾಗಿದೆ. ಭಾಗ್ಯನಗರದ ಜುಬೈರ್ (೪೦ ವರ್ಷ) ಅಲ್ ಖೈದಾಗೆ ಹಣಕಾಸು ಪೂರೈಸಿದ ಆರೋಪ ವಿತ್ತು. ಅತನಿಗೆ ಅಮೇರಿಕಾದ ನ್ಯಾಯಾಲಯವು ಶಿಕ್ಷೆ ವಿಧಿಸಿತ್ತು. ಆತನ ಶಿಕ್ಷೆ ಪೂರ್ಣವಾದ ನಂತರ, ಆತನನ್ನು ಈಗ ಭಾರತಕ್ಕೆ ಒಪ್ಪಿಸಿದ್ದಾರೆ. ಭಾರತೀಯ ತನಿಖಾಧಿಕಾರಿಗಳು ಆತನ ತನಿಖೆ ನಡೆಸುತ್ತಿದ್ದಾರೆ.
ಜುಬೇರ್‌ನನ್ನು ಭಯೋತ್ಪಾದಕನಲ್ಲ ಇಂಜಿನಿಯರ್ ಆಗಿದ್ದಾನೆ ಎಂದಿತ್ತು ಭಾರತದ ಕಮ್ಯುನಿಸ್ಟ್ ವಿಚಾರದ ಮಾಧ್ಯಮಗಳು ಇದುವೇ ಕಮ್ಯುನಿಸ್ಟ್ ಮಾಧ್ಯಮದ ನಿಜವಾದ ರೂಪ ! ಇವೇ ಮಾಧ್ಯಮಗಳು ಹಿಂದೂಗಳನ್ನು ’ಕೇಸರಿ ಭಯೋತ್ಪಾದಕರು’ ಎಂದು ಕರೆಯಲು ಮಂಚೂಣಿಯಲ್ಲಿರುತ್ತವೆ !
೨೦೧೮ ರಲ್ಲಿ ಅಮೇರಿಕಾವು ಜುಬೈರ್‌ನನ್ನು ಅಲ್-ಖೈದಾ ಭಯೋತ್ಪಾದಕ ಎಂದು ಬಂಧಿಸಿದಾಗ, ಭಾರತದ ಕೆಲವು ಕಮ್ಯುನಿಸ್ಟ್ ವಿಚಾರದ ಮಾಧ್ಯಮಗಳು ಆತನನ್ನು ಭಯೋತ್ಪಾದಕ ಎಂದು ಹೇಳುವ ಬದಲು ‘ಭಾರತೀಯ ಇಂಜಿನಿಯರ್’ ಎಂದು ಹೇಳಿತ್ತು.