-
ಭಾರತವು ಎಲ್ಲ ರೀತಿಯಲ್ಲೂ ಪಾಕಿಸ್ತಾನಕ್ಕಿಂತ ಬಲಿಷ್ಠವಾಗಿರುವ ಎಲ್ಲಿಯವರೆಗೆ ಪಾಕಿಸ್ತಾನಕ್ಕೆ ಪಾಠ ಕಲಿಸುವುದಿಲ್ಲವೋ, ಅಲ್ಲಿಯ ವರೆಗೆ ಪಾಕಿಸ್ತಾನದ ಕುಹಕತೆ ಹೀಗೆ ಮುಂದುವರೆಯಲಿದೆ. ಅದಕ್ಕಾಗಿ ಸರ್ಕಾರವು ಪಾಕ್‌ಗೆ ಮೈಮುಟ್ಟಿ ನೋಡುವಂತೆ ಪಾಠ ಕಲಿಸಬೇಕು !
-
ಪಾಕ್ ಸಾಲದ ಸುಳಿಯಲ್ಲಿ ಸಿಲುಕಿ ಇತರ ರಾಷ್ಟ್ರಗಳ ಮುಂದೆ ಕೈ ಚಾಚುತ್ತಿದ್ದರೂ, ಭಾರತವಿರೋಧಿ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ. ಅಂತಹ ಭಾರತದ್ವೇಷಿ ಪಾಕ್‌ನ ನಿರ್ಮೂಲನೆಗಾಗಿ ಸರ್ಕಾರವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು !
ಇಸ್ಲಾಮಾಬಾದ್: ಭಾರತ ನಮ್ಮ ವಿರುದ್ಧ ಏನಾದರೂ ಮಾಡಲು ಧೈರ್ಯ ಮಾಡಿದರೆ ನಾವು ಅವರಿಗೆ ಅದೇ ರೀತಿಯಲ್ಲಿ ಉತ್ತರಿಸುವೆವು, ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾಹ ಮೆಹಮೂದ್ ಖುರೇಷಿ ಹೇಳಿದ್ದಾರೆ. ಮುಲ್ತಾನ್‌ನಲ್ಲಿ ಈದ್ ಪ್ರಾರ್ಥನೆಯ ನಂತರ ಖುರೇಷಿಯವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಖುರೇಷಿ ತಮ್ಮ ಮಾತನ್ನು ಮುಂದುವರಿಸುತ್ತ, “ಪಾಕಿಸ್ತಾನಕ್ಕೆ ಶಾಂತಿ ಬೇಕಿದೆ. (ಜಗತ್ತಿನಲ್ಲೇ ‘ಭಯೋತ್ಪಾದಕರ ತವರುಮನೆ’ ಎಂದೇ ಅಪಖ್ಯಾತಿ ಹೊಂದಿದ ಪಾಕ್ ಮಂತ್ರಿಗಳ ಹಾಸ್ಯಾಸ್ಪದ ಹೇಳಿಕೆ ! – ಸಂಪಾದಕರು) ನಮ್ಮ ತಾಳ್ಮೆಯು ನಮ್ಮ ದೌರ್ಬಲ್ಯವೆಂದು ತಿಳಿಯುವ ತಪ್ಪು ಮಾಡದಿರಲಿ. ಕಾಶ್ಮೀರದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪರಿಹರಿಸಲು ನಾವು ವಿಶ್ವ ಸಂಸ್ಥೆಯ ಕಾರ್ಯದರ್ಶಿ ಹಾಗೂ ಇಸ್ಲಾಮಿಕ್ ಸಹಕಾರ ಸಂಘಟನೆಯನ್ನು ಸಂಪರ್ಕಿಸಿದ್ದೇವೆ.
ಇಸ್ಲಾಮಿಕ್ ರಾಷ್ಟ್ರಗಳ ಸಭೆಯಲ್ಲಿ ಪಾಕಿಸ್ತಾನಕ್ಕೆ ಮುಖಭಂಗ : ಅನೇಕ ಇಸ್ಲಾಮಿಕ್ ರಾಷ್ಟ್ರಗಳಿಂದ ಭಾರತಕ್ಕೆ ಬೆಂಬಲ
ಇದರಿಂದಲೇ ಪಾಕಿಸ್ತಾನದ ಅರ್ಹತೆ ಎಷ್ಟಿದೆ ಎಂದು ತೋರಿಸುತ್ತದೆ ! ಇಂತಹ ಪಾಕಿಸ್ತಾನವನ್ನು ಎಲ್ಲ ರಾಷ್ಟ್ರಗಳು ಬಹಿಷ್ಕರಿಸಬೇಕು !
ಭಾರತದ ಇಸ್ಲಾಮ ವಿರುದ್ಧ ಕಾರ್ಯಾಚರಣೆಗೆ ಸೊಪ್ಪು ಹಾಕುತ್ತಿದೆ ಎಂಬ ಆರೋಪವನ್ನು ವಿಶ್ವ ಸಂಸ್ಥೆಯಲ್ಲಿನ ಪಾಕಿಸ್ತಾನದ ರಾಯಭಾರಿ ಮುನೀರ್ ಅಕ್ರಮ್ ಇವರು ‘ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೊಆಪರೇಶನ್’ ಈ ಇಸ್ಲಾಮಿ ರಾಷ್ಟ್ರದ ಸಂಘಟನೆಯ ಒಂದು ‘ಆನ್‌ಲೈನ್’ ಸಭೆಯಲ್ಲಿ ಆರೋಪಿಸಿದ್ದಾರೆ. ಪಾಕ್ ನ ಆರೋಪದ ಮೇಲೆ ಈ ಸಂಘಟನೆಯ ಸದಸ್ಯರಾಗಿರುವ ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಓಮನ್ ಮತ್ತು ಮಾಲ್ಡೀವ್ಸ್ ಸೇರಿದಂತೆ ಅನೇಕ ಇಸ್ಲಾಮಿ ರಾಷ್ಟ್ರಗಳು ಆಕ್ಷೇಪಿಸುತ್ತಾ ಭಾರತವನ್ನು ಬಹಿರಂಗವಾಗಿ ಬೆಂಬಲಿಸಿವೆ. ಆದ್ದರಿಂದ ಪಾಕ್‌ಗೆ ತಕ್ಕ ಶಾಸ್ತಿಯಾಗಿದೆ.
ಪಾಕ್‌ಗೆ ಕಿವಿ ಹಿಂಡಿದ ಮಾಲ್ಡೀವ್ಸ್
ಪಾಕಿಸ್ತಾನದ ಈ ಆರೋಪಗಳನ್ನು ಮಾಲ್ಡೀವ್ಸ್ ಬಲವಾಗಿ ಖಂಡಿಸಿದೆ. ‘ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ದೇಶವಾಗಿದ್ದು, ಭಾರತದಲ್ಲಿ ೨೦ ಕೋಟಿಕ್ಕಿಂತಲೂ ಹೆಚ್ಚು ಮುಸಲ್ಮಾನರು ವಾಸಿಸುತ್ತಿದ್ದಾರೆ. ಆದ್ದರಿಂದ ಭಾರತದ ವಿರುದ್ಧ ಇಂತಹ ಆರೋಪ ಮಾಡುವುದು ಅಯೋಗ್ಯವಾಗಿದೆ. ಇಂತಹ ಆರೋಪ ಹೊರಿಸುವುದು, ಇದು ದಕ್ಷಿಣ ಏಷ್ಯಾ ಪ್ರದೇಶದ ಧಾರ್ಮಿಕ ಏಕತೆಗೆ ಮಾರಕವಾಗಿದೆ. ಪಾಕಿಸ್ತಾನವು ದಕ್ಷಿಣ ಏಷ್ಯಾದ ಎಲ್ಲಾ ದೇಶಗಳೊಂದಿಗೆ ಸೇರಿ ಕೆಲಸ ಮಾಡಬೇಕಾಗಿದೆ ಮತ್ತು ಅದು ತನ್ನ ನಿಲುವನ್ನು ಬದಲಾಯಿಸಬೇಕಾಗಿದೆ” ಎಂಬ ಮಾತುಗಳಿಂದ ಮಾಲ್ಡೀವ್ಸ್ ಪಾಕಿಸ್ತಾನದ ಕಿವಿ ಹಿಂಡಿದೆ. ಭಾರತದ ಮಿತ್ರ ರಾಷ್ಟ್ರವಾದ ಒಮಾನ್ ಕೂಡ ‘ಇದು ಭಾರತದ ಆಂತರಿಕ ಪ್ರಶ್ನೆಯಾಗಿದೆ” ಎಂದು ಹೇಳಿದೆ. ಕೆಲವು ರಾಷ್ಟ್ರಗಳು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಲಾಗುತ್ತಿದೆ.