ಚೀನಾದ ವಿರುದ್ಧ ಭಾರತವು ಆಕ್ರಮಣದ ನಿಲುವನ್ನು ತಾಳುವುದು ಅನಿವಾರ್ಯವೆಂಬುದು ಈ ಘಟನೆಯಿಂದಲೇ ಕಾಣಿಸುತ್ತದೆ !
ಹಿಂದೂ ಮಹಾಸಾಗರದಲ್ಲಿ ಭಾರತವನ್ನು ಸುತ್ತುವರೆಯಲು ಪ್ರಯತ್ನ !
ಬೀಜಿಂಗ್ (ಚೀನಾ) – ಒಂದೆಡೆ ಇಡೀ ಜಗತ್ತು ಕೊರೋನಾದೊಂದಿಗೆ ಹೋರಾಡುತ್ತಿದ್ದರೆ ಇನ್ನೊಂದೆಡೆ ಚೀನಾ ಮಾಲ್ದೀವ್ದಲ್ಲಿ ಭಾರತದಿಂದ ೬೮೪ ಕಿ.ಮೀ. ದೂರದಲ್ಲಿ ಒಂದು ಕೃತಕ ದ್ವೀಪವನ್ನು ನಿರ್ಮಿಸುತ್ತಿದೆ. ಇದು ಉಪಗ್ರಹದಿಂದ ಇತ್ತೀಚೆಗೆ ತೆಗೆಯಲಾಗಿದ್ದ ಚಿತ್ರದಿಂದ ಬಹಿರಂಗವಾಗಿದೆ. ‘ಓಪನ್ ಸೋರ್ಸ್ ಇಂಟೆಲಿಜನ್ಸ್ ಅನಾಲಿಸ್ಟ್ ಡೆಟ್ರೆಸ್ಫಾನಿಂದ ಈ ಛಾಯಾಚಿತ್ರವನ್ನು ಸಾರ್ವಜನಿಕ ಮಾಡಲಾಯಿತು. ಈ ಮೂಲಕ ಸಮುದ್ರದಿಂದ ಭಾರತಕ್ಕೆ ಸವಾಲೊಡ್ಡಲು ಚೀನಾವು ಪ್ರಯತ್ನಿಸುತ್ತಿದೆ ಎಂದು ತಜ್ಞರಿಂದ ಹೇಳಲಾಗುತ್ತಿದೆ. ಮಾಲ್ದೀವ್‌ನ ಮಾಜಿ ರಾಷ್ಟ್ರಪತಿ ಅಬ್ದುಲ್ಲಾ ಯಾಮೀನ್ ಇವರು ಅಧಿಕಾರದಲ್ಲಿರುವಾಗ ೨೦೧೬ ರಲ್ಲಿ ತನ್ನ ದೇಶದ ೧೬ ದ್ವೀಪಗಳನ್ನು ಚೀನಾಗೆ ಬಾಡಿಗೆಗೆ ನೀಡಿದ್ದರು. ಈ ದ್ವೀಪದ ಹತ್ತಿರದಲ್ಲಿಯೇ ಚೀನಾವು ದೊಡ್ಡ ಪ್ರಮಾಣದಲ್ಲಿ ಕಟ್ಟಡ ನಿರ್ಮಿಸುತ್ತಿದೆ.
ಶಸ್ತ್ರಗಳ ಖರೀದಿ – ಮಾರಾಟದ ಮೇಲೆ ಗಮನವಿಡುವ ಅಂತರರಾಷ್ಟ್ರೀಯ ಸಂಸ್ಥೆ ‘ಸಿಪ್ರಿಯ ‘ನ್ಯೂಕ್ಲಿಯರ್ ಇನ್ಫಾರ್ಮೇಶನ ಪ್ರೋಜೆಕ್ಟನ ಸಂಚಾಲಕರಾದ ಹೇನ್ಸ ಕ್ರಿಸ್ಟೆಸನ್ ಇವರು ಟ್ವೀಟ್ ಮಾಡುತ್ತಾ, ಮಾಲದೀವ್‌ನ ‘ಫೇಢೂ ಫಿನೊಲು ದ್ವೀಪವನ್ನು ಮಾಲದೀವ್ ನ ಆಗಿನ ಸರಕಾರ ೪ ಮಿಲಿಯನ್ ಡಾಲರ‍್ಸ್ (೩೦ ಕೋಟಿ ೩೩ ಲಕ್ಷ ರೂಪಾಯಿಯಲ್ಲಿ) ಬಾಡಿಗೆಯ ಮೇರೆಗೆ ನೀಡಿತ್ತು. ಈಗ ಚೀನ್ ಈ ಮೂಲಕ ಭಾರತವನ್ನು ಸುತ್ತುವರೆಯುವ ಪ್ರಯತ್ನ ಮಾಡುತ್ತಿದೆ. ಚೀನಾವು ಹಿಂದೂ ಮಹಾಸಾಗರದ ಹತ್ತಿರ ಅನೇಕ ದೇಶಗಳಿಗೆ ಸಾಲವನ್ನು ನೀಡಿ ಅವುಗಳನ್ನು ತನ್ನ ಜಾಲದಲ್ಲಿ ಸಿಲುಕಿಸಿದೆ ಎಂದಿದ್ದಾರೆ. ಮಾಲ್ದೀವ್ ಹಿಂದೂ ಮಹಾಸಾಗರದಿಂದ ಬರುವ ನೌಕೆಯ ಮಾರ್ಗವಾಗಿದೆ. ಈ ಮಾರ್ಗದ ಮೂಲಕ ಅಬ್ಜಗಟ್ಟಲೆ ರೂಪಾಯಿ ವ್ಯವಹಾರವು ಮಾಡಲಾಗುತ್ತದೆ. ಆದ್ದರಿಂದ ಚೀನಾಗೆ ಮಾಲದೀವ್ ಮಹತ್ವದ್ದಾಗಿ ಕಾಣಿಸುತ್ತದೆ, ಅದೇರೀತಿ ಕೇವಲ ೨೦ ರಿಂದ ೨೫ ನಿಮಿಷಗಳಲ್ಲಿ ಚೀನಾದ ಯುದ್ಧ ವಿಮಾನಗಳು ಭಾರತಕ್ಕೆ ಬರಬಹುದು.