ಯಾವುದು ಭಾರತೀಯ ಸಂಸ್ಕೃತಿಯಲ್ಲಿ ಪ್ರಾಚೀನ ಕಾಲದಿಂದಲೂ ಹೇಳಿದ್ದರೋ ಅದು ಈಗ ಪಾಶ್ಚಾತ್ಯ ವಿಜ್ಞಾನಿಗಳು ಸಂಶೋಧನೆ ಮಾಡಿ ಮಾನ್ಯತೆಯನ್ನು ನೀಡುತ್ತಿದ್ದಾರೆ. ಇದರಿಂದ ಅವರು ಎಷ್ಟು ಹಿಂದುಳಿದಿದ್ದಾರೆ ಎಂಬುದು ಗಮನಕ್ಕೆ ಬರುತ್ತದೆ ಹಾಗೂ ಪಾಶ್ಚಾತ್ಯರನ್ನು ಅನುಸರಿಸುವ ಭಾರತೀಯರು ತಮ್ಮನ್ನು ಹೇಗೆ ಹಿಂದುಳಿದವರು ಎಂದು ತಿಳಿದಿದ್ದಾರೆ ಎಂಬುದು ಕೂಡ ಗಮನಕ್ಕೆ ಬರುತ್ತದೆ !
ನವ ದೆಹಲಿ: ಕೊರೋನಾಗೆ ಸಂಬಂಧಿಸಿದಂತೆ ಆಯುಷ್ ಸಚಿವಾಲಯವು ನೀಡಿದ ಹಲವಾರು ಸಲಹೆಗಳಲ್ಲಿ ಬಿಸಿನೀರಿಗೆ ಉಪ್ಪು ಸೇರಿಸಿ ಬಾಯಿ ಮುಕ್ಕಳಿಸುವುದು ಸೇರಿದೆ. ಬಾಯಿ ಮುಕ್ಕಳಿಸುವ ಅಭ್ಯಾಸವು ಭಾರತೀಯ ಸಂಸ್ಕೃತಿಯಲ್ಲಿ ಪ್ರಾಚೀನದಿಂದಲೂ ಇದೆ. ಈಗ ಬ್ರಿಟನ್‌ನ ಎಡಿನ್ಬರ್ಗ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮಾಡಿದ ಸಂಶೋಧನೆಯಲ್ಲಿ ‘ಬಿಸಿನೀರಿನಲ್ಲಿ ಉಪ್ಪು ಹಾಕಿ ಬಾಯಿ ಮುಕ್ಕಳಿಸಿದರೆ ಕರೋನಾ ಸೋಂಕಿನ ಅಪಾಯವನ್ನು ಗಮನಾರ್ಹವಾಗಿ ಕಡಿಮೆಯಾಗುವುದರೊಂದಿಗೆ ಸಾಂಕ್ರಾಮಿಕತೆಯ ಕಾಲಾವಧಿಯೂ ಕಡಿಮೆ ಮಾಡುತ್ತದೆ’ ಎಂಬುದು ಗಮನಕ್ಕೆ ಬಂದಿದೆ.
೧. ಈ ವಿಜ್ಞಾನಿಗಳು ಕೊರೋನಾ ಪೀಡಿತ ೧೨ ರೋಗಿಗಳ ಮೇಲೆ ೧೨ ದಿನಗಳ ಕಾಲ ಈ ಪ್ರಯೋಗವನ್ನು ಮಾಡಿದರು. ಈ ರೋಗಿಗಳಿಗೆ ೧೨ ದಿನಗಳ ಕಾಲ ಬಿಸಿ ನೀರಿನಲ್ಲಿ ಉಪ್ಪು ಹಾಕಿ ಬಾಯಿ ಮುಕ್ಕಳಿಸಲು ಹೇಳಲಾಗಿತ್ತು. ೧೨ ದಿನಗಳ ನಂತರ ಅವರ ಮೂಗಿನ ದ್ರವದ ಮಾದರಿಗಳನ್ನು ತೆಗೆದುಕೊಂಡಾಗ ಅದರಲ್ಲಿ ಕರೋನಾ ಸೋಂಕಿನ ಲಕ್ಷಣಗಳು ತೀರಾ ಕಡಿಮೆ ಎಂದು ಕಂಡುಬಂದಿದೆ.
೨. ಈ ಸಂಶೋಧನೆಯನ್ನು ‘ಜರ್ನಲ್ ಆಫ್ ಗ್ಲೋಬಲ್ ಹೆಲ್ತ್’ನಲ್ಲಿ ಪ್ರಕಟಿಸಲಾಗಿದೆ. ಅದರಲ್ಲಿ, ‘ಕೇವಲ ಎರಡೂವರೆ ದಿನಗಳಲ್ಲಿ ಕರೋನಾ ಸೋಂಕಿನ ಪರಿಣಾಮಗಳು ಕಡಿಮೆಯಾಗಿತ್ತು. ಆದ್ದರಿಂದ ಕೊರೋನಾ ಸೋಂಕನ್ನು ಅಲ್ಪಾವಧಿಯಲ್ಲಿಯೇ ಕಡಿಮೆ ಮಾಡಬಹುದು’ ಎಂದು ಹೇಳಿದೆ.