-
‘ಕೊರೋನಾದ ಬಿಕ್ಕಟ್ಟು ಇರುವಾಗಲೂ ಬಿಜೆಪಿ ಮತ್ತು ಸಂಘವು ರಾಮ ಮಂದಿರದ ನಿರ್ಮಾಣವನ್ನು ಪ್ರಾರಂಭಿಸುವ ಮೂಲಕ ಹಿಂದುತ್ವದ ನೀತಿಯನ್ನು ಮುಂದುವರಿಸುತ್ತಿದೆ !’
-
ಭಾರತ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದು ಪಾಕಿಸ್ತಾನ ಹೇಳುವ ಅಗತ್ಯವಿಲ್ಲ. ತನ್ನ ದೇಶದ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಗಮನ ಹರಿಸಬೇಕು ಮತ್ತು ಅವರಿಗೆ ರಕ್ಷಣೆ ನೀಡಬೇಕು !
ನವ ದೆಹಲಿ : ಒಂದೆಡೆ ಜಗತ್ತು ಕೊರೋನದ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ, ಮತ್ತೊಂದೆಡೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಬಿಜೆಪಿ ಹಿಂದುತ್ವದ ನೀತಿಯನ್ನು ಮುನ್ನಡೆಸಲು ಪ್ರಯತ್ನಿಸುತ್ತಿವೆ. ಬಾಬರಿ ಮಸೀದಿಯ ಸ್ಥಳದಲ್ಲಿ ಮಂದಿರ ನಿರ್ಮಾಣ, ಇದು ಈ ದಿಕ್ಕಿನಲ್ಲಿ ಮಾಡುತ್ತಿರುವ ಪ್ರಯತ್ನದ ಒಂದು ಭಾಗವಾಗಿದೆ. ಇದನ್ನು ಪಾಕಿಸ್ತಾನ ಸರ್ಕಾರ ತೀವ್ರವಾಗಿ ಖಂಡಿಸುತ್ತದೆ, ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ರಾಮಮಂದಿರದ ನಿರ್ಮಾಣ ಕಾರ್ಯದ ಬಗ್ಗೆ ಟ್ವೀಟ್ ಮಾಡಿದೆ. ಪಾಕಿಸ್ತಾನದ ಈ ಟ್ವೀಟ್ ಬಗ್ಗೆ ವಿಶ್ವ ಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಂಡೆ, ‘ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ಅನ್ಯಾಯವಾಗುತ್ತಿದೆ. ಇದನ್ನು ನಿಲ್ಲಿಸಲು ಪಾಕಿಸ್ತಾನದ ವೈಫಲ್ಯವಾಗಿದೆ. ಯಾವ ದೇಶದಲ್ಲಿ ನಿರಂತರವಾಗಿ ಜನರ ಮೇಲೆ ಅನ್ಯಾಯವಾಗುತ್ತಿದೆ, ಆ ದೇಶವು ನಮ್ಮ ನ್ಯಾಯ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಿದೆ, ಇದು ಹಾಸ್ಯಾಸ್ಪದವಾಗಿದೆ. ರಾಮ ಜನ್ಮಭೂಮಿಯ ಮೇಲಿನ ರಾಮಮಂದಿರದ ನಿರ್ಮಾಣವು ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರವೇ ನಡೆಯುತ್ತಿದೆ’, ಎಂದರು.