ಸೋವಿಯತ್ ರಷ್ಯಾದಿಂದ ಸ್ವತಂತ್ರವಾಗಿದ್ದ ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಎರಡರಲ್ಲೂ ಯುದ್ಧ ಪ್ರಾರಂಭ

ಟ್ಯಾಂಕ್‌ಗಳು, ಹೆಲಿಕಾಪ್ಟರ್‌ಗಳು ಮತ್ತು ಡ್ರೋನ್‌ಗಳು ಧ್ವಂಸ : ೧೬ ಜನರು ಮೃತಪಟ್ಟರು

ಮಾಸ್ಕೋ (ರಷ್ಯಾ) – ಭಾರತ ಮತ್ತು ಚೀನಾ ನಡುವೆ ಯುದ್ಧವಾಗುವ ಸಾಧ್ಯತೆಯ ನಡುವೆಯೇ ಸೋವಿಯತ್ ರಷ್ಯಾದಿಂದ ಬೇರ್ಪಟ್ಟ ಎರಡು ದೇಶಗಳಾದ ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಗಡಿ ವಿವಾದದಿಂದ ಯುದ್ಧ ಆರಂಭವಾಗಿದೆ. ಉಭಯ ದೇಶಗಳು ಪರಸ್ಪರ ಯುದ್ಧ ಘೋಷಿಸಿವೆ. ಪರಸ್ಪರರು ಬಂದೂಕುಗಳು, ಟ್ಯಾಂಕ್‌ಗಳು ಮತ್ತು ಹೆಲಿಕಾಪ್ಟರ್‌ಗಳಿಂದ ದಾಳಿ ಮಾಡಲು ಪ್ರಾರಂಭಿಸಿದ್ದಾರೆ. ಈವರೆಗೆ ೧೬ ಜನರು ಸಾವನ್ನಪ್ಪಿದ್ದಾರೆ ಮತ್ತು ೧೦೦ ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅರ್ಮೇನಿಯಾ ದೇಶದ ಮೇಲೆ ‘ಮಾರ್ಶಲ್ ಲಾ’ ಹೇರಲಾಗಿದ್ದು ಎಲ್ಲ ಸೈನಿಕರಿಗೆ ಗಡಿರೇಖೆಗೆ ಹೋಗಲು ಆದೇಶಿಸಿದೆ.

೧. ಅರ್ಮೇನಿಯನ್ ರಕ್ಷಣಾ ಸಚಿವಾಲಯ ಹೊರಡಿಸಿದ ಸುತ್ತೋಲೆಯಲ್ಲಿ, ಅಜೆರ್ಬೈಜಾನ್ ಸೈನ್ಯವು ಸೆಪ್ಟೆಂಬರ್ ೨೭ ರಂದು ರಾತ್ರಿ ೮ ಗಂಟೆ ೧೦ ನಿಮಿಷಕ್ಕೆ ಗಡಿ ಹತ್ತಿರದ ಸ್ಟೆಪೆನ್‌ಕಾರ್ಟ್ ಮೇಲೆ ದಾಳಿ ಮಾಡಿದಾಗ ಅರ್ಮೇನಿಯಾ ಸಹ ಪ್ರತ್ಯುತ್ತರ ನೀಡುತ್ತಾ ಅಜೆರ್ಬೈಜಾನ್‌ನ ೨ ಹೆಲಿಕಾಪ್ಟರ್ ಹಾಗೂ ೩ ಡ್ರೋನ್‌ಗಳನ್ನು ಹೊಡೆದುರುಳಿಸಿತು, ಅದೇರೀತಿ ೨ ಟ್ಯಾಂಕ್‌ಗಳನ್ನು ಸಹ ಧ್ವಂಸ ಮಾಡಿತು. ಈ ಬಗ್ಗೆ ಒಂದು ವೀಡಿಯೋವನ್ನು ಪ್ರಸಾರ ಮಾಡಿದ್ದೂ ಇದರಲ್ಲಿ ಟ್ಯಾಂಕ್‌ಗಳು ಧ್ವಂಸವಾಗುತ್ತಿರುವುದು ಕಂಡುಬರುತ್ತದೆ.

೨. ಅರ್ಮೇನಿಯಾದ ಸ್ಪಷ್ಟೀಕರಣಕ್ಕೆ ಪ್ರತಿಕ್ರಿಯಿಸಿದ ಅಜೆರ್ಬೈಜಾನ್, ಯುದ್ಧದ ಬಗ್ಗೆ ದೇಶ ಮತ್ತು ಗಡಿಯಲ್ಲಿ ತನ್ನ ನಾಗರಿಕರನ್ನು ರಕ್ಷಿಸಲು ಕ್ರಮ ಕೈಗೊಂಡಿದೆ ಎಂದಿದೆ.

ಯುದ್ಧದ ಹಿಂದಿನ ಕಾರಣ

೪ ಸಾವಿರದ ೪೦೦ ಚದರ ಕಿಲೋಮೀಟರ್ ನಾಗೋರ್ನೊ-ಕಾರಾಬಾಖ್ ಪ್ರದೇಶದ ಬಗ್ಗೆ ಉಭಯ ದೇಶಗಳು ಮಾಲಿಕತ್ವದ ಹಕ್ಕಿನ ಬಗ್ಗೆ ವಿವಾದವಿದೆ. ನಾಗೋರ್ನೊ ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ಅಜೆರ್ಬೈಜಾನ್‌ನ ಪ್ರದೇಶವಾಗಿದೆ; ಆದರೆ ಇದನ್ನು ಅರ್ಮೇನಿಯಾದ ಜನಾಂಗೀಯ ಗುಂಪುಗಳು ಸ್ವಾಧೀನಪಡಿಸಿಕೊಂಡಿವೆ. ೧೯೯೧ ರಲ್ಲಿ ಅರ್ಮೇನಿಯಾದ ಜನಾಂಗೀಯ ಗುಂಪುಗಳು, ‘ನಾವು ಅಜೆರ್ಬೈಜಾನ್‌ನಿಂದ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದೇವೆ’ ಎಂದು ಘೋಷಿಸಿದ್ದರು. ಆದಾಗ್ಯೂ ಈ ಹೇಳಿಕೆಯನ್ನು ಅಜೆರ್ಬೈಜಾನ್ ಸಂಪೂರ್ಣವಾಗಿ ತಿರಸ್ಕರಿಸಿದೆ ಮತ್ತು ಇದು ಉಭಯ ದೇಶಗಳ ನಡುವಿನ ವಿವಾದಗಳಿಗೆ ಕಾರಣವಾಗಿದೆ.