‘ಯುದ್ಧಕ್ಕೆ ಅಲ್ಲ, ವಿನಾಶಕ್ಕೆ ಸಿದ್ಧರಾಗಿ’ ಎಂದು ಬಜವಾ ಹೇಳಬೇಕು; ಏಕೆಂದರೆ ಭಾರತದೊಂದಿಗಿನ ಯುದ್ಧದಲ್ಲಿ ಪಾಕಿಸ್ತಾನದ ವಿನಾಶ ನಿಶ್ಚಿತವಿದೆ !
ಮುಜಫರಾಬಾದ್ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ) – ಯಾವುದೇ ಸವಾಲನ್ನು ಎದುರಿಸಲು ಪಾಕಿಸ್ತಾನ ಸೇನೆಯು ಸಿದ್ಧವಾಗಿದೆ. ನಮ್ಮ ದೇಶದ ಸಾರ್ವಭೌಮತ್ವದ ಮೇಲೆ ಆಕ್ರಮಣಕ್ಕೆ ಪ್ರಯತ್ನಿಸಿದರೆ ಅವರಿಗೆ ತಕ್ಕ ಪ್ರತ್ಯುತ್ತರ ನೀಡಲಾಗುವುದು. ಅದಕ್ಕಾಗಿ ಸೈನ್ಯವು ಸಿದ್ಧವಾಗಿರಬೇಕು, ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಜಾವೇದ್ ಬಜವಾ ಆದೇಶ ನೀಡಿದ್ದಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲ್‌ಗಿಟ್-ಬಾಲ್ಟಿಸ್ತಾನ್‌ಗೆ ಪಾಕಿಸ್ತಾನದ ರಾಜ್ಯದ ದರ್ಜೆಯನ್ನು ನೀಡುವ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಜನರಲ್ ಬಾಜವಾ ಇವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಿದ ಸಮಯದಲ್ಲಿ ಮಾತನಾಡುತ್ತಿದ್ದರು.
ಕೆಲವು ದಿನಗಳ ಹಿಂದೆ ಬಜವಾ ಇವರು ಪಂಜಾಬ್‌ನ ಫೀಲ್ಡ್ ಫೈರಿಂಗ್ ಶ್ರೇಣಿಗೆ ಭೇಟಿ ನೀಡಿದರು. ಆ ಸಮಯದಲ್ಲಿ ಅವರು ಚೀನಾ ನಿರ್ಮಿತ ಬ್ಯಾಟಲ್ ಟ್ಯಾಂಕ್ ವಿಟಿ – ೪ ಯ ವರದಿಯನ್ನು ಪಡೆದುಕೊಂಡರು.
ಚೀನಾದ ಟ್ಯಾಂಕ್‌ಗಳು ಭವಿಷ್ಯದಲ್ಲಿ ಆಕ್ರಮಣಕಾರಿ ಕಾರ್ಯಾಚರಣೆಗಾಗಿ ಸಹಾಯಕವಾಗಲಿದೆ ಎಂದು ಬಾಜವಾ ಅವರು ಹೇಳಿದರು. ಚೀನಾದ ಟ್ಯಾಂಕ್‌ಗಳು ವಿಶ್ವದ ಅತ್ಯಾಧುನಿಕ ಟ್ಯಾಂಕ್‌ಗಳಲ್ಲಿ ಒಂದಾಗಿವೆ. (ಚೀನಾದ ವಸ್ತುಗಳ ಗುಣಮಟ್ಟವು ಜಗತ್ತಿಗೆ ತಿಳಿದಿದೆ. ಪಾಕಿಸ್ತಾನಕ್ಕೆ ಈ ಹಿಂದೆ ಅಮೇರಿಕಾವು ಪ್ಯಾಟರ್ನ್ ಟ್ಯಾಂಕ್ ನೀಡಿತ್ತು ಅದನ್ನು ಭಾರತವು ೧೯೬೫ ರ ಯುದ್ಧದಲ್ಲಿ ಭಾರತವು ನಾಶಪಡಿಸಿತ್ತು. ಈಗ ಚೀನಾದ ಟ್ಯಾಂಕ್‌ಗಳಿಗೂ ಅದೇ ಗತಿ ಆಗಲಿದೆ, ಎಂಬುದನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕು ! – ಸಂಪಾದಕರು)