ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕರೋನಾದ ಸೋಂಕು : ಹೆಂಡತಿಯೊಂದಿಗೆ ಪ್ರತ್ಯೇಕಿಕರಣ

ಅಮೆರಿಕಾದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕರೋನಾದ ಸೋಂಕು ತಗಲಿದೆ. ಆದ್ದರಿಂದ ಅವರು ತಮ್ಮ ಪತ್ನಿ ಮೆಲಾನಿಯಾ ಟ್ರಂಪ್ ಅವರೊಂದಿಗೆ ಪ್ರತ್ಯೇಕಿಕರಣವಾಗಿದ್ದಾರೆ. ಟ್ರಂಪ್ ಅವರ ಸಲಹೆಗಾರ ಹೋಪ್ ಹಿಕ್ಸ್ ಅವರಿಗೆ ಕರೋನಾದ ಸೋಂಕು ತಗಲಿರುವುದು ಪತ್ತೆಯಾದಾಗ ಟ್ರಂಪ್‌ಗೂ ಕೊರೋನಾದ ಪರೀಕ್ಷಣೆ ಮಾಡಲಾಯಿತು

‘ಐಕಿಯಾ’ ಸಂಸ್ಥೆಯು ಯೋಗಾಸನ ಅಭಿಯಾನವನ್ನು ಕೀಳಾಗಿ ತೋರಿಸುವ ವೀಡಿಯೋವನ್ನು ಹಿಂಪಡೆದು ಕ್ಷಮೆಯಾಚಿಸಬೇಕು ! – ಅಮೇರಿಕಾದಲ್ಲಿ ಆಕ್ರೋಶಗೊಂಡ ಹಿಂದೂಗಳ ಆಗ್ರಹ

ಮೇಜು, ಖುರ್ಚಿ, ಕಪಾಟುಗಳು ಇತ್ಯಾದಿ ಪೀಠೋಪಕರಣಗಳನ್ನು ತಯಾರಿಸುವ ಬಹುರಾಷ್ಟ್ರೀಯ ವ್ಯಾಪಾರಿ ಸಂಸ್ಥೆ ‘ಐಕಿಯಾ’ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ ‘ಐಕಿಯಾ ಪ್ರಾಡಕ್ಟ್ಸ’ ವೀಡಿಯೋದಲ್ಲಿ ಯೋಗಾಸನದ ಅಭಿಯಾನವನ್ನು ಕೀಳಾಗಿ ತೋರಿಸಲಾಗಿದೆ. ಈ ವೀಡಿಯೋವನ್ನು ತಕ್ಷಣ ಹಿಂಪಡೆಯಬೇಕು ಮತ್ತು ಕ್ಷಮೆಯಾಚಿಸಬೇಕು, ಎಂದು ಹಿಂದೂಗಳು ಒತ್ತಾಯಿಸಿದ್ದಾರೆ.

ಸೋವಿಯತ್ ರಷ್ಯಾದಿಂದ ಸ್ವತಂತ್ರವಾಗಿದ್ದ ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಎರಡರಲ್ಲೂ ಯುದ್ಧ ಪ್ರಾರಂಭ

ಭಾರತ ಮತ್ತು ಚೀನಾ ನಡುವೆ ಯುದ್ಧವಾಗುವ ಸಾಧ್ಯತೆಯ ನಡುವೆಯೇ ಸೋವಿಯತ್ ರಷ್ಯಾದಿಂದ ಬೇರ್ಪಟ್ಟ ಎರಡು ದೇಶಗಳಾದ ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಗಡಿ ವಿವಾದದಿಂದ ಯುದ್ಧ ಆರಂಭವಾಗಿದೆ.

ಕೊರೋನಾ ಚೀನಾದಿಂದ ಬಂದಿರುವುದನ್ನು ನಾವು ಎಂದಿಗೂ ಮರೆಯುವುದಿಲ್ಲ, ಆದ್ದರಿಂದ ನಾವು ಮತ್ತೆ ಅಧಿಕಾರಕ್ಕೆ ಬಂದರೆ ಚೀನಾದೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳುತ್ತೇವೆ ! – ಡೊನಾಲ್ಡ್ ಟ್ರಂಪ್

ಟ್ರಂಪ್ ಇನ್ನೂ ಅಧಿಕಾರದಲ್ಲಿದ್ದಾರೆ, ಆದ್ದರಿಂದ ಈಗ ಚೀನಾದೊಂದಿಗೆ ಸಂಬಂಧವನ್ನು ಏಕೆ ಕಡಿದುಕೊಳ್ಳಬಾರದು ? ಅಥವಾ ಅವರು ಭಾರತೀಯ ರಾಜಕಾರಣಿಗಳಂತೆ ಸುಳ್ಳು ಭರವಸೆ ನೀಡಿ ಜನರನ್ನು ಮರುಳು ಮಾಡುತ್ತಿದ್ದಾರೆಯೇ ? ವಾಷಿಂಗ್ಟನ್ (ಅಮೇರಿಕಾ) – ಚೀನಾದಿಂದ ಕೊರೋನಾ ಬಂದಿರುವುದು ನಾವು ಎಂದಿಗೂ ಮರೆಯುವುದಿಲ್ಲ. ‘ದೇಶದ ಜನರು ನಮ್ಮನ್ನು ಪುನಃ ಅಧಿಕಾರಕ್ಕೆ ತರಲು ಮತ ಚಲಾಯಿಸಿದರೆ, ಅಮೆರಿಕವು ಚೀನಾದೊಂದಿಗಿನ ಎಲ್ಲ ಸಂಬಂಧಗಳನ್ನು ಕಡಿದುಕೊಳ್ಳುತ್ತದೆ’ ಎಂಬ ಆಶ್ವಾಸನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಅಧ್ಯಕ್ಷೀಯ ಪ್ರಚಾರದಲ್ಲಿ ಹೇಳಿದ್ದಾರೆ. ನವೆಂಬರ್ ೩ … Read more

ಭಾರತ ಇದ್ದಕ್ಕಿದ್ದಂತೆ ಚೀನಾ ಮೇಲೆ ದಾಳಿ ಮಾಡಬಹುದಾದರಿಂದ ಜಾಗರೂಕರಾಗಿರಿ ! – ಚೀನಾದ ನಿವೃತ್ತ ಸೈನ್ಯಾಧಿಕಾರಿ

ಭಾರತವು ಗಡಿಯಲ್ಲಿ ತನ್ನ ಸೈನ್ಯದ ಸಂಖ್ಯೆಯನ್ನು ೫೦ ಸಾವಿರದಿಂದ ೧ ಲಕ್ಷಕ್ಕೆ ಹೆಚ್ಚಿಸಿದೆ. ಸೈನ್ಯವು ಚೀನಾದ ಗಡಿಯಿಂದ ೫೦ ಕಿ.ಮೀ ದೂರದಲ್ಲಿ ನೇಮಿಸಿದೆ. ಕೆಲವೇ ಗಂಟೆಗಳಲ್ಲಿ ಅವರು ಇದ್ದಕ್ಕಿದ್ದಂತೆ ಆಕ್ರಮಣ ಮಾಡಿ ಚೀನಾವನ್ನು ಪ್ರವೇಶಿಸಬಹುದು.

ಮಾಲ್ಡೀವ್ಸ್ ಒಪ್ಪಿಗೆ ಇಲ್ಲದ ಕಾರಣ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ೧೯ ನೇ ಸಾರ್ಕ್ ಶೃಂಗಸಭೆ ರದ್ದು

೧೯ ನೇ ಸಾರ್ಕ್ ಶೃಂಗಸಭೆಯನ್ನು ಪಾಕಿಸ್ತಾನದಲ್ಲಿ ನಡೆಸಲು ಪ್ರಸ್ತಾಪಿಸಲಾಗಿತ್ತು; ಆದರೆ ಈ ಪ್ರಸ್ತಾಪವನ್ನು ತಡೆಯುವಲ್ಲಿ ಮಾಲ್ಡೀವ್ಸ್ ಭಾರತದ ಪರವಾಗಿ ನಿಂತಿತು. ಇದಕ್ಕೂ ಮುನ್ನ ೨೦೧೬ ರಲ್ಲಿ ಸಾರ್ಕ್ ಶೃಂಗಸಭೆಯನ್ನು ಮುಂದೂಡಲಾಗಿತ್ತು. ಆ ವರ್ಷ ಪಾಕಿಸ್ತಾನದಲ್ಲಿ ಸಮ್ಮೇಳನದ ಆಯೋಜಕವಾಗಿತ್ತು; ಆದರೆ ಪಾಕಿಸ್ತಾನ ಪ್ರಾಯೋಜಿತ ಉಗ್ರರು ಭಾರತೀಯ ಸೈನ್ಯದ ಮೇಲೆ ‘ಉರಿ ದಾಳಿ’ ನಡೆಸಿದರು.

ಪಾಕಿಸ್ತಾನವು ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ದ ನಾಗರಿಕರನ್ನು ಪ್ರಾಣಿಗಳಂತೆ ನೋಡಿಕೊಳ್ಳುತ್ತಿದೆ !

ಪಾಕಿಸ್ತಾನವು ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ದ ಜನರನ್ನು ಪ್ರಾಣಿಗಳಂತೆ ನೋಡಿಕೊಳ್ಳುತ್ತಿದೆ. ಪಾಕಿಸ್ತಾನ ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಂಡಿದೆ ಮತ್ತು ನಮ್ಮ ಧ್ವನಿಯನ್ನು ಅದುಮಿಡಲು ಪ್ರಯತ್ನಿಸುತ್ತಿದೆ; ಆದರೆ ನಮ್ಮ ಧ್ವನಿ ಕೇಳಿಕೊಳ್ಳಬಹುದು, ಎಂಬ ವಿಶ್ವಾಸ ನಮಗಿದೆ, ಎಂದು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ತಿನಲ್ಲಿ ಅಲ್ಲಿಯ ಕಾರ್ಯಕರ್ತ ಸಜ್ಜಾದ್ ರಾಜಾ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ೧೭೧ ಹಿಂದೂಗಳ ಸಾಮೂಹಿಕ ಮತಾಂತರ !

ಪಾಕಿಸ್ತಾನದ ಮಾನವಹಕ್ಕುಗಳ ಕಾರ್ಯಕರ್ತ ರಹತ್ ಆಸ್ಟಿನ್ ಇವರು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಅಹಸಾನ್-ಉಲ್-ತಾಲೀಮ್ ಈ ಮದರಸಾವು ಕರಾಚಿ ನಗರದಲ್ಲಿ ನಡೆದ ಒಂದು ಸಾಮೂಹಿಕ ಮತಾಂತರ ಕಾರ್ಯಕ್ರಮದಲ್ಲಿ ೧೭೧ ಹಿಂದೂಗಳನ್ನು ಮತಾಂತರಗೊಳಿಸಲಾಗಿದೆ, ಎಂದು ಮಾಹಿತಿ ನೀಡಿದ್ದಾರೆ.

ಡೆಮಾಕ್ರಟಿಕ್ ಪಕ್ಷವು ೧೪ ಭಾರತೀಯ ಭಾಷೆಗಳಲ್ಲಿ ಜಾಹೀರಾತುಗಳನ್ನು ಪ್ರಸಾರ ಮಾಡಿದೆ

ಅಮೆರಿಕಾದ ಅಧ್ಯಕ್ಷೀಯ ಚುನಾವಣಾ ಪ್ರಚಾರಕ್ಕಾಗಿ ಡೆಮಾಕ್ರಟಿಕ್ ಪಕ್ಷವು ೧೪ ಭಾರತೀಯ ಭಾಷೆಗಳಲ್ಲಿ ಜಾಹೀರಾತುಗಳನ್ನು ಪ್ರಸಾರ ಮಾಡಿದೆ. ಈ ಎಲ್ಲಾ ಜಾಹೀರಾತುಗಳು ಡಿಜಿಟಲ್ ರೂಪದಲ್ಲಿವೆ. ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯು ನವೆಂಬರ್ ೩ ರಂದು ನಡೆಯಲಿದ್ದು ಜೊ ಬಾಯಡೆನ್ ಇವರು ಡೆಮಾಕ್ರಟಿಕ್ ಪಕ್ಷದ ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ.

ನೇಪಾಳದ ಹಿತಕ್ಕಾಗಿ ನೇಪಾಳವನ್ನು ಮತ್ತೊಮ್ಮೆ ‘ಹಿಂದೂ ರಾಷ್ಟ್ರ’ ಎಂದು ಘೋಷಿಸಿ ! – ಕಮಲ ಥಾಪಾ, ಮಾಜಿ ಉಪ ಪ್ರಧಾನಿ

ನೇಪಾಳದ ಹಿತದೃಷ್ಟಿಯಿಂದ ನೇಪಾಳವನ್ನು ಮತ್ತೊಮ್ಮೆ ‘ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕು, ಎಂದು ನೇಪಾಳದ ‘ರಾಷ್ಟ್ರೀಯ ಪ್ರಜಾತಂತ್ರ ಪಕ್ಷ’ ದ ನಾಯಕ ಮತ್ತು ನೇಪಾಳದ ಮಾಜಿ ಉಪ ಪ್ರಧಾನಿ ಕಮಲ್ ಥಾಪಾ ಇವರು ಸೆಪ್ಟೆಂಬರ್ ೧೯ ರಂದು ನಡೆದ ‘ಸಂವಿಧಾನ ದಿನಾಚರಣೆಯ’ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.