ಅರುಣಾಚಲ ಪ್ರದೇಶ ಭಾರತದ ಭೂಪ್ರದೇಶ ! ಅಮೇರಿಕಾದಿಂದ ಚೀನಾಗೆ ಬುದ್ಧಿಮಾತು

ವಾಷಿಂಗ್ಟನ್ (ಅಮೇರಿಕಾ) – ಅರುಣಾಚಲ ಪ್ರದೇಶವನ್ನು ತನ್ನ ಭೂಪ್ರದೇಶವೆಂದು ಹೇಳಿಕೊಂಡಿದ್ದ ಚೀನಾಗೆ ಅಮೆರಿಕವು ವಾಗ್ದಾಳಿ ನಡೆಸಿದೆ. ‘ಅರುಣಾಚಲ ಪ್ರದೇಶ ಭಾರತದ ಭಾಗವಾಗಿದೆ’ ಎಂದು ಅಮೇರಿಕಾ ಹೇಳಿದೆ. ಗಡಿ ವಿವಾದಗಳನ್ನು ದ್ವಿಪಕ್ಷೀಯ ಮಾತುಕತೆಗಳ ಮೂಲಕ ಬಗೆಹರಿಸುವಂತೆ ಅಮೆರಿಕಾವು ಭಾರತ ಮತ್ತು ಚೀನಾಗೆ ಕರೆ ನೀಡಿದೆ. ಯಾವುದೇ ಸಂದರ್ಭವಿಷಯದಲ್ಲೂ ಸೈನ್ಯಬಲವನ್ನು ಬಳಸುವುದನ್ನು ವಿರೋಧಿಸುವುದಾಗಿ ಅಮೇರಿಕಾ ಸ್ಪಷ್ಟ ಪಡಿಸಿದೆ.

ಅಮೇರಿಕಾದ ಗೃಹ ಇಲಾಖೆಯು ಬಿಡುಗಡೆ ಮಾಡಿದ ಮನವಿಯ ಪ್ರಕಾರ, ಅರುಣಾಚಲ ಪ್ರದೇಶವು ಸುಮಾರು ೬೦ ವರ್ಷಗಳಿಂದ ಭಾರತದ ಭಾಗವೆಂದು ಅಮೆರಿಕಾ ಪರಿಗಣಿಸಿದೆ. ಪ್ರತ್ಯಕ್ಷ ನಿಯಂತ್ರಣ ರೇಖೆಯಲ್ಲಿ ಯಾವುದೇ ರೀತಿಯ ನುಸುಳುವಿಕೆ, ಸೈನ್ಯ ಅಥವಾ ನಾಗರಿಕರ ಮೂಲಕ ಭೂಪ್ರದೇಶದ ಮೇಲೆ ತಮ್ಮದೆಂದು ಹೇಳಿಕೊಳ್ಳುವ ಏಕಪಕ್ಷಿಯ ಪ್ರಯತ್ನವನ್ನು ಅಮೇರಿಕಾ ವಿರೋಧಿಸಿದೆ.