ಫ್ರಾನ್ಸ್‌ನ ಅಧ್ಯಕ್ಷರಿಗೆ ಅನಿಸುತ್ತಿರುವ ಹಾಗೆ ಇತರ ದೇಶಗಳ ಮುಖಂಡರಿಗೆ ಅನಿಸುತ್ತದೋ ಅಥವಾ ಇಲ್ಲ, ಎಂಬುದನ್ನು ಅವರು ಮನಮುಕ್ತವಾಗಿ ಹೇಳಬೇಕು !
ಪ್ಯಾರಿಸ್ (ಫ್ರಾನ್ಸ್) – ಇಂದು ಜಗತ್ತಿನಲ್ಲಿ ಇಸ್ಲಾಂ ಎಂಬ ಧರ್ಮವೇ ಸಂಕಟದಲ್ಲಿದೆ. ‘ನಮಗೆ ಕಟ್ಟರ(ಅಸಹಿಷ್ಣು/ ಛಲವಾದಿ) ಇಸ್ಲಾಮ್‌ವಾದಿಗಳೊಂದಿಗೆ ಹೋರಾಡಬೇಕಿದೆ’ ಎಂದು ಫ್ರೆಂಚ್‌ನ ರಾಷ್ಟ್ರಪತಿ ಇಮ್ಯಾನುಯೆಲ್ ಮ್ಯಾಕ್ರೋಂ ಒಂದು ಭಾಷಣದ ಮೂಲಕ ಕರೆ ನೀಡಿದರು. ಇದನ್ನು ‘ಎ.ಎಫ್.ಪಿ.’ ಈ ಸುದ್ದಿ ಸಂಸ್ಥೆಯು ವರದಿ ಮಾಡಿದೆ. ಮ್ಯಾಕ್ರೊಂ ಇವರು ಈ ಹಿಂದೆ ಇಸ್ಲಾಂಅನ್ನು ‘ಕಟ್ಟರವಾದಿ’ ಹಾಗೂ ‘ದ್ವೇಷ ಹಬ್ಬಿಸುವಂತಹದ್ದು’, ಎಂದು ಕರೆದಿದ್ದರು.
Macron no longer hiding his feelings about Islam. No longer radical Islam, now it’s just Islam that is the problem https://t.co/ljRK3LuNMM
— Bruno Maçães (@MacaesBruno) October 2, 2020
ಫ್ರಾನ್ಸ್‌ನಲ್ಲಿ ಪ್ರಸ್ತುತ ೬೦ ರಿಂದ ೬೫ ಲಕ್ಷ ಮುಸಲ್ಮಾನರಿದ್ದಾರೆ. ಕೆಲವು ತಿಂಗಳ ಹಿಂದೆ ಮ್ಯಾಕ್ರೊಂ ವಿದೇಶಿ ಇಮಾಮ್‌ರಿಗೆ ಫ್ರಾನ್ಸ್ ಪ್ರವೇಶವನ್ನು ನಿಷೇಧಿಸಿದ್ದರು. ಅವರು ‘ನಾವು ಕಟ್ಟರ ಇಸ್ಲಾಮ್‌ವಾದಿಗಳ ವಿರೋಧಿಯಾಗಿದ್ದೇವೆ’ ಎಂದು ಹೇಳಿದರು. ಫ್ರಾನ್ಸ್‌ನಲ್ಲಿರುವ ಇಮಾಮ್‌ಗಳು ಸ್ಥಳೀಯ ಫ್ರೆಂಚ್ ಭಾಷೆಯನ್ನು ಕಲಿಯುವುದು ಅಗತ್ಯವಿದೆ. ಅವರು ಇಲ್ಲಿಯ(ಫ್ರಾನ್ಸ್‌ನ) ಕಾನೂನುಗಳನ್ನು ಪಾಲಿಸುವುದು ಅಗತ್ಯವಿದೆ, ಎಂದು ಹೇಳಿದ್ದಾರೆ.