ಹಿಂದೂ ಧರ್ಮವನ್ನು ಭಯೋತ್ಪಾದನೆಗೆ ಜೋಡಿಸುವ ಪುಸ್ತಕಗಳನ್ನು ಹಿಂಪಡೆದ ಬ್ರಿಟಿಷ್ ಶಾಲೆ ಮತ್ತು ಪ್ರಕಾಶಕರು !

ಬ್ರಿಟನ್‌ ಹಿಂದೂಗಳ ವಿರೋಧದ ಪರಿಣಾಮ

ಹಿಂದೂ ಧರ್ಮದ ಅವಮಾನವಾಗುತ್ತಿದ್ದರೆ, ವಿದೇಶದಲ್ಲಿರುವ ಹಿಂದೂಗಳು ತಕ್ಷಣ ಎಚ್ಚರಗೊಂಡು ಪ್ರತಿಭಟಿಸುತ್ತಾರೆ, ಆದರೆ ಭಾರತದಲ್ಲಿ ಹಿಂದೂಗಳು ನಿಷ್ಕ್ರಿಯರಾಗಿದ್ದಾರೆ ಮತ್ತು ನಿದ್ರೆಯಲ್ಲಿರುತ್ತಾರೆ !

ನವದೆಹಲಿ : ಬ್ರಿಟನ್‌ನ ಒಂದು ಶಾಲೆಯ ಜಾಲತಾಣದಿಂದ ‘ಬ್ರಿಟಿಷ್ ಜಿ.ಸಿ.ಎಸ್.ಇ. ಧಾರ್ಮಿಕ ಸ್ಟಡೀಸ್ ವರ್ಕ್‌ಬುಕ್’ಅನ್ನು ತೆಗೆಯಲಾಗಿದೆ. ಅದೇ ರೀತಿ ಪ್ರಕಾಶಕರು ಪುಸ್ತಕವನ್ನು ಹಿಂತೆಗೆದುಕೊಂಡಿದ್ದಾರೆ. ಇಲ್ಲಿನ ಹಿಂದೂಗಳ ವಿರೋಧದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈ ಪುಸ್ತಕದಲ್ಲಿ ಹಿಂದೂಗಳನ್ನು ಭಯೋತ್ಪಾದಕರು ಎಂದು ಹೇಳಲಾಗಿತ್ತು.

ವೆಸ್ಟ್ ಮಿಡ್‌ಲ್ಯಾಂಡ್ಸ್‌ನ ಸೋಲಿಹುಲ್ ಪ್ರದೇಶದ ಲ್ಯಾಂಗ್ಲೆ ಸ್ಕೂಲ್‌ನ ಜಾಲತಾಣದಿಂದ ಈ ಪುಸ್ತಕಗಳನ್ನು ಡೌನ್‌ಲೋಡ್ ಮಾಡಬಹುದಾಗಿತ್ತು. ಈ ಪುಸ್ತಕದಲ್ಲಿ ಜಗತ್ತಿನ ಎಲ್ಲ ಧರ್ಮಗಳ ಬಗ್ಗೆ ಮಾಹಿತಿಯನ್ನು ಒದಗಿಸಲಾಗಿದ್ದು, ತದನಂತರ ಅದರ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸಬೇಕಿತ್ತು. ಈ ಪುಸ್ತಕದ ೪ ನೇ ಪುಟದಲ್ಲಿ ಹಿಂದೂ ಧರ್ಮದ ವರ್ಣನೆ ಇತ್ತು ಅದರಲ್ಲಿ ಗೀತೆಯಲ್ಲಿ ಕೃಷ್ಣನು ಅರ್ಜುನನಿಗೆ ಶಸ್ತ್ರ ಹಿಡಿದು ಹೋರಾಡಲು ಹೇಳುತ್ತಿರುವ, ಈ ಬಗ್ಗೆ ಮಾಹಿತಿ ಇತ್ತು. ‘ಒಂದುವೇಳೆ ಕಾರಣ ಯೋಗ್ಯವಾಗಿದ್ದರೇ, ಹಿಂದೂಗಳು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳಬೇಕು. ಕೆಲವು ಹಿಂದೂಗಳು ತಮ್ಮ ಪರಂಪರೆಗಳನ್ನು ರಕ್ಷಿಸಲು ಭಯೋತ್ಪಾದನೆಯನ್ನು ಆಶ್ರಯಿಸಿದ್ದಾರೆ’ ಎಂದು ಪುಸ್ತಕದಲ್ಲಿ ಬರೆಯಲಾಗಿತ್ತು.