‘ಐಕಿಯಾ’ ಸಂಸ್ಥೆಯು ಯೋಗಾಸನ ಅಭಿಯಾನವನ್ನು ಕೀಳಾಗಿ ತೋರಿಸುವ ವೀಡಿಯೋವನ್ನು ಹಿಂಪಡೆದು ಕ್ಷಮೆಯಾಚಿಸಬೇಕು ! – ಅಮೇರಿಕಾದಲ್ಲಿ ಆಕ್ರೋಶಗೊಂಡ ಹಿಂದೂಗಳ ಆಗ್ರಹ

ನೆವಾಡಾ (ಅಮೇರಿಕಾ) – ಮೇಜು, ಖುರ್ಚಿ, ಕಪಾಟುಗಳು ಇತ್ಯಾದಿ ಪೀಠೋಪಕರಣಗಳನ್ನು ತಯಾರಿಸುವ ಬಹುರಾಷ್ಟ್ರೀಯ ವ್ಯಾಪಾರಿ ಸಂಸ್ಥೆ ‘ಐಕಿಯಾ’ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ ‘ಐಕಿಯಾ ಪ್ರಾಡಕ್ಟ್ಸ’ ವೀಡಿಯೋದಲ್ಲಿ ಯೋಗಾಸನದ ಅಭಿಯಾನವನ್ನು ಕೀಳಾಗಿ ತೋರಿಸಲಾಗಿದೆ. ಈ ವೀಡಿಯೋವನ್ನು ತಕ್ಷಣ ಹಿಂಪಡೆಯಬೇಕು ಮತ್ತು ಕ್ಷಮೆಯಾಚಿಸಬೇಕು, ಎಂದು ಹಿಂದೂಗಳು ಒತ್ತಾಯಿಸಿದ್ದಾರೆ.

ಅಮೆರಿಕಾದ ಹಿಂದೂ ಧಾರ್ಮಿಕ ಮುಖಂಡ ರಾಜನ್ ಜೇದ್ ಈ ಬಗ್ಗೆ ಮನವಿಯನ್ನು ನೀಡಿದ್ದಾರೆ.

ಈ ಮನವಿಯಲ್ಲಿ, ‘ಐಕಿಯಾ’ ಸಂಸ್ಥೆ ನಿರ್ಮಿಸಿದ ವೀಡಿಯೋದಲ್ಲಿ ಯೋಗದ ಪ್ರಾಚೀನ ಪ್ರಾಮುಖ್ಯತೆಯನ್ನು ಕೀಳಾಗಿ ತೋರಿಸಲಾಗಿದೆ, ಇದು ಅತ್ಯಂತ ಅಯೋಗ್ಯವಗಿದೆ ಎಂದು ಅವರು ಹೇಳಿದರು. ಯೋಗವು ದೇವರೊಂದಿಗೆ ಏಕರೂಪತೆಯನ್ನು ಸಾಧಿಸುತ್ತದೆ. ಇದು ಹಿಂದೂ ತತ್ತ್ವಶಾಸ್ತ್ರದ ೬ ಶಾಖೆಗಳ ಪೈಕಿ ಒಂದಾಗಿದೆ. ಅದು ಚೈತನ್ಯ ಪಡೆಯಲು ಹಾಗೂ ಸ್ವಂತದ ಶುದ್ಧೀಕರಣಕ್ಕಾಗಿ ಹಾಗೂ ವಿಮೋಚನೆಗಾಗಿ ಇದೆ. ಹೀಗಿರುವಾಗ ವ್ಯಾಪಾರದ ದುರಾಸೆಯಿಂದ, ಮಾರ್ಟಿನಿ (ಮದ್ಯದ ಒಂದು ಪ್ರಕಾರ) ಗಾಜಿನ ಲೋಟದೊಂದಿಗೆ ಯೋಗ ಮತ್ತು ಆಸನಗಳನ್ನು ಹೋಲಿಸುವುದು ಅತ್ಯಂತ ಅಯೋಗ್ಯವಾಗಿದೆ.

ಹಿಂದೂ ಧರ್ಮದ ನಂಬಿಕೆ, ಪದ್ಧತಿಗಳು ಮತ್ತು ಸಂಪ್ರದಾಯಗಳನ್ನು ವಾಣಿಜ್ಯ ಅಥವಾ ಇತರ ಉದ್ದೇಶಗಳಿಗಾಗಿ ಬಳಸಬಾರದು; ಏಕೆಂದರೆ ಇದು ಹಿಂದೂ ಭಕ್ತರ ಧಾರ್ಮಿಕ ಭಾವನೆಗಳನ್ನು ನೋಯಿಸುತ್ತದೆ. ಧಾರ್ಮಿಕ ವಿಷಯಗಳು ಮತ್ತು ಆಧ್ಯಾತ್ಮಿಕ ಆಚರಣೆಗಳನ್ನು ಅಪಹಾಸ್ಯ ಮಾಡಬಾರದು.

ಈ ವೀಡಿಯೋವನ್ನು ಪ್ರಸಾರ ಮಾಡುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಇಂಗ್ಕ್ರಾ ಸಮೂಹದ ಮುಖ್ಯ ಕಾರ್ಯನಿರ್ವಾಹಕರಾದ ಜೆಸ್ಪರ್ ಬ್ರಾಡಿನ್ ಮತ್ತು ಇಂಟರ್ ಐಕಿಯಾ ಗ್ರೂಪ್‌ನ ಮುಖ್ಯ ಕಾರ್ಯನಿರ್ವಾಹಕ ಟಾರ್ಬ್ಜೆರ್ನ್ ಲೋಫ್ ಕ್ಷಮೆಯಾಚಿಸಬೇಕು” ಎಂದು ಹೇಳಿದ್ದಾರೆ.