ಇಸ್ಲಾಂ ಧರ್ಮದ ಹದೀಸ್‌ನ ಸಾಲುಗಳನ್ನು ಹಾಡಿನಲ್ಲಿ ಬಳಸಿದ್ದಕ್ಕಾಗಿ ಪಾಪ್ ಗಾಯಕಿ ರಿಹಾನಾ ಇವಳಿಂದ ಕ್ಷಮೆಯಾಚನೆ

ಇಸ್ಲಾಂ ಧರ್ಮವನ್ನು ಅವಮಾನಿಸುವವರು ‘ಮತಾಂಧರಿಂದ ಕೊಲ್ಲಲ್ಪಡುತ್ತಾರೆ’ ಎಂಬ ಭಯದಿಂದ ತಕ್ಷಣ ಕ್ಷಮೆಯಾಚಿಸುತ್ತಾರೆ. ಮತ್ತೊಂದೆಡೆ ಹಿಂದೂಗಳ ಶ್ರದ್ಧಾ ಸ್ಥಾನಗಳನ್ನು ಅವಮಾನಿಸಿದಾಗ ಹಿಂದೂಗಳು ಅದನ್ನು ಕಾನೂನು ರೀತ್ಯಾ ವಿರೋಧಿಸಿದರೂ ಯಾರೂ ಕ್ಷಮೆಯಾಚಿಸುವುದಿಲ್ಲ !

ಬಾರ್ಬಾಡೋಸ್ (ವೆಸ್ಟ್ ಇಂಡೀಸ್) – ಪ್ರಸಿದ್ಧ ಪಾಪ್ ಗಾಯಕಿ ರಿಹಾನಾಳು ತನ್ನ ಕಾರ್ಯಕ್ರಮವೊಂದರಲ್ಲಿ ಹಾಡಿದ ಹಾಡಿನಲ್ಲಿ ಇಸ್ಲಾಂ ಧರ್ಮದ ಅವಮಾನ ಆಗಿದ್ದ ಬಗ್ಗೆ ಕ್ಷಮೆಯಾಚಿಸಿದ್ದಾಳೆ. ಈ ಹಾಡಿನಲ್ಲಿ, ರಿಹಾನಾಳು ಇಸ್ಲಾಂ ಧರ್ಮದ ಹದೀಸ್‌ನ ಕೆಲವು ಸಾಲುಗಳನ್ನು ಬಳಸಿದ್ದಳು. ಇದರಿಂದ ಆಕೆ ಟೀಕೆಗೆ ಗುರಿಯಾದರು. ‘ಈ ಸಾಲುಗಳನ್ನು ಉದ್ದೇಶಪೂರ್ವಕವಾಗಿ ಬಳಸಿರಲಿಲ್ಲ; ಆದರೂ ಈ ಕೃತಿಯು ಬೇಜವಾಬ್ದಾರಿತನದ್ದಾಗಿದೆ’ ಎಂದು ರಿಹಾನಾ ಹೇಳಿದ್ದಾಳೆ. ಮಹಮ್ಮದ್ ಪೈಗಂಬರ್ ಇವರು ಹದೀಸ್‌ನಲ್ಲಿಯ ಶಬ್ದಗಳನ್ನು ಉಚ್ಚರಿಸಿದ್ದರು ಎಂಬ ನಂಬಿಕೆಯಿದೆ.