ಹಿಂದೂಗಳ ಬೇಡಿಕೆಗಾಗಿ ವಾವುನಿಯಾ (ಶ್ರೀಲಂಕಾ)ದಲ್ಲಿ ಹಿಂದೂಗಳ ಭವ್ಯ ಮೆರವಣಿಗೆ

೨ ಸಾವಿರದ ೫೦೦ ಹಿಂದೂಗಳ ಸಹಭಾಗ

ವಾವುನಿಯಾ (ಶ್ರೀಲಂಕಾ) – ಶ್ರೀಲಂಕಾದಲ್ಲಿ ಹಿಂದುತ್ವನಿಷ್ಠ ನಾಯಕ ಶ್ರೀ. ಸಚಿತಾನಂದನಜಿ, ಶಿವಸೇನಾಯಿಯವರ ನೇತೃತ್ವದಲ್ಲಿ ಎಲ್ಲಾ ಹಿಂದೂ ಸಂಘಟನೆಗಳು ಸರಕಾರದ ಬಳಿ ೬ ಕಲಂನ ಬೇಡಿಕೆಗಳನ್ನು ಮಂಡಿಸಿ ಲಂಕಾದ ವಾವುನಿಯಾದಲ್ಲಿ ಭವ್ಯ ಮೆರವಣಿಗೆ ನಡೆಸಿದರು. ಸುಮಾರು ೨೫೦೦ ಹಿಂದೂಗಳು ಇದರಲ್ಲಿ ಭಾಗವಹಿಸಿದ್ದರು.

ಮೆರವಣಿಗೆಯಲ್ಲಿ ಭಾಗವಹಿಸಿದ ಹಿಂದೂಗಳು

೧. ಅಕ್ಟೋಬರ್ ೧ ರಂದು ಬೆಳಿಗ್ಗೆ ೮ ಗಂಟೆಗೆ ಕುರುಮಾನಕಡೂ ಶ್ರೀ ಕಾಲಿಮಾನ ದೇವಸ್ಥಾನದಿಂದ ಪ್ರಾರಂಭವಾಗಿ ಶ್ರೀ ಕಾಂದಸಾಮಿ ದೇವಸ್ಥಾನದಲ್ಲಿ ಕೊನೆಗೊಂಡಿತು. ಈ ಮೆರವಣಿಗೆಯಲ್ಲಿ ೭ ದೃಶ್ಯಪಟಗಳು, ೫೦ ಬಟ್ಟೆ ಫಲಕಗಳು ಮತ್ತು ಸುಮಾರು ೧೦೦೦ ಹಸ್ತಫಲಕಗಳು ಇದ್ದವು. ಇದರಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿದ್ದರು. ಮಹಿಳೆಯರು ಸಾಂಪ್ರದಾಯಿಕ ಶೈಲಿಯಲ್ಲಿ ದೀಪಗಳನ್ನು ಹಾಗೂ ಕಲಶಗಳನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡಿದ್ದರು. ಹಲವರು ನಂದಿ ಧ್ವಜವನ್ನು ಹಾರಿಸಿದ್ದರು. ಮೆರವಣಿಗೆಯ ಉದ್ದಕ್ಕೂ ಭಜನೆಗಳನ್ನು ಹಾಡಲಾಯಿತು. ಈ ಮೆರವಣಿಗೆ ೨ ಕಿ.ಮೀ. ಉದ್ದವಾಗಿತ್ತು. ೪ ಖಂಡಗಳ ೧೦ ದೇಶಗಳ ಪ್ರಮುಖ ಹಿಂದೂ ಸಂಘಟನೆಗಳು ಲಂಕಾದಲ್ಲಿ ಹಿಂದೂಗಳೊಂದಿಗೆ ಒಗ್ಗಟ್ಟನ್ನು ತೋರಿಸಲು ಅಭಿನಂದನಾ ಸಂದೇಶಗಳನ್ನು ಕಳುಹಿಸಿದ್ದವು.

೨. ಲಂಕೆಯಲ್ಲಿ ಸರಕಾರವು ಗೋಹತ್ಯೆ ನಿಷೇಧದ ನಿರ್ಣಯ ತೆಗೆದುಕೊಂಡ ಬಗ್ಗೆ ಆನಂದ ವ್ಯಕ್ತಪಡಿಸಲು ಈ ಮೆರವಣಿಗೆಯನ್ನು ನಡೆಸಲು ಹಿಂದುತ್ವನಿಷ್ಠ ಶ್ರೀ. ಮಾಧವನ್ ಇವರು ಶ್ರೀ. ಸಚಿತಾನಂದನಜಿ ಭೇಟಿಯಾದರು. ಆಗ ಅವರು ವಾವೂನಿಯಾದಲ್ಲಿ ಒಂದು ಬೃಹತ್ ‘ಹಿಂದೂ ಜಾಗೃತಿ ಮೆರವಣಿಗೆ’ ಆಯೋಜಿಸುವ ಹಾಗೂ ಈ ಮೂಲಕ ಹಿಂದೂಗಳ ಕಲ್ಯಾಣಕ್ಕಾಗಿ ಕಾನೂನುಗಳನ್ನು ತರಲು ಸರಕಾರದ ಮೇಲೆ ಒತ್ತಡ ಹೇರಬೇಕು ಎಂದು ಸೂಚಿಸಿದರು. ಅದಕ್ಕನುಸಾರ ೬ ಸದಸ್ಯರ ಸಮಿತಿಯನ್ನು ನೇಮಿಸಲಾಯಿತು ಮತ್ತು ಈ ದೊಡ್ಡ ಮೆರವಣಿಗೆಯನ್ನು ಆಯೋಜಿಸಲಾಯಿತು. ಇದರ ಫಲವಾಗಿ ಇತರ ಅನೇಕ ಹಿಂದೂ ಸಂಘಟನೆಗಳು ಈಗ ಅಂತಹ ಮೆರವಣಿಗೆಗಳನ್ನು ತಮ್ಮತಮ್ಮ ಸ್ಥಳಗಳಲ್ಲಿ ನಡೆಸಲು ಉತ್ಸುಕವಾಗಿದ್ದಾರೆ.