ಚೀನಾದಿಂದ ಬ್ರಹ್ಮಪುತ್ರ ನದಿಗೆ ಬೃಹತ್ ಅಣೆಕಟ್ಟು ನಿರ್ಮಾಣ !

ಟಿಬೆಟ್‌ನಿಂದ ಉಗಮವಾಗುವ ಬ್ರಹ್ಮಪುತ್ರ ನದಿಯಲ್ಲಿ ಚೀನಾ ಬೃಹತ್ ಅಣೆಕಟ್ಟು ನಿರ್ಮಿಸಲಿದೆ. ಅಣೆಕಟ್ಟು ವಿಶ್ವದ ಅತಿದೊಡ್ಡ ಅಣೆಕಟ್ಟು ಚೀನಾದ ಥ್ರೀ ಜಾರ್ಜ್‌ಗಿಂತ ಮೂರು ಪಟ್ಟು ಹೆಚ್ಚು ವಿದ್ಯುತ್ ಉತ್ಪಾದಿಸುವ ಕ್ಷಮತೆ ಹೊಂದಲಿದೆ. ಚೀನಾದ ಅಣೆಕಟ್ಟು ಈಶಾನ್ಯ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಬರ ಪರಿಸ್ಥಿತಿಗೆ ಕಾರಣವಾಗಬಹುದು ಎಂಬ ಆತಂಕಗಳಿವೆ.

ಪಾಕಿಸ್ತಾನದಲ್ಲಿ ಸರಕಾರ ಹಿಂದೂಗಳ ಮನೆಗಳನ್ನು ಮತ್ತೆ ಕೆಡವಿತು

ಸಿಂಧ್ ಪ್ರಾಂತ್ಯದ ಭಿಲ್ ಜಾತಿಯ ಹಿಂದೂಗಳ ಅನೇಕ ಮನೆಗಳನ್ನು ಸರಕಾರ ನೆಲಸಮ ಮಾಡಿದೆ. ಈ ಘಟನೆಯ ವಿಡಿಯೋ ಪ್ರಸಾರವಾದ ನಂತರ ಈ ಕ್ರಮವನ್ನು ನಿಲ್ಲಿಸಲಾಗಿದೆ; ಆದರೆ ಮತಾಂಧರು ಈ ಮನೆಯಲ್ಲಿದ್ದ ಹಿಂದೂಗಳನ್ನು ಅಲ್ಲಿಂದ ಪಲಾಯನ ಮಾಡುವಂತೆ ಮಾಡಿದ್ದಾರೆ.

ಇನ್ನು ಪಾಕಿಸ್ತಾನದಲ್ಲಿ ಅತ್ಯಾಚಾರ ಮಾಡುವವರನ್ನು ನಪುಂಸಕರನ್ನಾಗಿ ಮಾಡಲಾಗುವುದು

ಪಾಕಿಸ್ತಾನದಲ್ಲಿ ಇನ್ನು ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಚುಚ್ಚುಮದ್ದಿನ ಮೂಲಕ ನಪುಂಸಕರನ್ನಾಗಿಸುವ ಶಿಕ್ಷೆ ವಿಧಿಸಲಾಗುವುದು. ಪಾಕಿಸ್ತಾನ ಸರಕಾರದ ಕ್ಯಾಬಿನೆಟ್ ಸಭೆಯಲ್ಲಿ ಇಂತಹ ಕರಡು ಕಾನೂನನ್ನು ಮಂಡಿಸಲಾಯಿತು.

ಫ್ರಾನ್ಸ್‌ನ ‘ಆ’ ಶಾಲೆಯಲ್ಲಿನ ‘ಎಲ್ಲರನ್ನು ಕೊಲ್ಲುವೆವು’ ಎಂದು ಮತಾಂಧರಿಂದ ಬೆದರಿಕೆ

ಕೆಲವು ವಾರಗಳ ಹಿಂದೆ ಫ್ರಾನ್ಸ್‌ನ ಶಾಲೆಯೊಂದರ ಶಿಕ್ಷಕ ಸ್ಯಾಮ್ಯುಯೆಲ್ ಪ್ಯಾಟಿಯು ‘ಶಾರ್ಲಿ ಹೆಬ್ದೋ’ ಈ ಪತ್ರಿಕೆಯಲ್ಲಿ ಪ್ರಕಟವಾದ ಪ್ರವಾದಿ ಮುಹಮ್ಮದ್ ಅವರ ವ್ಯಂಗ್ಯಚಿತ್ರಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿದ್ದರು. ಆದ್ದರಿಂದ ಮತಾಂಧ ವಿದ್ಯಾರ್ಥಿಯೊಬ್ಬ ಆ ಶಿಕ್ಷಕಕರ ಕತ್ತು ಸೀಳಿದ್ದನು ಅವರ ಕೊಲೆಗೈದನು.

ಭಯೋತ್ಪಾದಕ ಹಫೀಜ್ ಸಯೀದ್‌ಗೆ ೧೦ ವರ್ಷಗಳ ಸೆರೆಮನೆ ಶಿಕ್ಷೆ

ಮುಂಬಯಿನಲ್ಲಿ ನಡೆದ ೨೬/೧೧ ಭಯೋತ್ಪಾದಕ ದಾಳಿಯ ಮುಖ್ಯ ಸೂತ್ರದಾರ ಮತ್ತು ‘ಜಮಾತ್-ಉದ್-ದವಾ’ದ ಮುಖ್ಯಸ್ಥ ಹಫೀಜ್ ಸಯೀದ್ ಅವರಿಗೆ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ೧೦ ವರ್ಷಗಳ ಸೆರೆಮನೆವಾಸದ ಶಿಕ್ಷೆ ವಿಧಿಸಿದೆ.

ಬಾಂಗ್ಲಾದೇಶ ಕ್ರಿಕೆಟಿಗ ಶಾಕೀಬ್ ಅಲ್ ಹಸನ್‌ರಿಂದ ಕ್ಷಮೆಯಾಚನೆ

ಬಾಂಗ್ಲಾದೇಶ ಕ್ರಿಕೆಟ ಸಂಘದ ಕ್ರಿಕೆಟಿಗ ಶಾಕೀಬ್ ಅಲ್ ಹಸನ್ ಅವರು ಕೋಲಕಾತಾದಲ್ಲಿ ಶ್ರೀ ಮಹಾಕಾಳಿ ಮಾತೆಯ ಪೂಜೆಯನ್ನು ಮಾಡಿದ ನಂತರ ಮತಾಂಧರಿಂದ ಬೆದರಿಕೆಗಳು ಬರಲಾರಂಭವಾಗಿದೆ. ಇದಕ್ಕಾಗಿ ಅವರು ಕ್ಷಮೆಯಾಚಿಸಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಓರ್ವ ಮಾಡೆಲ್‌ನ ಮಾದಕ ಫೋಟೋವನ್ನು ಲೈಕ್ ಮಾಡಿದ್ದಕ್ಕೆ ಟೀಕೆ

ಕ್ರೈಸ್ತರ ಸರ್ವೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್‌ರು ತಮ್ಮ ಅಧಿಕೃತ ‘ಇನ್‌ಸ್ಟಾಗ್ರಾಮ್’ ಖಾತೆಯಲ್ಲಿ ಬ್ರೆಜಿಲ್‌ನ ಮಾಡೆಲ್(ರೂಪದರ್ಶಿ) ನತಾಲಿಯಾ ಗರಿಬೊಟೊ ಅವರ ಅರೆನಗ್ನ ಮಾದಕ ಛಾಯಾಚಿತ್ರಕ್ಕೆ ‘ಲೈಕ್’(ಇಷ್ಟ) ಮಾಡಿದ್ದಾರೆ. ಇದರಿಂದ ಸಾಮಾಜಿಕ ಮಾಧ್ಯಮಗಳಿಂದ ವ್ಯಾಪಕವಾಗಿ ಟೀಕೆಯಾಗಲು ಆರಂಭವಾಗಿರುವುದನ್ನು ನೋಡಿ ಪೋಪ್‌ರು ‘ಅನ್‌ಲೈಕ್’(ಇಷ್ಟವಿಲ್ಲ) ಮಾಡಿದ್ದಾರೆ.

ಪಾಕಿಸ್ತಾನದಲ್ಲಿ ಪ್ರತಿದಿನ ೧೧ ಅತ್ಯಾಚಾರ ಘಟನೆಗಳು ನಡೆಯುತ್ತಿವೆ !

ಪಾಕಿಸ್ತಾನದಲ್ಲಿ ಪ್ರತಿದಿನ ೧೧ ಅತ್ಯಾಚಾರ ಘಟನೆಗಳು ನಡೆಯುತ್ತಿದ್ದರೆ, ಕಳೆದ ೬ ವರ್ಷಗಳಲ್ಲಿ ದೇಶದಲ್ಲಿ ೨೨ ಸಾವಿರ ಕ್ಕೂ ಹೆಚ್ಚು ಅತ್ಯಾಚಾರ ಘಟನೆಗಳು ನಡೆದಿವೆ; ಆದರೆ ಈ ಘಟನೆಗಳಲ್ಲಿ ಕೇವಲ ೭೭ ಪ್ರಕರಣಗಳಲ್ಲಿ ಆರೋಪಿಗಳನ್ನು ಶಿಕ್ಷೆಗೊಳಪಡಿಸಲಾಗಿದೆ.

ಡೊನಾಲ್ಡ್ ಟ್ರಂಪ್‌ಇವರಿಂದ ತಮ್ಮ ಅಧಿಕಾರಾವಧಿ ಮುಗಿಯುವ ಮೊದಲು ಚೀನಾದ ಸಂಸ್ಥೆಗಳಲ್ಲಿ ಅಮೇರಿಕಾದ ಹೂಡಿಕೆಗೆ ನಿಷೇಧ

ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಕಾರ್ಯಾವಧಿ ಮುಗಿಯುವ ಮೊದಲು ಚೀನಾದ ಸಂಸ್ಥೆಗಳಿಗೆ ಅಮೆರಿಕದಲ್ಲಿ ಹೂಡಿಕೆಯನ್ನು ನಿಷೇಧಿಸಲು ನಿರ್ಧರಿಸಿದ್ದಾರೆ. ಅದಕ್ಕನುಸಾರ ಚೀನಾದ ಸೈನ್ಯಕ್ಕೆ ಸಂಬಂಧಿತ ಯಾವುದೇ ಚೀನೀ ಕಂಪನಿಯು ಅಮೇರಿಕಾದಲ್ಲಿ ಹೂಡಿಕೆ ಮಾಡಲು ಸಾಧ್ಯವಿಲ್ಲ.

ಹಿಂದೂಗಳಿಗೆ ದೀಪಾವಳಿ ಶುಭಾಶಯಗಳನ್ನು ಕೋರಿದ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ

ದೀಪಾವಳಿ ಯಾವಾಗಲೂ ನಮಗೆ ಬೆಳಕು, ಸತ್ಯ ಮತ್ತು ಅದರ ವಿಜಯವನ್ನು ನೆನಪಿಸುತ್ತದೆ. ಭರವಸೆಯ ಸಂದೇಶ ಮತ್ತು ಈ ಮಹತ್ವದ ಹಬ್ಬವನ್ನು ಆಚರಿಸಲು ನಾನು ಉತ್ಸವಕ್ಕೆ ಆನ್‌ಲೈನ್‌ನಿಂದ ಸಹಭಾಗಿಯಾಗಿದ್ದೆ. ಎಲ್ಲರಿಗೂ ದೀಪಾವಳಿ ಶುಭಾಶಯಗಳು, ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರಡೊ ಹಿಂದೂಗಳಿಗೆ ದೀಪಾವಳಿ ಶುಭ ಹಾರೈಸಿದ್ದಾರೆ.