ಬಾಂಗ್ಲಾದೇಶ ಕ್ರಿಕೆಟಿಗ ಶಾಕೀಬ್ ಅಲ್ ಹಸನ್‌ರಿಂದ ಕ್ಷಮೆಯಾಚನೆ

ಶ್ರೀ ಮಹಾಕಾಳಿ ದೇವಿಯನ್ನು ಪೂಜಿಸಿದರೆಂದು ಮತಾಂಧರಿಂದ ಬೆದರಿಕೆ

ಹಿಂದೂ ದೇವತೆಯನ್ನು ಪೂಜಿಸುವಾಗ ಮತಾಂಧರಿಗೆ ಯಾಕೆ ಕೋಪ ಬರುತ್ತದೆ ? ಇದನ್ನು ಪ್ರಗತಿ(ಅಧೋಗತಿ)ಪರರು ಮತ್ತು ಜಾತ್ಯತೀತವಾದಿಗಳು ಹಿಂದೂಗಳಿಗೆ ಹೇಳಬಹುದೇನು ? ಹಿಂದೂಗಳಿಗೆ ಸರ್ವಧರ್ಮ ಸಮಭಾವ ಕಲಿಸುವವರು, ಗಾಂದಿಗಿರಿ ಮಾಡಲು ಹೇಳುವವರು, ಮತಾಂಧರಿಗೆ ಈ ವಿಷಯಗಳನ್ನು ಏಕೆ ಕಲಿಸುವುದಿಲ್ಲ ? ತಥಾಕಥಿತ ‘ಗಂಗಾ ಜಮುನಿ ತೆಹಜಿಬ್’ನ ಪಾಲಿಸಲು ಕೇವಲ ಹಿಂದೂಗಳ ಮೇಲೆ ಮಾತ್ರ ಏಕೆ ಒತ್ತಡವನ್ನು ತರಲಾಗುತ್ತದೆ ? ಹಿಂದೂಗಳು ಇಂತಹ ಏಕಪಕ್ಷೀಯ ಸರ್ವಧರ್ಮ ಸಮಭಾವವನ್ನು ಯಾವಾಗ ಬಿಡುತ್ತಾರೆ ?

ನವ ದೆಹಲಿ – ಬಾಂಗ್ಲಾದೇಶ ಕ್ರಿಕೆಟ ಸಂಘದ ಕ್ರಿಕೆಟಿಗ ಶಾಕೀಬ್ ಅಲ್ ಹಸನ್ ಅವರು ಕೋಲಕಾತಾದಲ್ಲಿ ಶ್ರೀ ಮಹಾಕಾಳಿ ಮಾತೆಯ ಪೂಜೆಯನ್ನು ಮಾಡಿದ ನಂತರ ಮತಾಂಧರಿಂದ ಬೆದರಿಕೆಗಳು ಬರಲಾರಂಭವಾಗಿದೆ. ಇದಕ್ಕಾಗಿ ಅವರು ಕ್ಷಮೆಯಾಚಿಸಿದ್ದಾರೆ. ‘ನಾನು ಅಲ್ಲಿನ ಕಾರ್ಯಕ್ರಮಕ್ಕೆ ಹೋಗಿದ್ದೆ; ಆದರೆ ನಾನು ಪೂಜಿಸಲಿಲ್ಲ. ಯಾರಿಗಾದರು ಹಾಗೆ ಅನಿಸಿದ್ದಲ್ಲಿ, ನಾನು ಪುನಃ ಅಲ್ಲಿಗೆ ಹೋಗುವುದಿಲ್ಲ’, ಎಂದು ಅವರು ಹೇಳಿದ್ದಾರೆ.

ಅವರು ಕಳೆದ ವಾರ ಪೂಜೆ ಮಾಡಿದ್ದರು. ಫೇಸ್‌ಬುಕ್ ಮೂಲಕ ಅವರನ್ನು ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ವಿರೋಧ ಆಗುತ್ತಿರುವುದನ್ನು ನೋಡಿ ಶಾಕೀಬ್‌ರು ಕೊನೆಗೆ ಕ್ಷಮೆಯಾಚಿಸಿದರು.