ಶ್ರೀಲಂಕಾದ ವಕಿಲೆಯಿಂದ ಫೇಸ್‌ಬುಕ್ ಮೇಲೆ ಶ್ರೀ ಮಹಾಕಾಳಿ ದೇವಿಯ ಅಶ್ಲೀಲ ಚಿತ್ರದ ಪ್ರಸಾರ
ಇಲ್ಲಿಯ ವಕೀಲೆಯಾದ ಜೀವನೀ ಕರಿಯಾವಸಮ ಇವರು ಶ್ರೀ ಮಹಾಕಾಳಿ ದೇವಿಯ ಅಶ್ಲೀಲ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಕೃತ್ಯವನ್ನು ಸ್ಥಳೀಯ ಹಿಂದೂ ಸಂಘಟನೆಗಳು ವಿರೋಧಿಸಿದ್ದಾರೆ. ಈ ಸಂಘಟನೆಗಳು ಜೀವನೀ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿವೆ. ಅಲ್ಲದೆ, ಕೆಲವು ಸಂಘಟನೆಗಳು ಅವಳನ್ನು ಸೈಬರ್ ಕಾನೂನಿನಡಿಯಲ್ಲಿ ವಿಚಾರಣೆಗೆ ಒಳಪಡಿಸುವಂತೆ ಒತ್ತಾಯಿಸಿವೆ.