ಪೋಪ್ ಫ್ರಾನ್ಸಿಸ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಓರ್ವ ಮಾಡೆಲ್‌ನ ಮಾದಕ ಫೋಟೋವನ್ನು ಲೈಕ್ ಮಾಡಿದ್ದಕ್ಕೆ ಟೀಕೆ

ಪ್ರಪಂಚದಾದ್ಯಂತದ ಅನೇಕ ಚರ್ಚ್‌ಗಳ ಪಾದ್ರಿಗಳಿಗೆ ಮಹಿಳೆಯರು ಮತ್ತು ಮಕ್ಕಳನ್ನು ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಗಳಲ್ಲಿ ಶಿಕ್ಷೆ ನೀಡಿರುವಾಗಲೇ ಈಗ ಪೋಪ್‌ರಿಂದಲೂ ಇಂತಹ ಕೃತ್ಯ ಆಗಿರಬಹುದೆಂದು ಯಾರಾದರೂ ಸಂದೇಹ ವ್ಯಕ್ತಪಡಿಸಿದರೆ ಅದನ್ನು ನಿರಾಕರಿಸಲಾಗದು

ವ್ಯಾಟಿಕನ್ ಸಿಟಿ – ಕ್ರೈಸ್ತರ ಸರ್ವೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್‌ರು ತಮ್ಮ ಅಧಿಕೃತ ‘ಇನ್‌ಸ್ಟಾಗ್ರಾಮ್’ ಖಾತೆಯಲ್ಲಿ ಬ್ರೆಜಿಲ್‌ನ ಮಾಡೆಲ್(ರೂಪದರ್ಶಿ) ನತಾಲಿಯಾ ಗರಿಬೊಟೊ ಅವರ ಅರೆನಗ್ನ ಮಾದಕ ಛಾಯಾಚಿತ್ರಕ್ಕೆ ‘ಲೈಕ್’(ಇಷ್ಟ) ಮಾಡಿದ್ದಾರೆ. ಇದರಿಂದ ಸಾಮಾಜಿಕ ಮಾಧ್ಯಮಗಳಿಂದ ವ್ಯಾಪಕವಾಗಿ ಟೀಕೆಯಾಗಲು ಆರಂಭವಾಗಿರುವುದನ್ನು ನೋಡಿ ಪೋಪ್‌ರು ‘ಅನ್‌ಲೈಕ್’(ಇಷ್ಟವಿಲ್ಲ) ಮಾಡಿದ್ದಾರೆ.

೧. ಈ ಬಗ್ಗೆ ನತಾಲಿಯಾ ಗರಿಬೊಟೊ, ನನ್ನ ತಾಯಿಯು ಈ ಚಿತ್ರವನ್ನು ತಿರಸ್ಕರಿಸಿದ್ದಳು; ಆದರೆ ಪೋಪ್‌ರಿಗೆ ಅದು ಇಷ್ಟವಾಗಿರುವುದರಿಂದ, ಕನಿಷ್ಠಪಕ್ಷ ನಾನು ಸ್ವರ್ಗಕ್ಕೆ ಹೋಗಬಹುದು ಎಂದು ಹೇಳಿದ್ದಾಳೆ.

೨. ಈ ಚಿತ್ರವನ್ನು ತಪ್ಪಿ ಲೈಕ್ ಮಾಡಿದ್ದಾರೆಯೋ ಅಥವಾ ಉದ್ದೇಶಪೂರ್ವಕವಾಗಿ ಮಾಡಿದ್ದಾರೆಯೋ, ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನತಾಲಿಯಾಳು ‘ಇನ್‌ಸ್ಟಾಗ್ರಾಮ್’ನಲ್ಲಿ ೨೦ ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.