ಡೊನಾಲ್ಡ್ ಟ್ರಂಪ್‌ಇವರಿಂದ ತಮ್ಮ ಅಧಿಕಾರಾವಧಿ ಮುಗಿಯುವ ಮೊದಲು ಚೀನಾದ ಸಂಸ್ಥೆಗಳಲ್ಲಿ ಅಮೇರಿಕಾದ ಹೂಡಿಕೆಗೆ ನಿಷೇಧ

ವಾಷಿಂಗ್‌ಟನ್ (ಅಮೇರಿಕಾ) – ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಕಾರ್ಯಾವಧಿ ಮುಗಿಯುವ ಮೊದಲು ಚೀನಾದ ಸಂಸ್ಥೆಗಳಿಗೆ ಅಮೆರಿಕದಲ್ಲಿ ಹೂಡಿಕೆಯನ್ನು ನಿಷೇಧಿಸಲು ನಿರ್ಧರಿಸಿದ್ದಾರೆ. ಅದಕ್ಕನುಸಾರ ಚೀನಾದ ಸೈನ್ಯಕ್ಕೆ ಸಂಬಂಧಿತ ಯಾವುದೇ ಚೀನೀ ಕಂಪನಿಯು ಅಮೇರಿಕಾದಲ್ಲಿ ಹೂಡಿಕೆ ಮಾಡಲು ಸಾಧ್ಯವಿಲ್ಲ.

ಅಂತಹ ೩೧ ಸಂಸ್ಥೆಗಳನ್ನು ಅಮೇರಿಕಾವು ಚೀನಾದ ಸೈನ್ಯದೊಂಂದಿಗೆ ಸಂಬಂಧಹೊಂದಿದೆ ಎಂದು ಘೋಷಿಸಿ ಅವರಿಗೆ ಅಮೇರಿಕಾದಲ್ಲಿ ಹೂಡಿಕೆ ಮಾಡುವಲ್ಲಿ ನಿಷೇಧಿಸಿದೆ. ಟ್ರಂಪ್‌ನ ಈ ನಿರ್ಧಾರದಿಂದ ಚೀನಾಗೆ ಆರ್ಥಿಕ ಧಕ್ಕೆ ಉಂಟಾಗುವ ಸಾಧ್ಯತೆ ಇದೆ. ಮುಂದಿನ ವರ್ಷ ಜನವರಿ ೧೧ ರಿಂದ ಈ ಆದೇಶ ಜಾರಿಗೆ ಬರಲಿದೆ. ಹೊಸದಾಗಿ ನೇಮಕಗೊಂಡ ಅಧ್ಯಕ್ಷ ಜೋ ಬಾಯಡೆನ್ ಜನವರಿ ೨೦ ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರ ಸರಕಾರವು ಅಧಿಕಾರಕ್ಕೆ ಬಂದ ನಂತರ ಈ ಆದೇಶವು ಜಾರಿಯಲ್ಲಿರುತ್ತದೆಯೇ ಅಥವಾ ರದ್ದು ಪಡಿಸಲಾಗುವುದು ಎಂಬುದನ್ನು ನೋಡಬೇಕಾಗಿದೆ.