ಫ್ರಾನ್ಸ್‌ನ ‘ಆ’ ಶಾಲೆಯಲ್ಲಿನ ‘ಎಲ್ಲರನ್ನು ಕೊಲ್ಲುವೆವು’ ಎಂದು ಮತಾಂಧರಿಂದ ಬೆದರಿಕೆ

ಮತಾಂಧರ ಧಾರ್ಮಿಕ ಭಾವನೆಗೆ ನೋವಾದಾಗ ಅಸಹಿಷ್ಣು ಮತಾಂಧರು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ, ಆದರೆ ಸಹಿಷ್ಣು ಹಿಂದೂಗಳು ಸಣ್ಣ ಪ್ರತಿಭಟನೆಯನ್ನೂ ಸಹ ಮಾಡುವುದಿಲ್ಲ !

ಪ್ಯಾರಿಸ್ (ಫ್ರಾನ್ಸ್) – ಕೆಲವು ವಾರಗಳ ಹಿಂದೆ ಫ್ರಾನ್ಸ್‌ನ ಶಾಲೆಯೊಂದರ ಶಿಕ್ಷಕ ಸ್ಯಾಮ್ಯುಯೆಲ್ ಪ್ಯಾಟಿಯು ‘ಶಾರ್ಲಿ ಹೆಬ್ದೋ’ ಈ ಪತ್ರಿಕೆಯಲ್ಲಿ ಪ್ರಕಟವಾದ ಪ್ರವಾದಿ ಮುಹಮ್ಮದ್ ಅವರ ವ್ಯಂಗ್ಯಚಿತ್ರಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿದ್ದರು. ಆದ್ದರಿಂದ ಮತಾಂಧ ವಿದ್ಯಾರ್ಥಿಯೊಬ್ಬ ಆ ಶಿಕ್ಷಕಕರ ಕತ್ತು ಸೀಳಿ ಕೊಲೆಗೈದನು. ಈಗ ಮತ್ತೊಮ್ಮೆ ಶಾಲೆಯಲ್ಲಿ ಎಲ್ಲರನ್ನೂ ಕೊಲ್ಲುವ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಶಾಲೆಗೆ ಪತ್ರ ಬಂದಿದೆ. ಅದರಲ್ಲಿ ‘ನಿಮ್ಮೆಲ್ಲರನ್ನೂ ಕೊಲ್ಲುತ್ತದೆ. ಸ್ಯಾಮ್ಯುಯೆಲ್ ಪ್ಯಾಟಿ.. ಅಲ್ಲಾ ಹು ಅಕ್ಬರ್’, ಎಂದು ಬರೆಯಲಾಗಿದೆ. ಇತರ ಎರಡು ಶಾಲೆಗಳ ಗೋಡೆಗಳ ಮೇಲೆ ಇದೇ ರೀತಿಯ ಬೆದರಿಕೆಯನ್ನು ಬರೆಯಲಾಗಿದೆ.