ಪಾಕಿಸ್ತಾನದಲ್ಲಿ ಪ್ರತಿದಿನ ೧೧ ಅತ್ಯಾಚಾರ ಘಟನೆಗಳು ನಡೆಯುತ್ತಿವೆ !

ಕಳೆದ ೬ ವರ್ಷಗಳಲ್ಲಿ, ೨೨ ಸಾವಿರ ಘಟನೆಗಳಲ್ಲಿ ೭೭ ಮಾತ್ರ ಅಪರಾಧಿಗಳು

ಪಾಕಿಸ್ತಾನದಂತಹ ಇಸ್ಲಾಮಿಕ್ ದೇಶ ಕೂಡ ಅತ್ಯಾಚಾರದಂತಹ ಅಪರಾಧಕ್ಕಾಗಿ ತಮ್ಮ ದೇಶದಲ್ಲಿ ಶರಿಯಾ ನ್ಯಾಯಾಲಯವನ್ನು ಸ್ಥಾಪಿಸಿ ಕೈಕಾಲುಗಳನ್ನು ಮುರಿದು, ನಡುರಸ್ತೆಯಲ್ಲಿ ಕಟ್ಟಿ ಹಾಹಿ ಕಲ್ಲು ಹೊಡೆದು ಕೊಲ್ಲುವ ಶಿಕ್ಷೆಯನ್ನು ನೀಡುವುದಿಲ್ಲ, ಇದರಿಂದ ಅವರ ಶರಿಯತ್ ಪ್ರೀತಿ ಎಷ್ಟು ಕಪಟವಾಗಿದೆ ಎಂಬುದು ತೋರಿಸುತ್ತದೆ !

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಪ್ರತಿದಿನ ೧೧ ಅತ್ಯಾಚಾರ ಘಟನೆಗಳು ನಡೆಯುತ್ತಿದ್ದರೆ, ಕಳೆದ ೬ ವರ್ಷಗಳಲ್ಲಿ ದೇಶದಲ್ಲಿ ೨೨ ಸಾವಿರ ಕ್ಕೂ ಹೆಚ್ಚು ಅತ್ಯಾಚಾರ ಘಟನೆಗಳು ನಡೆದಿವೆ; ಆದರೆ ಈ ಘಟನೆಗಳಲ್ಲಿ ಕೇವಲ ೭೭ ಪ್ರಕರಣಗಳಲ್ಲಿ ಆರೋಪಿಗಳನ್ನು ಶಿಕ್ಷೆಗೊಳಪಡಿಸಲಾಗಿದೆ. ಅಂದರೆ ಕೇವಲ ಶೇ. ೦.೩ ರಷ್ಟು ಅಪರಾಧಿಗಳು ಮಾತ್ರ ಶಿಕ್ಷೆಗೊಳಗಾಗಿದ್ದಾರೆ. ಈ ಅಂಕಿಅಂಶಗಳನ್ನು ಸರಕಾರಿ ಸಂಸ್ಥೆಗಳು ನೀಡಿವೆ.

ಕಾನೂನು ಮತ್ತು ಸುವ್ಯವಸ್ಥೆ, ಸಾಮಾಜಿಕ ಒತ್ತಡ ಮತ್ತು ಕಾನೂನಿನ ಲೋಪದೋಷಗಳಿಂದಾಗಿ, ಒಟ್ಟು ಅತ್ಯಾಚಾರ ಪ್ರಕರಣಗಳಲ್ಲಿ ಕೇವಲ ಶೇ. ೪೧ ಪ್ರಕರಣಗಳು ಮಾತ್ರ ಪೊಲೀಸರಿಗೆ ವರದಿಯಾಗಿದೆ. ಈ ಅಂಕಿಅಂಶಗಳು ಬಿಡುಗಡೆಯಾದ ನಂತರ, ಅತ್ಯಾಚಾರ ಪ್ರಕರಣಗಳನ್ನು ತಕ್ಷಣ ಆಲಿಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ಪಾಕಿಸ್ತಾನ ಸರಕಾರ ನಿರ್ಧರಿಸಿದೆ.