ಇನ್ನು ಪಾಕಿಸ್ತಾನದಲ್ಲಿ ಅತ್ಯಾಚಾರ ಮಾಡುವವರನ್ನು ನಪುಂಸಕರನ್ನಾಗಿ ಮಾಡಲಾಗುವುದು

ಇದನ್ನು ಪಾಕಿಸ್ತಾನ ಮಾಡಬಹುದಾದರೇ, ಭಾರತ ಏಕೆ ಮಾಡಬಾರದು ? ೧೩೦ ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಪ್ರತಿದಿನ ಅನೇಕ ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಾರೆ, ಅವರ ಹತ್ಯೆಯೂ ಮಾಡಲಾಗುತ್ತಿದೆ. ಹೀಗಿರುವಾಗ ಭಾರತ ಇಲ್ಲಿಯವರೆಗೆ ಇಂತಹ ಶಿಕ್ಷೆಯನ್ನು ನೀಡುವಂತಹ ಕಾನೂನನ್ನು ಏಕೆ ಜಾರಿಗೆ ತಂದಿಲ್ಲ ?

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಇನ್ನು ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಚುಚ್ಚುಮದ್ದಿನ ಮೂಲಕ ನಪುಂಸಕರನ್ನಾಗಿಸುವ ಶಿಕ್ಷೆ ವಿಧಿಸಲಾಗುವುದು. ಪಾಕಿಸ್ತಾನ ಸರಕಾರದ ಕ್ಯಾಬಿನೆಟ್ ಸಭೆಯಲ್ಲಿ ಇಂತಹ ಕರಡು ಕಾನೂನನ್ನು ಮಂಡಿಸಲಾಯಿತು. ಈ ಬಗ್ಗೆ ಚರ್ಚಿಸಿದ ನಂತರ ಪ್ರಧಾನಿ ಇಮ್ರಾನ್ ಖಾನ್ ಕರಡನ್ನು ಅನುಮೋದಿಸಿದರು; ಆದರೆ ಈ ಬಗ್ಗೆ ಸರಕಾರ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನು ಪಾಕಿಸ್ತಾನದ ಜಿಯೋ ಟಿವಿ ವರದಿ ಮಾಡಿದೆ.

೧. ಎರಡು ತಿಂಗಳ ಹಿಂದೆ ಲಾಹೋರ್ ಬಳಿ ಫ್ರೆಂಚ್ ಮಹಿಳೆಯ ಮೇಲೆ ಅವರ ಮಕ್ಕಳ ಮುಂದೆಯೇ ಸಾಮೂಹಿಕ ಅತ್ಯಾಚಾರ ಮಾಡಲಾಗಿತ್ತು. ಅದರ ನಂತರ ಪಾಕಿಸ್ತಾನದಲ್ಲಿ ಮಹಿಳೆಯರು ದೊಡ್ಡ ಆಂದೋಲನ ನಡೆಸಿದರು. ಆ ಸಮಯದಲ್ಲಿ ಪ್ರಧಾನಿ ಇಮ್ರಾನ್ ಖಾನ್ ‘ಅತ್ಯಾಚಾರ ಮತ್ತು ಲೈಂಗಿಕ ಅತ್ಯಾಚಾರದ ಆರೋಪಿಗಳಿಗೆ ನಪುಂಸಕರನ್ನಾಗಿಸುವ ಶಿಕ್ಷೆ ವಿಧಿಸಬೇಕು’ ಎಂದು ಹೇಳಿದ್ದರು.

೨. ಚುಚ್ಚುಮದ್ದಿನೊಂದಿಗೆ ವ್ಯಕ್ತಿಯನ್ನು ನಪುಂಸಕನನ್ನಾಗಿಸುವ ವೈದ್ಯಕೀಯ ವಿಧಾನವಿದೆ. ಈ ರಾಸಾಯನಿಕ ಚುಚ್ಚುಮದ್ದು ವ್ಯಕ್ತಿಯ ಹಾರ್ಮೋನಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಆತನ ಲೈಂಗಿಕ ಕ್ಷಮತೆ ಇಲ್ಲವಾಗುತ್ತದೆ.