‘ಸಿಬ್ಬಂದಿಗಳ ಮೇಲಿನ ದಾಳಿಯ ಭಯದಿಂದ ಫೇಸ್‌ಬುಕ್‌ನ ಸೌಮ್ಯ ನಿಲುವು !’(ಅಂತೆ) – ಅಮೇರಿಕಾದ ದೈನಿಕ ‘ವಾಲ್ ಸ್ಟ್ರೀಟ್ ಜರ್ನಲ್’ನ ಸುಳ್ಳಿನ ಕಂತೆ !

  • ‘ಭಜರಂಗ ದಳ’ವನ್ನು ‘ಅಪಾಯಕಾರಿ ಸಂಘಟನೆ’ ಎಂದು ಒಪ್ಪಿಕೊಳ್ಳಲು ಫೇಸ್‌ಬುಕ್ ನಿರಾಕರಿಸಿದೆ !

  • ಯಾವುದೇ ತಾರತಮ್ಯವಿಲ್ಲ ಎಂದು ಫೇಸ್‌ಬುಕ್‌ನ ಸ್ಪಷ್ಟೀಕರಣ

  • ಹಿಂದೂ ಸಂಘಟನೆಗಳನ್ನು ‘ಹಿಂಸಾತ್ಮಕ’ ಎಂದು ಪಟ್ಟಿ ಕಟ್ಟುವ ಪ್ರಯತ್ನಕ್ಕಾಗಿ ‘ವಾಲ್ ಸ್ಟ್ರೀಟ್ ಜರ್ನಲ್’ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಭಾರತ ಸರಕಾರ ಪ್ರಯತ್ನಿಸಬೇಕು ! ಇಂತಹ ಪತ್ರಿಕೆಗಳ ಮಾರಾಟವನ್ನು ಮತ್ತು ಅವುಗಳ ವೆಬ್‌ಸೈಟ್‌ಗಳನ್ನು ಭಾರತದಲ್ಲಿ ನಿಷೇಧಿಸಬೇಕು ! 
  • ‘ವಾಲ್ ಸ್ಟ್ರೀಟ್ ಜರ್ನಲ್’ಗೆ ಫೇಸ್‌ಬುಕ್‌ನಲ್ಲಿ ಜಿಹಾದಿ ಭಯೋತ್ಪಾದಕರ ಖಾತೆಗಳು ಕಾಣಿಸುತ್ತಿಲ್ಲವೇ ? ಜಿಹಾದಿ ಭಯೋತ್ಪಾದಕರ ಆದರ್ಶಪ್ರಾಯರಾದ ಡಾ. ಜಾಕಿರ್ ನಾಯಕ್ ಅವರ ಖಾತೆಯನ್ನು ಮುಚ್ಚುವಂತೆ ‘ವಾಲ್ ಸ್ಟ್ರೀಟ್ ಜರ್ನಲ್’ ಫೇಸ್‌ಬುಕ್‌ಗೆ ಏಕೆ ಸಲಹೆ ನೀಡುತ್ತಿಲ್ಲ ? 
  • ‘ವಾಲ್ ಸ್ಟ್ರೀಟ್ ಜರ್ನಲ್’ ನಂತಹ ಅಮೇರಿಕಾದ ಪತ್ರಿಕೆಗಳ ಪರಾಕೋಟಿಯ ಹಿಂದೂದ್ವೇಷ ತಿಳಿಯಿರಿ ! ‘ವಾಲ್ ಸ್ಟ್ರೀಟ್ ಜರ್ನಲ್’ ಅಮೆರಿಕದಲ್ಲಿ ವರ್ಣಭೇದದ ಬಗ್ಗೆ ಏಕೆ ಮಾತನಾಡುವುದಿಲ್ಲ ?

ನವ ದೆಹಲಿ – ಸಾಮಾಜಿಕ ಮಾಧ್ಯಮವೆಂದು ಜನಪ್ರಿಯವಾಗಿರುವ ಫೇಸ್‌ಬುಕ್ ‘ಭಜರಂಗದಳ’ ಈ ಸಂಘಟನೆಯನ್ನು ‘ಅಪಾಯಕಾರಿ ಸಂಘಟನೆ’ ಎಂದು ಒಪ್ಪಿಕೊಳ್ಳಲು ನಿರಾಕರಿಸಿದೆ. ಈ ಬಗ್ಗೆ ಅಮೇರಿಕಾದ ‘ವಾಲ್ ಸ್ಟ್ರೀಟ್ ಜರ್ನಲ್’ ಈ ದಿನಪತ್ರಿಕೆಯಲ್ಲಿ ಮಾತ್ರ ‘ಭಾರತದ ಆಡಳಿತಾರೂಢ ಹಿಂದೂ ರಾಷ್ಟ್ರೀಯವಾದಿ ನಾಯಕರ ಮತ್ತು ಭಜರಂಗದಳದ ವಿರುದ್ಧದ ಕ್ರಮ ಕೈಗೊಂಡರೆ ಭಾರತದಲ್ಲಿನ ಫೇಸ್‌ಬುಕ್ ವ್ಯವಹಾರದ ಮೇಲೆ ವಿಪರೀತ ಪರಿಣಾಮ ಬೀರಬಹುದು ಅದೇರೀತಿ ಅವರ ಉದ್ಯೋಗಿಗಳ ಮೇಲೆ ದಾಳಿಯಾಗಬಹುದು. ಆದ್ದರಿಂದ ಫೇಸ್‌ಬುಕ್ ಭಜರಂಗದಳದ ಬಗ್ಗೆ ಮೃದುನಿಲುವನ್ನು ತೆಗೆದುಕೊಂಡಿದೆ ಎಂದು ಹೇಳಿದೆ.

೧. ‘ವಾಲ್ ಸ್ಟ್ರೀಟ್ ಜರ್ನಲ್’ ವಾರ್ತೆಯಲ್ಲಿ ಭಜರಂಗದಳದ ವಿಡಿಯೋ ಮತ್ತು ಅದರ ವಿರುದ್ಧ ಫೇಸ್‌ಬುಕ್ ಕೈಗೊಂಡ ಕ್ರಮವನ್ನು ವರದಿ ಮಾಡಿದೆ. ಇದರಲ್ಲಿ ಭಜರಂಗದಳವು ಜೂನ್‌ನಲ್ಲಿ ನವ ದೆಹಲಿಯ ಚರ್ಚ್‌ನ ಮೇಲೆ ನಡೆದ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ ಎಂದು ಹೇಳಲಾಗಿತ್ತು.

೨. ಈ ಸುದ್ದಿಗೆ ಪ್ರತಿಕ್ರಿಯಿಸಿದ ಫೇಸ್‌ಬುಕ್ ಆರೋಪಗಳನ್ನು ನಿರಾಕರಿಸಿದೆ. ಅಪಾಯಕಾರಿ ಸಂಘಟನೆ ಅಥವಾ ವ್ಯಕ್ತಿಯನ್ನು ನಿರ್ಧರಿಸುವಲ್ಲಿ ಅವರ ರಾಜಕೀಯ ಗುರುತು ಅಥವಾ ಯಾವುದೇ ರಾಜಕೀಯ ಪಕ್ಷದೊಂದಿಗಿನ ಸಂಬಂಧದ ಆಧಾರದ ಮೇಲೆ ನಾವು ತಾರತಮ್ಯ ಮಾಡುವುದಿಲ್ಲ, ಎಂದು ಫೇಸ್‌ಬುಕ್ ಹೇಳಿದೆ.

ಹಿಂದೂದ್ವೇಷಿ ಕಾಂಗ್ರೆಸ್‌ನ ನಾಯಕ ರಾಹುಲ್ ಗಾಂಧಿಯ ಅಸಂಬದ್ಧ ಮಾತುಗಳು !

ರಾಹುಲ್ ಗಾಂಧಿಯವರು ‘ವಾಲ್ ಸ್ಟ್ರೀಟ್ ಜರ್ನಲ್’ವ ವರದಿಯನ್ನು ಗುರಿಯಾಗಿಸಿ ಟ್ವೀಟ್ ಮಾಡಿದ್ದಾರೆ. ಅವರು ‘ಬಿಜೆಪಿ ಮತ್ತು ರಾ.ಸ್ವಂ.ಸಂಘವು ಭಾರತದಲ್ಲಿ ಫೇಸ್‌ಬುಕ್‌ನ ಮೇಲೆ ತನ್ನ ನಿಯಂತ್ರಣ ಇಟ್ಟುಕೊಂಡಿದೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ’ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಎನ್.ಡಿ.ಟಿವಿ.ಯ ವಿಡಿಯೋ ಕೂಡ ಪೋಸ್ಟ್ ಮಾಡಿದ್ದಾರೆ. (ಹಾಗಲಕಾಯಿಗೆ ಬೇವಿನಮರ ಸಾಕ್ಷಿ ಎಂಬಂತೆ ರಾಹುಲ ಗಾಂಧಿ ಹಿಂದೂದ್ವೇಷಿ ಸುದ್ದಿ ವಾಹಿನಿ ಎನ್.ಡಿ.ಟಿ.ವಿಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ ಎಂದು ಹೇಳಬೇಕಾಗಿದೆ ! – ಸಂಪಾದಕ)