ಸಿಂಧ್‌ನಲ್ಲಿ ಮತಾಂಧರಿಂದ ಹಿಂದೂಗಳ ಮನೆಗಳ ಮೇಲೆ ದಾಳಿ

ಅಸುರಕ್ಷಿತ ಹಾಗೂ ಅಸಹಾಯಕರಾಗಿರುವ ಪಾಕಿಸ್ತಾನದ ಹಿಂದೂಗಳು ! ಈ ಬಗ್ಗೆ ಯಾವುದೇ ಮಾನವ ಹಕ್ಕುಗಳ ಆಯೋಗ ಧ್ವನಿ ಎತ್ತುವುದಿಲ್ಲ ಹಾಗೂ ಭಾರತದ ಹಿಂದೂಗಳೂ ಮೌನವಹಿಸಿದ್ದಾರೆ !

ನವ ದೆಹಲಿ – ಪಾಕಿಸ್ತಾನದಲ್ಲಿಯ ಮಾನವ ಹಕ್ಕುಗಳ ಕಾರ್ಯಕರ್ತ ರಾಹತ ಆಸ್ಟೀನ್ ಇವರು ಒಂದು ವಿಡಿಯೋವನ್ನು ಪೋಸ್ಟ ಮಾಡಿ ಪಾಕಿಸ್ತಾನದ ಸಿಂಧ್‌ನಲ್ಲಿ ಮತಾಂಧರು ಹಿಂದೂಗಳ ಮನೆಗಳ ಮೇಲೆ ನಡೆಸಿದ ದಾಳಿಯ ಹಾಗೂ ಲೂಟಿಯ ಮಾಹಿತಿಯನ್ನು ತಿಳಿಸಿದ್ದಾರೆ.

ಆಸ್ಟಿನ್ ಅವರು ಹೇಳಿದ ಪ್ರಕಾರ, ಮಹಮ್ಮದ ಅಸ್ಲಮ್ ಹೆಸರಿನ ವ್ಯಕ್ತಿಯು ತನ್ನ ನೆರೆಹೊರೆಯಲ್ಲಿರುವ ಜನರನ್ನು ಒಗ್ಗೂಡಿಸುತ್ತಾ ಇಲ್ಲಿಯ ಬಡ ಹಿಂದೂಗಳ ಮೇಲೆ ಅತ್ಯಾಚಾರ ಮಾಡುತ್ತಾ ಅವರನ್ನು ಮನೆ ಬಿಟ್ಟು ಹೋಗುವಂತೆ ಮಾಡಿದ್ದಾನೆ. ಈ ಹಿಂದೂಗಳು ಭಯಭೀತರಾಗಿದ್ದಾರೆ. ಅವರು ಈ ಬಗ್ಗೆ ಸತ್ರ ನ್ಯಾಯಾಲಯ ಹಾಗೂ ಪೊಲೀಸರಲ್ಲಿ ಭದ್ರತೆ ಒದಗಿಸುವಂತೆ ಆಗ್ರಹಿಸಿದ್ದಾರೆ. ಈ ವಿಡಿಯೋದಲ್ಲಿ ಹಿಂದೂಗಳು ತಮ್ಮ ಮೇಲಾದ ಅತ್ಯಾಚಾರದ ವಿರುದ್ಧ ಘೋಷಣೆಯನ್ನು ಕೂಗುತ್ತಿರುವುದು ಕಾಣಿಸುತ್ತದೆ.