ಅಮೇರಿಕಾದ ವಿಶ್ವವಿದ್ಯಾಲಯದಲ್ಲಿ ಹಿಂದೂ ಧರ್ಮ ಮತ್ತು ಜೈನ ಪಂಥದ ಅಧ್ಯಯನಕ್ಕಾಗಿ ಪೀಠದ ಸ್ಥಾಪನೆ !

ಅಮೇರಿಕಾದಂತಹ ಮುಂದುವರೆದ ದೇಶದ ವಿದ್ಯಾಪೀಠಗಳಲ್ಲಿ ಹಿಂದೂ ಧರ್ಮದ ಬಗ್ಗೆ ಅಧ್ಯಯನ ಮಾಡಲಾಗುತ್ತದೆ ಮತ್ತು ಅದಕ್ಕಾಗಿ ಪೀಠ ಸ್ಥಾಪಿಸಲಾಗುತ್ತದೆ. ಭಾರತದಲ್ಲಿ ಮಾತ್ರ ಶಾಲೆಗಳಲ್ಲಿ ಭಗವತ್‌ಗೀತೆಯನ್ನು ಕಲಿಸುವ ಬಗ್ಗೆ ಸರಕಾರ ನಿರ್ಧಾರವನ್ನು ಕೈಗೊಂಡರೆ ತಥಾಕಥಿತ ಜಾತ್ಯತೀತವಾದಿಗಳು, ಬುದ್ಧಿಜೀವಿಗಳು ಮತ್ತು ಪ್ರಗತಿಪರರು ವಿರೋಧಿಸುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ!

ವಾಷಿಂಗ್‌ಟನ್ – ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯು ಹಿಂದೂ ಧರ್ಮ ಮತ್ತು ಜೈನ ಪಂಥದ ಅಧ್ಯಯನ ಮಾಡಲು ಪೀಠವನ್ನು ಸ್ಥಾಪಿಸಿದೆ. ಈ ಪೀಠದ ಸ್ಥಾಪನೆಗೆ ೨೪ ಭಾರತೀಯರು ಕೊಡುಗೆ ನೀಡಿದ್ದಾರೆ. ಹಿಂದೂ ಧರ್ಮ ಮತ್ತು ಜೈನ ಪಂಥಗಳ ಬಗ್ಗೆ ಜ್ಞಾನ ಹೊಂದಿರುವ ಓರ್ವ ಪ್ರಾಧ್ಯಾಪಕರನ್ನು ಈ ಪೀಠಕ್ಕೆ ನೇಮಿಸಲಾಗುವುದು.