ಭಾರತವು ಬಲೂಚಿಸ್ತಾನದ ಸ್ವಾತಂತ್ರ್ಯ ಹೋರಾಟದಲ್ಲಿ ಸಹಾಯ ಮಾಡಬೇಕು ! – ಬಲೂಚ್ ಸಂಘಟನೆಯಿಂದ ಮನವಿ

ಲಂಡನ್ – ಬಲೂಚ್ ನ್ಯಾಶನಲ್ ಮೂವಮೆಂಟ್ ಬ್ರಿಟನ್ ಶಾಖೆಯು ಮತ್ತು ಅದರ ಅಂಗಸಂಸ್ಥೆಗಳು ಪಾಕಿಸ್ತಾನದಲ್ಲಿ ಬಲೂಚ್ ಜನರ ಮೇಲೆ ನಡೆದ ದೌರ್ಜನ್ಯದ ವಿರುದ್ಧ ಧ್ವನಿಯೆತ್ತಲು ಭಾರತ ಸರಕಾರಕ್ಕೆ ಆಗ್ರಹಿಸಿವೆ. ಈ ಸಂಘಟನೆಯು ಬಲೂಚಿಸ್ತಾನದ ಸ್ವಾತಂತ್ರ್ಯ ಚಳವಳಿಯಲ್ಲಿ ಸಹಾಯಕ್ಕಾಗಿ ಮನವಿ ಮಾಡಿವೆ. ‘ಬಲೂಚ್ ಹುತಾತ್ಮರ ದಿನ’ ದಿನದಂದು ಇಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಈ ಮನವಿ ಮಾಡಲಾಗಿದೆ. ಬಲೂಚ್ ನ್ಯಾಶನಲ್ ಮೂವಮೆಂಟ, ವರ್ಲ್ಡ ಸಿಂಧಿ ಕಾಂಗ್ರೆಸ್ ಮತ್ತು ಬಲೂಚ್ ಸ್ಟುಡೆಂಟ್ಸ್ ಆರ್ಗನೈಜೇಶನ ಆಝಾದ ಇತ್ಯಾದಿ ಸಂಘಟನೆಗಳು ಇದರಲ್ಲಿ ಭಾಗವಹಿಸಿದ್ದವು.

೧. ಈ ಸಂಘಟನೆಗಳು ಈ ಬಾರಿ ಬ್ರಿಟನ್ ಸರಕಾರವನ್ನು ಟೀಕಿಸಿದವು. ಬಲೂಚಿಸ್ತಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಬ್ರಿಟನ್ ಸರಕಾರ ಮೌನವಾಗಿದೆ ಎಂದು ಅವರು ಆರೋಪಿಸಿದರು.

೨. ಬಲೂಚ್ ನ್ಯಾಶನಲ್ ಮೂವಮೆಂಟ್‌ನ ವಕ್ತಾರರಾದ ಹಮ್ಮಾಲ ಹೈದರ ಇವರು, ಕಳೆದ ೨೦ ವರ್ಷಗಳಲ್ಲಿ ಪಾಕಿಸ್ತಾನದ ಭದ್ರತಾ ಪಡೆಗಳು ೨೦ ಸಾವಿರ ಬಲೂಚ್ ಜನರನ್ನು ಅಪಹರಿಸಿ ಅನೇಕರ ಹತ್ಯೆ ಮಾಡಿವೆ ಎಂದು ಹೇಳಿದ್ದಾರೆ. ಪಾಕಿಸ್ತಾನದ ಈ ದೌರ್ಜನ್ಯದ ವಿರುದ್ಧ ಧ್ವನಿಯೆತ್ತಲು ನಾವು ಭಾರತಕ್ಕೆ ಆಗ್ರಹಿಸುತ್ತಿದ್ದೇವೆ. ಭಾರತ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಹೇಗೆ ಪ್ರಯತ್ನಿಸಿತೋ, ಅದೇರೀತಿ ಮುಂದೆ ಬಂದು ನಮಗೆ ಬೆಂಬಲ ನೀಡಬೇಕು ಎಂದು ಹೇಳಿದರು.