ಶ್ರೀಲಂಕಾದ ವಕಿಲೆಯಿಂದ ಫೇಸ್‌ಬುಕ್ ಮೇಲೆ ಶ್ರೀ ಮಹಾಕಾಳಿ ದೇವಿಯ ಅಶ್ಲೀಲ ಚಿತ್ರದ ಪ್ರಸಾರ

ಶ್ರೀಲಂಕಾದ ಹಿಂದೂಗಳಿಂದ ಇದನ್ನು ವಿರೋಧಿಸಿ, ಕ್ರಮ ಕೈಗೊಳ್ಳುವಂತೆ ಬೇಡಿಕೆ

ಕೇವಲ ಶ್ರೀಲಂಕಾದಲ್ಲಿ ಮಾತ್ರವಲ್ಲ, ಭಾರತದ ಹಿಂದೂಗಳೂ ಇದನ್ನು ವಿರೋಧಿಸಬೇಕು. ಅಲ್ಲದೆ, ಭಾರತ ಸರಕಾರವು ವಿಶ್ವದಲ್ಲಿ ಎಲ್ಲಿಯಾದರೂ ಹಿಂದೂಗಳ ಶ್ರದ್ಧಾಸ್ಥಾನಗಳ ಅವಮಾನ ಆಗುತ್ತಿದ್ದರೆ, ಅದನ್ನು ತಕ್ಷಣ ಗಮನಿಸಿ ಅದನ್ನು ತಡೆಯಲು ಪ್ರಯತ್ನಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ಕೊಲಂಬೊ (ಶ್ರೀಲಂಕಾ) – ಇಲ್ಲಿಯ ವಕೀಲೆಯಾದ ಜೀವನೀ ಕರಿಯಾವಸಮ ಇವರು ಶ್ರೀ ಮಹಾಕಾಳಿ ದೇವಿಯ ಅಶ್ಲೀಲ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಕೃತ್ಯವನ್ನು ಸ್ಥಳೀಯ ಹಿಂದೂ ಸಂಘಟನೆಗಳು ವಿರೋಧಿಸಿದ್ದಾರೆ. ಈ ಸಂಘಟನೆಗಳು ಜೀವನೀ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿವೆ. ಅಲ್ಲದೆ, ಕೆಲವು ಸಂಘಟನೆಗಳು ಅವಳನ್ನು ಸೈಬರ್ ಕಾನೂನಿನಡಿಯಲ್ಲಿ ವಿಚಾರಣೆಗೆ ಒಳಪಡಿಸುವಂತೆ ಒತ್ತಾಯಿಸಿವೆ.

(ಈ ಚಿತ್ರವನ್ನು ಪ್ರಕಾಶಿಸುವುದರ ಉದ್ದೇಶ ಯಾರ ಭವನಗಳಿಗೆ ನೋವು ಉಂಟು ಮಾಡುವುದಾಗಿರದೆ ಆಗಿರುವ ವಿಡಂಬನೆಯನ್ನು ತಿಳಿಸುವ ಉದ್ದೇಶದಿಂದ ಪ್ರಕಾಶಿಸಲಾಗಿದೆ)

೧. ರಷ್ಯಾದ ಸುದ್ದಿ ಸಂಸ್ಥೆ ‘ಸ್ಫುಟನಿಕ್’ ಅವರೊಂದಿಗೆ ಮಾತನಾಡಿದ ಹಿಂದೂ ಸಂಘಟನೆ ಶಿವ ಸೇನೈಯ ಮುಖಂಡ ಎಂ.ಕೆ. ಸಚಿತಾನಾಥನ ಇವರು, ಈ ಪೋಸ್ಟ್‌ನಿಂದ ಹಿಂದೂಗಳನ್ನು ಮಾತ್ರವಲ್ಲದೆ ಶಾಂತಿಯುತ ಸಮುದಾಯವನ್ನೂ ನೋಯಿಸಿದ್ದಾರೆ. ನಮಗೆ ಸಂಪೂರ್ಣ ಜಗತ್ತಿನ ಶ್ರೀಲಂಕಾ ಮೂಲದ ತಮಿಳಿಗರಿಂದ ಈ ಬಗ್ಗೆ ಪತ್ರಗಳು ಸಿಗುತ್ತಿವೆ. ಶ್ರೀಲಂಕಾದ ರಾಯಭಾರಿಯವರಿಗೂ ಜೀವನೀ ಮತ್ತು ಫೇಸ್‌ಬುಕ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಒಂದು ವೇಳೆ ಜೀವನೀಯನ್ನು ಬಂಧಿಸದಿದ್ದರೆ, ನಮ್ಮ ಆಂದೋಲನ ತೀವ್ರಗೊಳ್ಳುತ್ತದೆ, ಎಂದು ಅವರು ಎಚ್ಚರಿಸಿದ್ದಾರೆ.

೨. ಜೀವನೀಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಅಭಿಯಾನವನ್ನು ಪ್ರಾರಂಭಿಸುವಂತೆ ಹಿಂದೂ ಪುರೋಹಿತರ ಸಂಘಟನೆ ಮನವಿ ಮಾಡಿದೆ. ಈ ನಿಟ್ಟಿನಲ್ಲಿ ಅವರು ಶ್ರೀಲಂಕಾದ ರಾಷ್ಟ್ರಪತಿ ಗೋಟಾಬಾಯ ರಾಜಪಕ್ಷೆ ಅವರಿಗೆ ಪತ್ರ ಬರೆದಿದ್ದಾರೆ.

೩. ಶ್ರೀಲಂಕಾದ ಸಂಸದ ಎಂ. ಗಣೇಶನ್ ಕೂಡ ಇದನ್ನು ವಿರೋಧಿಸಿ ಜೀವನೀಯನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.