|
ಪಾಕಿಸ್ತಾನವು ಇಂತಹ ಕಾನೂನನ್ನು ರಚಿಸಬಲ್ಲದು ಎಂದಾದರೆ, ಅದಕ್ಕಿಂತ ಹೆಚ್ಚು ಅಭಿವೃದ್ಧಿ ಹೊಂದಿದ ಭಾರತ ದೇಶದಲ್ಲಿ ಯಾಕೆ ಸಾಧ್ಯವಿಲ್ಲ ?
ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಅತ್ಯಾಚಾರಿಗಳನ್ನು ನಪುಂಸಕರನ್ನಾಗಿ ಮಾಡುವ ಕಾನೂನಿಗೆ ರಾಷ್ಟ್ರಪತಿಯವರು ಹಸ್ತಾಕ್ಷರ ಮಾಡಿದ್ದಾರೆ. ಹಾಗಾಗಿ ಈಗ ಅದನ್ನು ಕಾರ್ಯಾನ್ವಿತಗೊಳಿಸಲಾಗುವುದು. ಪದೇ ಪದೇ ಈ ರೀತಿಯ ಅಪರಾಧವನ್ನು ಮಾಡುವವರನ್ನು ನಪುಂಸಕರನ್ನಾಗಿಸಲಾಗುವುದು.
೧. ಈ ಹೊಸ ಕಾಯ್ದೆಯಲ್ಲಿ ಅತ್ಯಾಚಾರದಂತಹ ಗಂಭೀರ ಪ್ರಕರಣದಲ್ಲಿ ಭಾಗಿಯಾಗಿದ್ದವರ ರಾಷ್ಟ್ರೀಯ ನೊಂದಣಿ ಇಡಲಾಗುವುದು. ಅದೇರೀತಿ ಪೀಡಿತೆಯ ಗುರುತನ್ನು ರಹಸ್ಯವಾಗಿಡಲಾಗುವುದು ಎಂದು ನಿರ್ಧಾರ ಕೈಗೊಳ್ಳಲಾಗಿದೆ. ಅತ್ಯಾಚಾರದ ಪ್ರಕರಣಗಳ ಆಲಿಕೆಯು ಬೇಗನೇ ಆಗಬೇಕೆಂದು ದೇಶಾದ್ಯಂತ ವಿಶೇಷ ನ್ಯಾಯಾಲಯಗಳನ್ನು ಸಹ ನಿರ್ಮಿಸಲಾಗುವುದು. ೪ ತಿಂಗಳೊಳಗೆ ಇಂತಹ ಪ್ರಕರಣಗಳ ತೀರ್ಪನ್ನು ನೀಡಲಾಗುವುದು.
Convicted habitual rapists in Pakistan could be chemically castrated under new lawhttps://t.co/XNtx2o15P4
— India TV (@indiatvnews) December 15, 2020
೨. ಪೀಡಿತೆಯ ಗುರುತು ಘೋಷಿಸುವುದರ ಮೇಲೆ ನಿರ್ಬಂಧ ಇದೆ, ಆದರೆ ಅದನ್ನು ಬಹಿರಂಗ ಪಡಿಸಿದ್ದಲ್ಲಿ ಶಿಕ್ಷೆಯಾಗಬಹುದು. ಒಂದು ವೇಳೆ ಪೊಲೀಸ್ ಅಥವಾ ಸರಕಾರಿ ಅಧಿಕಾರಿಯವರಿಂದ ಯೋಗ್ಯ ರೀತಿಯಲ್ಲಿ ತನಿಖೆಯಾಗದೇ ಇದ್ದಲ್ಲಿ, ಅವರಿಗೆ ದಂಡ ಹಾಗೂ ೩ ವರ್ಷಗಳ ಸೆರೆಮನೆಯ ಶಿಕ್ಷೆ ವಿಧಿಸಲಾಗುವುದು, ಅದೇರೀತಿ ಪೊಲೀಸ್ ಅಥವಾ ಸರಕಾರಿ ಅಧಿಕಾರಿಗಳಿಗೆ ತಪ್ಪು(ಅಯೋಗ್ಯ) ಮಾಹಿತಿಯನ್ನು ನೀಡಿದವರಿಗೂ ಶಿಕ್ಷೆ ನೀಡಲಾಗುವುದು.