|
ಕೊಲಂಬೊ (ಶ್ರೀಲಂಕಾ) – ಶ್ರೀಲಂಕಾದಲ್ಲಿ ಕರೋನಾದಿಂದ ಮೃತಪಟ್ಟ ಪ್ರತಿಯೊಬ್ಬ ವ್ಯಕ್ತಿಯ ಮೃತದೇಹಕ್ಕೆ ಅಗ್ನಿಸಂಸ್ಕಾರ ಮಾಡುವಂತೆ ಸರಕಾರವು ಆದೇಶಿಸಿದೆ. ಈ ಕಾರಣದಿಂದ ಹಿಂದೂಗಳ ಸಹಿತ ಬೌದ್ಧರು, ಕ್ರೈಸ್ತರು ಮತ್ತು ಮುಸ್ಲಿಮರ ಶವಗಳನ್ನು ಸಹ ಅಗ್ನಿಸಂಸ್ಕಾರ ಮಾಡಲಾಗುತ್ತಿದೆ. ಈಗ ಮುಸಲ್ಮಾನರಿಂದ ಅದಕ್ಕೆ ಮತ್ತೆ ವಿರೋಧ ವ್ಯಕ್ತವಾಗುತ್ತಿದೆ. ಈವರೆಗೆ ಕರೋನಾದಿಂದ ಸಾವನ್ನಪ್ಪಿದ ೧೫ ಮುಸ್ಲಿಮರ ಶವಗಳಿಗೆ ಅಗ್ನಿಸಂಸ್ಕಾರ ನಡೆಸಲಾಗಿದೆ. ಇದರಲ್ಲಿ ೨೦ ದಿನಗಳ ಹಸುಗೂಸು ಸಹ ಇತ್ತು. ಆದ್ದರಿಂದ ಈ ನಿರ್ಧಾರಕ್ಕೆ ಈಗ ವ್ಯಾಪಕ ವಿರೋಧವಾಗುತ್ತಿದೆ. ಈ ಹಿಂದೆ ಇದರ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿಯೂ ಅರ್ಜಿ ಸಲ್ಲಿಸಲಾಗಿತ್ತು; ಆದರೆ ನ್ಯಾಯಾಲಯವು ಅದನ್ನು ತಿರಸ್ಕರಿಸಿತ್ತು.
Muslims in Sri Lanka 'denied justice' over forced cremations of Covid victims https://t.co/s6Xt6BSfD4
— The Guardian (@guardian) December 4, 2020
೧. ಏಪ್ರಿಲ್ ತಿಂಗಳಲ್ಲಿ ಕರೋನಾದ ಸೋಂಕು ಹೆಚ್ಚಾದಾಗ, ಬೌದ್ಧ ಭಿಕ್ಷುಗಳು ಕರೋನಾದಿಂದ ಮರಣ ಹೊಂದಿದವರ ಅಗ್ನಿಸಂಸ್ಕಾರ ಮಾಡಬೇಕು ಒಂದು ಒತ್ತಾಯಿಸಿದ್ದರು; ಕಾರಣ ದೇಹವನ್ನು ಹೂಳುವುದರಿಂದ ಭೂಮಿಯ ಅಂತರ್ಜಲವು ಕಲುಷಿತಗೊಂಡು ಈ ಮೂಲಕ ಕರೋನಾ ಸೋಂಕು ಮತ್ತಷ್ಟು ಹರಡಬಹುದು ಎಂದು ಹೇಳಲಾಗಿತ್ತು.
೨. ವಿದೇಶದಲ್ಲಿ ಶ್ರೀಲಂಕಾದ ಪ್ರಜೆಯು ಸತ್ತರೆ ಏನು ಮಾಡಬೇಕು ಎಂಬ ಪ್ರಶ್ನೆಯೂ ಇಲ್ಲಿ ಉದ್ಭವಿಸಿದೆ. ಶವಗಳನ್ನು ದೇಶಕ್ಕೆ ತರಿಸಲು ನಿರಾಕರಿಸುತ್ತಿದೆ. ಈ ಶವಗಳನ್ನು ಮಾಲ್ಡೀವ್ ದ್ವೀಪದಲ್ಲಿಯೇ ಹೂಳಲು ಶ್ರೀಲಂಕಾವು ಈಗ ಮಾಲ್ಡೀವ್ ಸರಕಾರದೊಂದಿಗೆ ಮಾತುಕತೆ ನಡೆಸುತ್ತಿದೆ.