ಭಾರತದ ವಿರುದ್ಧದ ಆಕ್ರಮಣಕಾರಿ ನಿಲುವನ್ನು ನಿಲ್ಲಿಸುವಂತೆ ಅಮೇರಿಕಾದಿಂದ ಚೀನಾಗೆ ಸಲಹೆ

ಅಮೇರಿಕಾದ ರಕ್ಷಣಾ ಮಸೂದೆಗೆ ಅಂಗಿಕಾರ

ಅಮೇರಿಕಾದ ಸಂಸತ್ತು

ವಾಶಿಂಗ್‌ಟನ್(ಅಮೇರಿಕಾ) – ಅಮೇರಿಕಾದ ಸಂಸತ್ತಿನಲ್ಲಿ ರಕ್ಷಣಾ ಮಸೂದೆಯನ್ನು ಅಂಗಿಕರಿಸಲಾಗಿದ್ದು ಇದರಲ್ಲಿ ಚೀನಾದ ಸರಕಾರದಿಂದ ಪ್ರತ್ಯಕ್ಷ ನಿಯಂತ್ರಣ ರೇಖೆಯ ಬಳಿ ಭಾರತದ ವಿರುದ್ಧ ನಡೆಯುತ್ತಿರುವ ಸೈನ್ಯದ ಆಕ್ರಮಣವನ್ನು ನಿಲ್ಲಿಸುವಂತೆ ಒತ್ತಾಯಿಸಲಾಗಿದೆ.

ರಾಜಾ ಕೃಷ್ಣಮೂರ್ತಿ

ಭಾರತೀಯ ಸಂಜಾತ ಅಮೇರಿಕಾದ ಶಾಸಕ ರಾಜಾ ಕೃಷ್ಣಮೂರ್ತಿಯವರು ಸಂಸತ್ತಿನಲ್ಲಿ ರಕ್ಷಣಾ ನೀತಿಯ ಮಸೂದೆಯಲ್ಲಿ ನಿಬಂಧನೆಗಳನ್ನು ಮಂಡಿಸಿದ್ದರು. ಅಮೇರಿಕಾದ ರಕ್ಷಣಾನೀತಿಯ ಮಸೂದೆಯಲ್ಲಿ ಈ ಅಂಶವು ಸಮಾವೇಶಗೊಳ್ಳುವುದು ಅಂದರೆ ಭಾರತಕ್ಕೆ ಅಮೇರಿಕಾದ ದೃಢವಾದ ಬೆಂಬಲವಿದೆ ಎಂಬುದು ಸಾಬೀತಾಗುತ್ತಿದೆ ಮತ್ತು ಚೀನಾಗೆ ಸ್ಪಷ್ಟವಾದ ಸಂದೇಶವಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.