ಪಾಕಿಸ್ತಾಮದಲ್ಲಿ ಅಲ್ಪಸಂಖ್ಯಾರ ಮೇಲಿನ ಅತ್ಯಾಚಾರದ ಬಗ್ಗೆ ಮಾಹಿತಿಯನ್ನು ನೀಡುವ ಮಾನವ ಹಕ್ಕುಗಳ ಆಯೋಗದ ಕಾರ್ಯಕರ್ತ ರಾಹತ ಆಸ್ಟಿನ್ ಇವರ ಮೇಲೆ ಮಾರಣಾಂತಿಕ ಹಲ್ಲೆ

ಮತಾಂಧರ ಜಿಹಾದಿ ವೃತ್ತಿಯನ್ನು ಬಹಿರಂಗಪಡಿಸುವವರನ್ನು ಮತಾಂಧರು ಎಂದಾದರೂ ಜೀವಂತವಾಗಿ ಬಿಡುತ್ತಾರೆಯೇ ? ಅಂತಹ ಮತಾಂಧರು ಮಾನವೀಯತೆಯ ಶತ್ರುಗಳಾಗಿದ್ದು ಜಗತ್ತು ಈಗ ಅವರ ವಿರುದ್ಧ ಒಂದಾಗಿ ಅವರ ಸರ್ವನಾಶಕ್ಕಾಗಿ ಪ್ರಯತ್ನ ಮಾಡಬೇಕು ಮತ್ತು ಈ ಕಾರ್ಯದಲ್ಲಿ ಭಾರತವು ನೇತೃತ್ವ ವಹಿಸಬೇಕು !

ವಕೀಲ ರಹತ್ ಆಸ್ಟಿನ್

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಮಾನವ ಹಕ್ಕುಗಳ ಕಾರ್ಯಕರ್ತ ಮತ್ತು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಜಗತ್ತಿಗೆ ಮಾಹಿತಿ ನೀಡುತ್ತಿರುವ ವಕೀಲರಾದ ರಹತ್ ಆಸ್ಟಿನ್ ಅವರ ಮೇಲೆ ಮತಾಂಧರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಪರಿಚಿತರು ‘ಅಲ್ಲಾಹು ಅಕಬರ್’ನ ಘೋಷಣೆಯನ್ನು ಕೂಗುತ್ತಾ ಚಾಕುವಿನಿಂದ ಅವರ ಮೇಲೆ ದಾಳಿ ಮಾಡಿರುವ ಘಟನೆ ಜನವರಿ ೫ ರಂದು ನಡೆದಿದೆ. ರಹತ್ ಆಸ್ಟಿನ್ ಈ ಮಾಹಿತಿಯನ್ನು ಸ್ವತಃ ಟ್ವೀಟ್ ಮಾಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ದಾಳಿಕೋರ ಯಾರು ಎಂದು ನನಗೆ ಗೊತ್ತಿಲ್ಲ’ ಎಂದು ಆಸ್ಟಿನ್ ಹೇಳಿದರು. ಆದರೆ ಅವರು ಮಧ್ಯಪ್ರಾಚ್ಯ ದೇಶದಿಂದ ಬಂದಿದ್ದರು. ನಾನು ನನ್ನನ್ನು ಕಾಪಾಡಿಕೊಳ್ಳದಿದ್ದರೆ, ಇತರರಿಗೆ ಮಾಡಿದಂತೆ ನನ್ನ ಶಿರಚ್ಛೇದ ಮಾಡುತ್ತಿದ್ದರು. ಈ ಜನರು ಜಗತ್ತಿನಲ್ಲಿ ಇಂತಹ ಕೆಲಸಗಳನ್ನು ಏಕೆ ಮಾಡುತ್ತಿದ್ದಾರೆ ? ನಾವು ಯಾವುದೇ ತಪ್ಪು ಮಾಡುತ್ತಿಲ್ಲ. ನಾನು ಸರಕಾರ ಮತ್ತು ಮುಸ್ಲಿಂ ಬಹುಸಂಖ್ಯಾತ ದೇಶಗಳಲ್ಲಿ ಧಾರ್ಮಿಕ ದೌರ್ಜನ್ಯ, ವರ್ಣಭೇದ ನೀತಿ, ನರಮೇಧ, ಧಾರ್ಮಿಕ ಹಿಂಸೆ ಇತ್ಯಾದಿಗಳ ಬಗ್ಗೆ ಮಾತ್ರ ವರದಿ ಮಾಡುತ್ತಿದ್ದೇನೆ. ಅವರು ಹಿಂಸಾಚಾರವನ್ನು ಜಿಹಾದ್ ಎಂದು ಮಾಡುತ್ತಿದ್ದಾರೆ.

(ಸೌಜನ್ಯ : OPindia)

೧೯೪೭ ರಲ್ಲಿ ಪಾಕಿಸ್ತಾನ ನಿರ್ಮಾಣವಾಯಿತು, ಆಗ ನಾವು (ಅಲ್ಪಸಂಖ್ಯಾತರು) ಶೇ. ೨೩ ರಷ್ಟಿದ್ದೇವು, ಈಗ ನಾವು ಕೇವಲ ಶೇ. ೩ ರಷ್ಟು ಮಾತ್ರ ಇದ್ದೇವೆ ಎಂದು ಹೇಳಿದರು.