ಹಂದಿಯ ಅಂಶವಿರುವ ಕೊರೋನಾದ ಲಸಿಕೆಗೆ ‘ಸಂಯುಕ್ತ ಅರಬ ಅಮಿರಾತ ಫತವಾ ಪರಿಷತ್ತ್’ನ ಒಪ್ಪಿಗೆ

ಭಾರತದ ಮುಸ್ಲಿಮರು ಅದೇ ರೀತಿ ಮಾಡುವ ನಿರೀಕ್ಷೆಯಿದೆ !

ಅಬುಧಾಬಿ (ಸಂಯುಕ್ತ ಅರಬ ಎಮಿರಾತ) – ಕೊರೋನಾ ಲಸಿಕೆಯಲ್ಲಿ ಹಂದಿಯ ಅಂಶ ಇರುವುದರಿಂದ ಮುಸಲ್ಮಾನರು ಅದರ ಮೇಲೆ ಬಹಿಷ್ಕಾರ ಹಾಕುವಂತೆ ಆಗ್ರಹಿಸುತ್ತಿರುವಾಗ ಸಂಯುಕ್ತ ಅರಬ ಅಮಿರಾತನ ಸರ್ವೋಚ್ಚ ಇಸ್ಲಾಮಿ ಸಂಸ್ಥೆ ‘ಸಂಯುಕ್ತ ಅರಬ ಅಮಿರಾತ ಫತವಾ ಪರಿಷತ್ತು’ವು ಕೊರೋನಾ ಲಸಿಕೆಯ ಬಗ್ಗೆ ಒಂದು ಮಹತ್ವಪೂರ್ಣ ನಿರ್ಧಾರವನ್ನು ತೆಗೆದುಕೊಳ್ಳುತ್ತಾ ‘ಕೊರೋನಾ ಲಸಿಕೆಯಲ್ಲಿ ಹಂದಿಯ ಅಂಶವನ್ನು ಉಪಯೋಗಿಸಿದ್ದರೂ, ಮಸಲ್ಮಾನರು ಆ ಲಸಿಕೆಯನ್ನು ತೆಗೆದುಕೊಳ್ಳಲು ಯಾವುದೇ ಅಭ್ಯಂತರವಿಲ್ಲ’, ಎಂದು ಹೇಳಿದೆ. ಮುಸಲ್ಮಾನರು ಹಂದಿಗೆ ಸಂಬಂಧಿಸಿದ ಯಾವುದೇ ಉತ್ಪನ್ನ ‘ಹರಾಮ’ ಎಂದು ತಿಳಿಯುತ್ತಾರೆ. ಲಸಿಕೆಯ ಉತ್ಪಾದನೆಯಲ್ಲಿ ಪೋರ್ಕ್ ಜಿಲೆಟಿನ್ (ಹಂದಿಯ ಅಂಶ) ಅನ್ನು ಉಪಯೋಗಿಸಲಾಗುತ್ತದೆ.

ಪರಿಷತ್ತಿನ ಅಧ್ಯಕ್ಷ ಶೇಖ ಅಬ್ದುಲ್ಲಾ ಬಿನ್

ಪರಿಷತ್ತಿನ ಅಧ್ಯಕ್ಷ ಶೇಖ ಅಬ್ದುಲ್ಲಾ ಬಿನ್ ಬಯ್ಯಾ ಅವರು, ಯಾವುದೇ ಪರ್ಯಾಯ ಲಭ್ಯವಿಲ್ಲದಿರುವಾಗ ಹಾಗೂ ಈ ಸಮಯದಲ್ಲಿ ಮನುಷ್ಯನ ಶರೀರದ ರಕ್ಷಣೆ ಮಾಡುವುದು ಹೆಚ್ಚು ಮಹತ್ವದ್ದಾಗಿರುವಾಗ, ಕೊರೋನಾದ ವಿಷಯದಲ್ಲಿ ‘ಪೋರ್ಕ್ ಜಿಲೆಟಿನ್’ ನನ್ನು ‘ಆಹಾರ’ ಎಂದು ತಿಳಿಯದೇ, ಅದು ಔಷಧಿ ಎಂದು ನೋಡಲಾಗುತ್ತದೆ ಎಂದು ಹೇಳಿದರು.